ದಿನಭವಿಷ್ಯ| ಇಂದು ಈ ರಾಶಿಯವರ ವೃತ್ತಿಯಲ್ಲಿ ಅನಿರೀಕ್ಷಿತ ಅಡ್ಡಿ….

ದಿನಭವಿಷ್ಯ

ಮೇಷ
ಫಲಪ್ರದ ದಿನ. ಕಾರ್ಯ ಸಲೀಸು. ಸಾಮಾಜಿಕ ಹಾಗೂ ಇನ್ನಿತರ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಹುಮ್ಮಸ್ಸು.  ಕೌಟುಂಬಿಕ ಪರಿಸ್ಥಿತಿ ಸಮಾಧಾನಕರ.

ವೃಷಭ
ಇಂದು ನೀವೆಸಗುವ ಕಾರ್ಯದಲ್ಲಿ ಸಂತೋಷ ಕಾಣುವಿರಿ. ಕೆಲಸ ಸುಲಲಿತವಾಗಿ ಸಾಗುವುದು. ಮನೆ ಯಲ್ಲೂ ಹರ್ಷದ ವಾತಾವರಣ.

ಮಿಥುನ
ವೃತ್ತಿ ಕ್ಷೇತ್ರದಲ್ಲಿನ ಕೆಲವು ಬದಲಾವಣೆಗಳು ನಿಮಗೆ ಒಳಿತು ತರಲಿವೆ. ಆರ್ಥಿಕ ಲಾಭ. ಆಪ್ತರ ಜತೆಗಿನ ಸಂಬಂಧ ವೃದ್ಧಿ. ಭಿನ್ನಮತ ನಿವಾರಣೆ. ಆರೋಗ್ಯ ಸುಸ್ಥಿರ.

ಕಟಕ
ಹೊಸ ಕೆಲಸ ಆರಂಭಿಸುವ ಮುನ್ನ ಹಳೆಯ ಕೆಲಸ ಮುಗಿಸಿರಿ. ಕೆಲವರು ನಿಮ್ಮ ಕೆಲಸ ಕೆಡಿಸಲೆಂದೇ ಯತ್ನಿಸುತ್ತಾರೆ. ಅವರನ್ನು ದೂರವಿಡಿ.

ಸಿಂಹ
ಹೆಚ್ಚು ಭಾವುಕರಾಗಿ ವರ್ತಿಸುವಿರಿ. ಇತರರ ಜತೆಗಿನ ಸಂಬಂಧದಲ್ಲಿ ಇದು ನಿಚ್ಚಳವಾಗುವುದು. ಸಂಘರ್ಷದಿಂದ ದೂರವಿರಿ.

ಕನ್ಯಾ
ಮನೆಯಲ್ಲಿ ಉತ್ತಮ ವಾತಾವರಣ. ಸೌಹಾರ್ದಮಯ. ಇದರಿಂದ ನಿಮ್ಮ ವೃತ್ತಿಯ ಮೇಲೂ ಸಕಾರಾತ್ಮಕ ಪರಿಣಾಮ ಉಂಟಾಗುವುದು.

ತುಲಾ
ಕುಟುಂಬ ಸದಸ್ಯರು ಸಲಹೆ ನೀಡಲು ಬಂದರೆ ರೇಗದಿರಿ. ಅವರು ನಿಮ್ಮ ಒಳಿತನ್ನೆ ಬಯಸುತ್ತಾರೆ ಎಂಬುದನ್ನು ಅರಿಯಿರಿ. ನೆರೆಮನೆಯವರ ಜತೆ ಜಗಳಕ್ಕೆ ಹೋಗದಿರಿ.

ವೃಶ್ಚಿಕ
ಕೆಲಸದಲ್ಲಿ ಅನಿರೀಕ್ಷಿತ ಅಡ್ಡಿ. ಇದು ನಿಮ್ಮನ್ನು ದಿಗ್ಭ್ರಮೆಗೆ ತಳ್ಳುವುದು. ಕುಟುಂಬಸ್ಥರ ಜತೆ ತಿಳುವಳಿಕೆಯಿಂದ ವರ್ತಿಸಿ, ದುಡುಕಿನಿಂದ ಫಲವಿಲ್ಲ.

ಧನು
ಕೌಟುಂಬಿಕ ಬೇಡಿಕೆ ಈಡೇರಿಸಲು ಗಮನ ಕೊಡಿ. ಕುಟುಂಬಸ್ಥರಿಗೆ ನಿರಾಶೆ ಉಂಟು ಮಾಡದಿರಿ. ದೂರ ಪ್ರಯಾಣದ ಸಾಧ್ಯತೆಯಿದೆ.

ಮಕರ
ನಿಮ್ಮ ಅರಿವು ಹೆಚ್ಚಿಸಬಲ್ಲ ವ್ಯಕ್ತಿಗಳನ್ನು ಭೇಟಿಯಾಗುವಿರಿ. ನಿಮ್ಮ ಸಾಮರ್ಥ್ಯದ ಕುರಿತು ವಿಶ್ವಾಸವಿರಲಿ. ಇತರರ ಸಮ್ಮುಖದಲ್ಲಿ ಕೀಳರಿಮೆ ಇಟ್ಟುಕೊಳ್ಳದಿರಿ.

ಕುಂಭ
ಕೆಲಸದಲ್ಲಿ ಕೆಲವು ತಪ್ಪುಗಳು ಘಟಿಸಬಹುದು. ಹಾಗಾಗಿ ಎಚ್ಚರ ವಹಿಸಿ.  ಮನೆಯಲ್ಲಿ ಮಾತಿನಲ್ಲಿ ತಾಳ್ಮೆಯಿರಲಿ, ಅನವಶ್ಯ ವಾಗ್ವಾದ ತಪ್ಪಿಸಿರಿ.

ಮೀನ
ಆರ್ಥಿಕವಾಗಿ ನಿಮಗೆ ಪೂರಕ ದಿನ. ವ್ಯವಹಾರದಲ್ಲಿ ಯಶಸ್ಸು. ಶೇರು ಹೂಡಿಕೆಯಿಂದ ಲಾಭವಾಗಲಿದೆ. ಕೌಟುಂಬಿಕ ನೆಮ್ಮದಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!