Sunday, June 4, 2023

Latest Posts

ದಿನಭವಿಷ್ಯ: ಕನಸು ಕಾಣುವುದು ತಪ್ಪಲ್ಲ, ಅದನ್ನು ನನಸಾಗಿಸಲು ಪರಿಶ್ರಮವೂ ಅವಶ್ಯ!

ಗುರುವಾರ, 13 ಜನವರಿ 2022, ಮಂಗಳೂರು

ಮೇಷ
ಕನಸು ಕಾಣುವುದು ತಪ್ಪಲ್ಲ. ಅದನ್ನು ನನಸಾಗಿಸಲು ಪರಿಶ್ರಮವೂ ಅವಶ್ಯ ಇದನ್ನು ನೀವು ಅರಿಯಬೇಕು. ತಾನಾಗಿ ಸಫಲತೆ ಸಿಗಲಾರದು.

ವೃಷಭ
ನಿಮ್ಮ ಸುತ್ತಲಿನ ಬದಲಾವಣೆಗೆ ಹೊಂದಿಕೊಳ್ಳಲು ಕಲಿಯಿರಿ. ಅದುವೇ ಪ್ರಗತಿಗೆ ದಾರಿ. ನಿಮ್ಮದೇ ಹಠ ಸಾಸಲು ಹೋಗದಿರಿ.

ಮಿಥುನ
ನಿಮ್ಮ ಸುತ್ತಲಿನ ವಿವಿಧ ಸನ್ನಿವೇಶ ಮತ್ತು ವಿವಿಧ ಜನರೊಂದಿಗೆ ಹೊಂದಿಕೊಳ್ಳಲು ಕಷ್ಟಪಡುವಿರಿ. ಅವನ್ನು ಕಡೆಗಣಿಸಲೂ ಆಗದಂತಹ ಸ್ಥಿತಿ.

ಕಟಕ
ಹಲವು ಕಾರ್ಯಗಳು ಒಂದೇ ಬಾರಿ ತಲೆಮೇಲೆ ಏರಿ ಕೂರುತ್ತವೆ. ಅದರಿಂದ ವಿಚಲಿತರಾಗದಿರಿ. ಶಾಂತಚಿತ್ತದಿಂದ ಅವನ್ನು ಕೈಗೊಳ್ಳಿರಿ.

ಸಿಂಹ
ಆರ್ಥಿಕ ಸಮಸ್ಯೆ ಕಾಡುವುದು. ಕೆಲವು ಬೇಡಿಕೆಗಳನ್ನು ಈಡೇರಿಸಲೇ ಬೇಕು. ಸೂಕ್ತ ನೆರವು ನಿಮಗೆ ದೊರಕುವುದು. ಹಾಗಾಗಿ ಚಿಂತೆ ಬೇಡ.

ಕನ್ಯಾ
ಬಂಧುಬಳಗದೊಂದಿಗೆ ನೆರವು ಕೇಳಲು ಹಿಂಜರಿಕೆ ಬೇಡ. ಏಕೆಂದರೆ ಇಂದು ನಿಮಗೆ ಅಂತಹ ನೆರವು ಅಗತ್ಯ ಬೀಳಲಿದೆ. ಆರ್ಥಿಕ ಒತ್ತಡ.

ತುಲಾ
ಹೊಣೆಗಾರಿಕೆ ಹೆಚ್ಚಳ. ಮನೆಯಲ್ಲಿ ಹಲವಾರು ಕಾರ್ಯ ಪೂರೈಸಬೇಕಾದ ಒತ್ತಡ. ಶಾಂತಮನದಿಂದ ಕಾರ್ಯಾಚರಿಸಿ. ಉದ್ವಿಗ್ನಗೊಳ್ಳದಿರಿ.

ವೃಶ್ಚಿಕ
ಪರಿಸ್ಥಿತಿ ನಿಮಗೆ ಪೂರಕವಾಗಿರದಿದ್ದರೆ ಚಿಂತಿಸಬೇಡಿ. ಅದು ತಾತ್ಕಾಲಿಕ ಸ್ಥಿತಿ. ಬೇಗನೆ ಎಲ್ಲವೂ ನಿಮಗೆ ಅನುಕೂಲಕರವಾಗಿ ಪರಿಣಮಿಸುವುದು.

ಧನು
ಕುಟುಂಬ ಸದಸ್ಯರ ಜತೆ ಬೆರೆಯುವ ಅವಕಾಶ. ಒತ್ತಡವು ಮನಸ್ಸಿನ ಶಾಂತಿ ಕದಡಲು ಅವಕಾಶ ಕೊಡದಿರಿ.  ಸೈರಣೆಯಿಂದ ಎಲ್ಲವನ್ನು ನಿಭಾಯಿಸಿ.

ಮಕರ
ವೃತ್ತಿಯಲ್ಲಿ ನಿಮ್ಮ ಜವಾಬ್ದಾರಿ ಹೆಚ್ಚುವುದು. ಇತರರ ಕಾರ್ಯಕ್ಕೂ ನೀವೇ ಹೊಣೆಗಾರ ಆಗುವಿರಿ. ಆರೋಗ್ಯದ ಸಮಸ್ಯೆಯೂ ಕಾಡಬಹುದು.

ಕುಂಭ
ಹಣದ ವಿಚಾರದಲ್ಲಿ ಹೆಚ್ಚು ರಿಸ್ಕ್ ತೆಗೆದುಕೊಳ್ಳಲು ಹೋಗಬೇಡಿ. ನಿಮಗೆ ಪ್ರತಿಕೂಲವಾದೀತು. ದೊಡ್ಡ ಖರ್ಚು ತಪ್ಪಿಸಲು ಪ್ರಯತ್ನಿಸಿ.

ಮೀನ
ನಿಮ್ಮ ನಿಲುವಿಗೇ ಅಂಟಿಕೊಂಡು ಕುಟುಂಬದ ಸೌಹಾರ್ದ ಹಾಳು ಮಾಡದಿರಿ. ಇತರರ ಅಭಿಪ್ರಾಯಕ್ಕೂ ಮನ್ನಣೆ ಕೊಡಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!