ಮೇಷ
ವೃತ್ತಿಯಲ್ಲಿ ಪ್ರಗತಿ. ಕಾರ್ಯಸಿದ್ಧಿ. ಕೌಟುಂಬಿಕ ಉನ್ನತಿಗೆ ನೀವು ಹಾಕುವ ಯೋಜನೆ ಸಫಲತೆ ಕಾಣುವುದು. ಬಂಧುಮಿತ್ರರ ಸಹಕಾರ.
ವೃಷಭ
ನಿಮಗಿಂದು ಪೂರಕ ದಿನವಲ್ಲ. ವೃತ್ತಿಯಲ್ಲಿ ಕಷ್ಟ ಎದುರಿಸುವಿರಿ. ವಾಗ್ವಾದದ ಸಂದರ್ಭದಲ್ಲಿ ಮೌನ ಕಾಯ್ದುಕೊಳ್ಳಿ. ಆರ್ಥಿಕ ಸಮಸ್ಯೆ.
ಮಿಥುನ
ಎಲ್ಲ ವಿಚಾರಗಳಲ್ಲಿ ತಾಳ್ಮೆ ತೋರಬೇಕು. ಮಾನಸಿಕ ಒತ್ತಡದಿಂದ ಗೊಂದಲ ಸೃಷ್ಟಿಸಿ ಕೊಳ್ಳುವಿರಿ. ಕೌಟುಂಬಿಕ ಬಿಕ್ಕಟ್ಟು ಸೃಷ್ಟಿ. ಅಸಹನೆ ಹೆಚ್ಚುವುದು.
ಕಟಕ
ಸಣ್ಣಪುಟ್ಟ ವಿಷಯಗಳಿಗೆ ಜಗಳ ಕಾಯದಿರಿ. ಅದರಿಂದ ನಿಮ್ಮ ಮನಸ್ಸಿಗೇ ಅಶಾಂತಿ. ಎಲ್ಲರ ಜತೆ ಹೊಂದಿಕೊಂಡು ಹೋಗುವುದೊಳಿತು.
ಸಿಂಹ
ನಿಮ್ಮ ಕನಸು ನನಸಾಗಬೇಕಾದರೆ ನೀವು ಕಠಿಣ ಶ್ರಮ ಪಡಬೇಕು. ಸುಲಭದಲ್ಲಿ ಕಾರ್ಯ ಮುಗಿಯದು. ಸಂಗಾತಿ ಜತೆಗೆ ವಾದ ನಡೆದೀತು. ಸಹನೆಯಿರಲಿ.
ಕನ್ಯಾ
ಖಾಸಗಿಯಾಗಿ ಮತ್ತು ವೃತ್ತಿಪರವಾಗಿ ಪ್ರಗತಿಯ ದಿನ. ಎಲ್ಲರೊಂದಿಗೆ ಸ್ನೇಹಯುತ ವರ್ತನೆ ತೋರಿ. ಅದರಿಂದ ನಿಮ್ಮ ಕೆಲಸವಾಗುವುದು. ಕೌಟುಂಬಿಕ ಶಾಂತಿ.
ತುಲಾ
ಕೆಲಸದಲ್ಲಿ ಪೂರ್ಣ ಗಮನ ಹರಿಸಿ. ಇಲ್ಲವಾದರೆ ಕೆಲಸ ಕೆಟ್ಟೀತು. ನಿಮಗೆ ತೊಂದರೆ ಸೃಷ್ಟಿಸಲೆಂದೇ ಕೆಲವು ಯತ್ನಿಸುತ್ತಿರುತ್ತಾರೆ.
ವೃಶ್ಚಿಕ
ಹೆಚ್ಚು ಖರ್ಚಿನ ಖರೀದಿ ಕಾರ್ಯಕ್ಕೆ ಮುಂದಾಗುವಿರಿ. ಮನೆಯಲ್ಲಿ ಉಂಟಾಗಿದ್ದ ಗೊಂದಲದ ಸ್ಥಿತಿ ನಿವಾರಣೆ ಆಗಲಿದೆ. ಸಮಾಧಾನ.
ಧನು
ಉಲ್ಲಾಸದ ದಿನ. ಕುಶಿ ಕೊಡುವ ಸಂಗತಿಗಳಿಂದ ಉತ್ಸಾಹ ತುಂಬುತ್ತೀರಿ. ಮನೆಯಲ್ಲಿ ಸಂಭ್ರಮದ ವಾತಾವರಣ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಯಶ.
ಮಕರ
ಕೌಟುಂಬಿಕ ಪ್ರವಾಸದ ಅವಕಾಶ ದೊರಕಬಹುದು. ಸಂಘಟಿತ ಕಾರ್ಯಕ್ಕೆ ಹೆಚ್ಚು ಆದ್ಯತೆ ಕೊಡಿ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ.
ಕುಂಭ
ಇಡೀ ದಿನ ಹಲವಾರು ವಿಷಯಗಳ ಹೊಣೆಗಾರಿಕೆ ನಿಮ್ಮ ಮೇಲೆ ಬೀಳುವುದು. ಅದನ್ನು ನಿಭಾಯಿಸಲು ಸೂಕ್ತ ನೆರವು ಪಡೆಯುವುದು ಅವಶ್ಯ.
ಮೀನ
ಕಾರ್ಯಗಳು ಸುಲಲಿತ. ಸಿಕ್ಕಿದ ಅವಕಾಶವನ್ನು ಉಪಯೋಗಿಸಿ. ಅದರಿಂದ ನಿಮ್ಮ ವ್ಯಕ್ತಿತ್ವ ಮತ್ತು ಜೀವನ ಮಟ್ಟ ಸುಧಾರಣೆ. ಆರ್ಥಿಕ ನೆರವು ಲಭ್ಯ.