ದಿನಭವಿಷ್ಯ| ಈ ರಾಶಿಯವರಿಂದು ಧಾರ್ಮಿಕ ಕಾರ್ಯದಲ್ಲಿ ಹೆಚ್ಚು ತೊಡಗಿಕೊಳ್ಳುವಿರಿ..

ದಿನಭವಿಷ್ಯ

ಮೇಷ
ಸುಲಭವೆಂದು ಭಾವಿಸಿದ ವಿಷಯವೊಂದು  ಕಷ್ಟವಾದೀತು. ಇದರಿಂದ ಅನವಶ್ಯ ಒತ್ತಡಕ್ಕೆ ಸಿಲುಕುವಿರಿ. ಕೌಟುಂಬಿಕ ಬೇಡಿಕೆಗಳು ಹೆಚ್ಚುತ್ತವೆ. ಅಕ ಖರ್ಚು.

ವೃಷಭ
ಪ್ರವಾಹದ ವಿರುದ್ಧವಾಗಿ ಈಜಲು ಹೋಗಬೇಡಿ.  ಪರಿಸ್ಥಿತಿಗೆ ನೀವೇ ಹೊಂದಾಣಿಕೆ ಮಾಡಿಕೊಳ್ಳಬೇಕು. ಅದರಿಂದ ಹೆಚ್ಚು ಕಷ್ಟ ತಪ್ಪಬಹುದು.

ಮಿಥುನ
ಕೌಟುಂಬಿಕ ಸಂಘರ್ಷ ಉಂಟಾದೀತು. ಭಿನ್ನಮತ ಪರಿಹರಿಸಲು ಆದ್ಯತೆ ಕೊಡಿ. ನನ್ನದೇ ನಿಲುವು ಸರಿಯೆಂಬ ಜಿಗುಟು ಸ್ವಭಾವ ಬಿಡಬೇಕು. ಹೊಂದಾಣಿಕೆ ಮುಖ್ಯ.

ಕಟಕ
ಕ್ಲಿಷ್ಟಕರ ಪರಿಸ್ಥಿತಿಗೆ ಸಿಲುಕಿದರೂ ಪ್ರಸಂಗವಧಾನತೆ ನಿಮ್ಮನ್ನು ಕಾಪಾಡುತ್ತದೆ. ಇತರರ ನೆರವೂ ನಿಮಗೆ ಒದಗಿಬರುವುದು. ಖರ್ಚು ಕಡಿಮೆ ಮಾಡಿ.

ಸಿಂಹ
ಆತ್ಮೀಯ ಕೌಟುಂಬಿಕ ಪರಿಸರ. ಇದರಿಂದ ನಿಮ್ಮ ದಿನವು ನಿರಾಳವಾಗಿ ಮತ್ತು ಸಂತೋಷದಿಂದ ಕಳೆಯುವುದು. ಬಂಧುಗಳಿಂದ ಒಳ್ಳೆಯ ಸುದ್ದಿ ಸಿಗಬಹುದು.

ಕನ್ಯಾ
ಧಾರ್ಮಿಕ ಕಾರ್ಯದಲ್ಲಿ ಹೆಚ್ಚು ತೊಡಗಿಕೊಳ್ಳುವ ಅವಕಾಶ. ಸಾಮಾಜಿಕ ಚಟುವಟಿಕೆಯಿಂದ ಹಲವರ ಪರಿಚಯ. ಕೌಟುಂಬಿಕ ಸಮಾಧಾನ, ಸಮರಸತೆ.

ತುಲಾ
ಸಣ್ಣಪುಟ್ಟ ವಿವಾದ, ಜಗಳಗಳಿಂದ ದೂರವಿರಿ. ಇಲ್ಲವಾದಲ್ಲಿ ನಿಮ್ಮ ಮನಶ್ಯಾಂತಿ ಹಾಳಾದೀತು. ವದಂತಿ ಹರಡುವವರನ್ನು ಹತ್ತಿರ ಬಿಡಬೇಡಿ.

ವೃಶ್ಚಿಕ
ಆರ್ಥಿಕ ಹೊರೆ ಹೇರುವಂತಹ ಪ್ರಸಂಗ ಉಂಟಾದೀತು. ಅದನ್ನು ಸಮಾಧಾನದಿಂದ ನಿಭಾಯಿಸಿ. ಸೂಕ್ತ ಆರ್ಥಿಕ ನೆರವು ನಿಮಗೆ ಒದಗಲಿದೆ.

ಧನು
ಕೌಟುಂಬಿಕ ಸಾಮರಸ್ಯ. ಆಪ್ತರಿಂದ ಹಿತಕರ ಸಂದೇಶ. ಆರ್ಥಿಕ ಸಮಸ್ಯೆಯೊಂದು ಇಂದು ಪರಿಹಾರ ಕಾಣುವುದು. ಅವಯ ನೆರವು ಲಭ್ಯ.

ಮಕರ
ಮಹತ್ವದ ಕಾರ್ಯವೊಂದರ ಹೊಣೆಗಾರಿಕೆ ನಿಮ್ಮ ಹೆಗಲೇರುವುದು. ಅದನ್ನು ನಿಭಾಯಿಸಲು ತುಸು ಕಷ್ಟ ಪಡಬೇಕಾಗಬಹುದು.

ಕುಂಭ
ಸಕಾಲದಲ್ಲಿ ನಿಮ್ಮ ಕಾರ್ಯ ಮುಗಿಸಿ. ಇಲ್ಲವಾದರೆ ಕೆಲಸದ ಹೊರೆ ಹೆಚ್ಚಲಿದೆ. ಬಂಧುಗಳ ಜತೆಗಿನ ಸಂಬಂಧ ಹಾಳಾಗುವ ಪ್ರಸಂಗ ಒದಗೀತು.

ಮೀನ
ಕುಟುಂಬ ಸದಸ್ಯರ ಸಮ್ಮುಖದಲ್ಲಿ ಹೆಚ್ಚು ಕಾಲ ಕಳೆಯುವ ಅವಕಾಶ. ಸಂತೋಷ ಹೆಚ್ಚಿಸುವ ಪ್ರಸಂಗ ಸಂಭವಿಸುವುದು. ಆರ್ಥಿಕ ಲಾಭ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!