ಮೇಷ
ಕೌಟುಂಬಿಕ ಪರಿಸರದಲ್ಲಿ ಆನಂದ. ಒತ್ತಡ, ಉದ್ವಿಗ್ನತೆ ಕಾಡದು. ಕೆಲವರಿಗೆ ವೈವಾಹಿಕ ಸಂಬಂಧ ಕೂಡಿಬಂದೀತು.
ವೃಷಭ
ಹಳೆಯ ಪರಿಚಿತರು ಭೇಟಿಯಾದಾರು. ಕೌಟುಂಬಿಕ ಪರಿಸರ ಸೌಹಾರ್ದಕರ. ಅಪೂರ್ಣ ಕಾರ್ಯವೊಂದು ಇಂದು ಪೂರ್ಣಗೊಳ್ಳಬಹುದು.
ಮಿಥುನ
ನಿಮ್ಮ ಕೆಲಸಕ್ಕೆ ಗಮನ ಕೊಡಿ. ಯಾರ ಬಗ್ಗೆಯೂ ಸಡಿಲ ಮಾತು ಬೇಡ. ಅದು ನಿಮ್ಮನ್ನು ಕಷ್ಟಕ್ಕೆ ದೂಡಬಹುದು. ಮನಸ್ಸು ಶಾಂತಪಡಿಸಿಕೊಳ್ಳಿ.
ಕಟಕ
ಯಾರದೇ ಜತೆಗಾದರೂ ಸಂಬಂಧ ಕಡಿಯುವುದಾದರೆ ಸೌಹಾರ್ದದಿಂದ ಮಾಡಿ. ವೈಷಮ್ಯ ಬೆಳೆಯಲು ಅವಕಾಶ ಕೊಡಬೇಡಿ.
ಸಿಂಹ
ದೈನಂದಿನ ಏಕತಾನತೆಯ ಬದುಕು. ಹೆಚ್ಚಿನ ವಿಶೇಷ ಘಟಿಸದು.ಮನೆಯವರ ಜತೆ ಹೊರಗೆ ಸಂತೋಷ ಕಂಡುಕೊಳ್ಳಲು ಪ್ರಯತ್ನಿಸಿರಿ.
ಕನ್ಯಾ
ನಿಮ್ಮಲ್ಲಿ ಎಲ್ಲವೂ ಸರಿಯಾಗಿದೆ. ಆದರೂ ಅತೃಪ್ತಿ. ದೊರಕದ್ದಕ್ಕೆ ಅತ್ಯಾಶೆ ಪಡುವುದೇ ಇದಕ್ಕೆ ಕಾರಣ. ವಾಸ್ತವ ಅರಿತು ವ್ಯವಹರಿಸಿ.
ತುಲಾ
ದಿನವಹಿ ಕಾರ್ಯವಲ್ಲದೆ ಹೆಚ್ಚುವರಿ ಹೊಣೆ ನಿಮ್ಮ ಮೇಲೆ ಬೀಳಲಿದೆ. ಹೊಸ ವ್ಯವಹಾರದಲ್ಲಿ ಹಣ ಹೂಡಿದರೆ ಲಾಭವಿದೆ.
ವೃಶ್ಚಿಕ
ಮನೆಯಲ್ಲಿ ಉದ್ವಿಗ್ನತೆ ಉಂಟಾದೀತು. ಆದರೆ ಸಮಾಧಾನದ ನಡೆಯಿಂದ ಅದನ್ನು ಪರಿಹರಿಸಬಹುದು. ಮಾತಿಗೆ ಮಾತು ಬೇಡ.
ಧನು
ಉತ್ಸಾಹದ ದಿನ. ಎಲ್ಲರ ಜತೆ ಸೌಹಾರ್ದ ದಿಂದ ವರ್ತಿಸಿ. ಕಷ್ಟದ ಕಾಲ ಪರಿಹಾರವಾಗುವ ಸಮಯ ಬಂದಿದೆ. ಸಮಾಧಾನದಿಂದಿರಿ.
ಮಕರ
ನಿಮ್ಮ ನಡೆನುಡಿ ಇತರರಲ್ಲಿ ವಿಶ್ವಾಸ ತುಂಬಿಸುವಂತಿರಲಿ. ಬೇರೆಯವರ ಮನದಲ್ಲೂ ನೆಗೆಟಿವ್ ಚಿಂತನೆ ಬಿತ್ತಬೇಡಿ.
ಕುಂಭ
ನಿಮ್ಮ ಭಾವನೆ ವ್ಯಕ್ತಪಡಿಸಲು ಹಿಂಜರಿಕೆ ಬೇಡ. ಸೂಕ್ತ ವ್ಯಕ್ತಿಯಿಂದ ಪೂರಕ ಸ್ಪಂದನೆ ಸಿಗಲಿದೆ. ಖರ್ಚು ಕಡಿಮೆ ಮಾಡಲು ಗಮನ ಕೊಡಿ.
ಮೀನ
ಆರ್ಥಿಕ ವಿಷಯಕ್ಕೆ ಸಂಬಂಽಸಿ ಕುಟುಂಬಸ್ಥರ ಸಲಹೆ ಪಡೆಯಿರಿ.ಕೌಟುಂಬಿಕ ಭಿನ್ನಮತ ಪರಿಹರಿಸಲು ಹೆಚ್ಚು ಗಮನ ಕೊಡಿ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ