SHOCKING | ಈಗಿನ ಮಕ್ಕಳಿಗೆ ಇಲ್ಲದ್ದೇ ಡಿಮ್ಯಾಂಡ್‌! ಐಫೋನ್‌ ಕೊಡಿಸಿಲ್ಲ ಎಂದು ಕೈ ಕೊಯ್ದುಕೊಂಡ ಬಾಲಕಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಈಗಿನ ಮಕ್ಕಳಿಗೆ ಫೋನ್‌ ಹುಚ್ಚು ಹೆಚ್ಚಾಗಿದೆ. ಎಲ್ಲರ ಬಳಿಯೂ ಫೋನ್‌ ಇದೆ ಹಾಗಾಗಿ ನನಗೂ ಫೋನ್‌ ಬೇಕು ಎನ್ನುವಂಥ ವಾತಾವರಣ ನಿರ್ಮಾಣ ಆಗಿದೆ. ಇಲ್ಲೊಬ್ಬ ಬಾಲಕಿ ಪೋಷಕರು ಐ ಫೋನ್‌ ಕೊಡಿಸಿಲ್ಲ ಎಂದು ಕೈ ಕೊಯ್ದುಕೊಂಡಿದ್ದಾಳೆ.

ಬಾಯ್‌ಫ್ರೆಂಡ್‌ ಜೊತೆ ಮಾತನಾಡುವ ಸಲುವಾಗಿ ಆಕೆ ತನ್ನ ಪೋಷಕರ ಬಳಿ 1.5 ಲಕ್ಷ ಮೌಲ್ಯದ ಐಫೋನ್‌ ಕೊಡಿಸುವಂತೆ ಕೇಳಿದ್ದು, ಇದಕ್ಕೆ ಒಲ್ಲೆ ಎಂದಿದ್ದಕ್ಕೆ ಆಕೆ ಕೋಪದಲ್ಲಿ ಬ್ಲೇಡ್‌ನಿಂದ ಕೈ ಕೊಯ್ದುಕೊಂಡಿದ್ದಾಳೆ. ಈ ಕುರಿತ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಯುವತಿ ತನ್ನ ಬಾಯ್‌ಫ್ರೆಂಡ್‌ ಜೊತೆ ಮಾತನಾಡುವ ಸಲುವಾಗಿ 1.5 ಲಕ್ಷ ಮೌಲ್ಯದ ಐಫೋನ್‌ ಕೊಡಿಸುವಂತೆ ಪೋಷಕರ ಬಳಿ ಕೇಳಿದ್ದಳು. ಮೂರು ತಿಂಗಳಿನಿಂದ ಆಕೆ ತನ್ನ ತಾಯಿಯ ಬಳಿ ಫೋನ್‌ ಕೊಡಿಸಿ ಎಂದು ಪೀಡಿಸುತ್ತಿದ್ದು, ಫೋನ್‌ ಕೊಡಿಸಿಲ್ಲ ಅಂದ್ರೆ ಬಾಯ್‌ಫ್ರೆಂಡ್‌ ಜೊತೆ ಓಡಿ ಹೋಗುವುದಾಗಿ ಕೂಡಾ ಹೇಳಿದ್ದಳು. ತಮ್ಮ ಬಳಿ ಅಷ್ಟು ಹಣ ಇಲ್ಲದಿದ್ದ ಕಾರಣ ಪೋಷಕರು ಆಕೆಗೆ ಫೋನ್‌ ಕೊಡಿಸಲು ನಿರಾಕರಿಸಿದ್ದಾರೆ. ಇದರಿಂದ ಮನನೊಂದ ಆಕೆ ಕೋಣೆಗೆ ಬೀಗ ಹಾಕಿ ಬ್ಲೇಡ್‌ನಿಂದ ತನ್ನ ಎಡಗೈ ಮಣಿಕಟ್ಟನ್ನು ಕೊಯ್ದುಕೊಂಡಿದ್ದಾಳೆ. ನಂತರ ಆಕೆಯನ್ನು ಆಸ್ಪತ್ರೆಗೆ ಕೊಂಡೊಯ್ದು ಸೂಕ್ತ ಚಿಕಿತ್ಸೆ ನೀಡಲಾಗಿದೆ. ಬಳಿಕ ಆಕೆ ಇನ್ನು ಮುಂದೆ ಇಂತಹ ಹುಚ್ಚು ಕೆಲಸಗಳನ್ನು ಮಾಡಲ್ಲ ಎಂದು ಭರವಸೆ ನೀಡಿದ್ದಾಳೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here