Wednesday, September 10, 2025

ದಿನಭವಿಷ್ಯ: ಇಂದು ನಿಮಗೆ ಸತ್ಯವೊಂದು ಅರಿವಿಗೆ ಬರಲಿದೆ, ಖುಷಿಯ ದಿನ

ಮೇಷ
ಹೊಸ ಸವಾಲು ಕಾಡಲಿದೆ. ಅದನ್ನು ಎದುರಿಸುವ ಛಲವೂ ಹೆಚ್ಚುವುದು. ಅದು ನಿಮ್ಮ ಸಹಜ ಗುಣ. ಸಮಸ್ಯೆಗೆ ಅಂಜಿ ಹೆದರಿ ಓಡದಿರಿ.    
ವೃಷಭ
ಪ್ರತಿಕೂಲ ಪರಿಸ್ಥಿತಿ ಬಂದಾಕ್ಷಣ ಭಯಪಡಬೇಡಿ. ಅದನ್ನು ಎದುರಿಸಿ. ಕೊನೆಯ ಗೆಲುವು ನಿಮ್ಮದೆ. ಆರ್ಥಿಕ ಉನ್ನತಿ ಸಾಧಿಸುವಿರಿ.  ಮಿಥುನ
ಹಣ ಹೆಚ್ಚು ಖರ್ಚಾದೀತು. ಆದರೆ ಅದು ಒಳಿತಿಗೇ ಆಗಲಿದೆ ಎಂಬ ಸಮಾಧಾನ ನಿಮಗೆ. ಕೌಟುಂಬಿಕ ಒತ್ತಡ ಹೆಚ್ಚಲಿದೆ.    
ಕಟಕ
ಅಸಹನೆ ಹೆಚ್ಚು. ಯಾವುದೇ ವಿಷಯದಲ್ಲಿ ಶಾಂತವಾಗಿ ಕಾಯುವ ತಾಳ್ಮ್ಮೆ ನಿಮಗಿಲ್ಲ. ವೃತ್ತಿಯಲ್ಲಿ ಸಮಸ್ಯೆ ಉಂಟಾಗಲಿದೆ.    
ಸಿಂಹ
ನಿಮ್ಮ ಸುತ್ತಲಿನ ವ್ಯಕ್ತಿಗಳ ಜತೆ ಸಂಬಂಧ ಸುಧಾರಣೆ ನಿಮ್ಮ ಗುರಿ. ಆದರೆ ಅವರಿಂದ ಪೂರಕ ಸ್ಪಂದನೆ ಕಾಣದು. ಕೆಲ ಸತ್ಯ ಕಹಿಯೆನ್ನಿಸಬಹುದು.      
ಕನ್ಯಾ
ಯಾವುದೋ ವಿಚಾರದಲ್ಲಿ ಗೊಂದಲದ ಮನಸ್ಥಿತಿ. ದೃಢ ನಿಲುವು ತಾಳಿ. ಕೆಲಸದ ಒತ್ತಡ ಅಽಕವಿದ್ದರೂ  ದಿನದಂತ್ಯಕ್ಕೆ ತೃಪ್ತಿ.  
ತುಲಾ
ನೀವಿಂದು  ಅಸಹಜ ವರ್ತನೆ ತೋರುವ  ಮೂಲಕ ಕೆಲವರಿಗೆ ಅಚ್ಚರಿ ಸೃಷ್ಟಿಸುವಿರಿ.ಯಾವುದೇ ವಿಚಾರದಲ್ಲಿ  ಆತುರದ ತೀರ್ಮಾನ ಸಲ್ಲದು.  
ವೃಶ್ಚಿಕ
ನೆಗೆಟಿವ್ ಚಿಂತನೆ ಮಾಯವಾಗಿ ಮನಸ್ಸು ನಿರಾಳವಾಗಲಿದೆ. ಆರ್ಥಿಕ ಸ್ಥಿತಿ ಸುಧಾರಣೆ. ಬಯಸಿದ ಬದಲಾವಣೆ
ಸಂಭವಿಸುವುದು.                  
ಧನು
ನಿಮ್ಮ ಪ್ರೀತಿಪಾತ್ರರ ಹಿತಾಸಕ್ತಿಗೆ ಗಮನ ಹರಿಸಿ. ಉದ್ದೇಶ ಸಾಽಸಲಾಗದೆ ಅಸಹನೆ ಹೆಚ್ಚುವುದು. ಸಂಯಮ ಅಗತ್ಯ.  ಹೊಂದಾಣಿಕೆ ಮುಖ್ಯ.  
ಮಕರ
ಇತರರು ಹರಡುವ ವದಂತಿಗಳಿಗೆ ಕಿವಿಗೊಡದಿರಿ. ಇತರರು ಸೃಷ್ಟಿಸಿದ ಸಮಸ್ಯೆ ನೀವು ಪರಿಹರಿಸಬೇಕಾದೀತು. ತಾಳ್ಮೆಯಿಂದ ವ್ಯವಹರಿಸಿ.  
ಕುಂಭ
ಸಣ್ಣ ವಿಷಯಗಳಿಗೆ ಅತಿಯಾಗಿ ಚಿಂತಿಸುತ್ತಾ ಮಹತ್ವದ ವಿಷಯ ಕಡೆಗಣಿಸಿದ್ದೀರಿ. ಇನ್ನಾದರೂ ಅದರತ್ತ ಗಮನ ಹರಿಸಿ.          
 ಮೀನ
ಕೈಗೊಂಡ ಕಾರ್ಯವೊಂದರ ಪಶ್ಚಾತ್ ಪರಿಣಾಮ ಎದುರಿಸುವಿರಿ. ಅದು ಒಳಿತೂ ತರುವ ಸಾಧ್ಯತೆಗಳಿವೆ.  

ಇದನ್ನೂ ಓದಿ