ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯ ಕಾರ್ಯಕ್ರಮ ಮನ್ ಕಿ ಬಾತ್ ಕುರಿತಾದ ಸಾಕ್ಷ್ಯಚಿತ್ರ ಇಂದು ಪ್ರದರ್ಶನವಾಗುತ್ತಿದೆ.
ಪ್ರತಿ ತಿಂಗಳ ಕಡೆಯ ಭಾನುವಾರ ಪ್ರಧಾನಿ ಮೋದಿ ಮನ್ ಕಿ ಬಾತ್‌ನಲ್ಲಿ ಮಾತನಾಡುತ್ತಾರೆ. ಪ್ರತಿ ತಿಂಗಳು ದೇಶದ ಅನೇಕ ವಿಷಯಗಳ ಬಗ್ಗೆ ಬೆಳಕು ಚೆಲ್ಲುತ್ತಾರೆ. ಇದೇ ಏ.30ರಂದು ಮನ್ ಕಿ ಬಾತ್ ಕಾರ್ಯಕ್ರಮ 100ನೇ ಸಂಚಿಕೆ ಪೂರೈಸಿದ್ದು, ಮನ್ ಕಿ ಬಾತ್ ಕಾರ್ಯಕ್ರಮ ಹುಟ್ಟಿದ್ದು ಹೇಗೆ? ಬೆಳೆದಿದ್ದು ಹೇಗೆ? ಪ್ರಧಾನಿ ಮೋದಿ ಅವರ ಆಲೋಚನೆಗಳೇನು ಎನ್ನುವ ಬಗೆಗಿನ ಸಾಕ್ಷ್ಯಚಿತ್ರ ಇದಾಗಿರಲಿದೆ.
ವಿಶೇಷವಾದ ಡಾಕ್ಯುಮೆಂಟರಿ ಇದಾಗಿದ್ದು, ಇಂದು ರಾತ್ರಿ 8 ಗಂಟೆಗೆ ಹಿಸ್ಟರಿ ಟಿವಿಯಲ್ಲಿ ಡಾಕ್ಯುಮೆಂಟರಿ ಪ್ರಸಾರವಾಗಲಿದೆ. ಒಂದು ಸುಂದರವಾದ ಕಾನ್ಸೆಪ್ಟ್ ಕಾರ್ಯಕ್ರಮವಾಗಿ ಬದಲಾಗಿದ್ದು, ದೇಶದ ಮೂಲೆ ಮೂಲೆಯನ್ನು ಹೇಗೆ ತಲುಪಿತು ಎನ್ನುವ ರೋಚಕತೆ ಈ ಸಾಕ್ಷ್ಯಚಿತ್ರದಲ್ಲಿದೆ.