ದಿನಭವಿಷ್ಯ: ಈ ರಾಶಿಯವರಿಗೆ ಮಾಡುವ ಕೆಲಸದಲ್ಲಿ ಸಂತೋಷ ಇದೆ, ಆದರೆ ಹಣವಿಲ್ಲ!

ದಿನಭವಿಷ್ಯ

ಮೇಷ
ನೀವು ಮಾಡುವ ಕೆಲಸದಲ್ಲಿ ಸಂತೋಷ ಕಾಣುವಿರಿ. ಆದರೆ ಹಣದ ಕೊರತೆ ಅನುಭವಿಸುವಿರಿ. ವಸ್ತು ಖರೀದಿ ಉತ್ಸಾಹಕ್ಕೆ ತಣ್ಣೀರು.

ವೃಷಭ
ದಿನವಿಡೀ ಕಾರ್ಯದೊತ್ತಡ. ವೃತ್ತಿಗೆ ಸಂಬಂಸಿ ಅನಪೇಕ್ಷಿತ ಬೆಳವಣಿಗೆ. ಖಾಸಗಿ ಬದುಕಲ್ಲಿ ಅಹಿತಕರ ಪ್ರಸಂಗ ಉಂಟಾದೀತು.

ಮಿಥುನ
ವೃತ್ತಿಯಲ್ಲಿ ಫಲಪ್ರದ ದಿನ. ಉದ್ಯೋಗ ಬದಲಾವಣೆ ಬಯಸುವವರಿಗೆ ಶುಭ ಸುದ್ದಿ. ಸಂಗಾತಿ ಜತೆಗೆ ಉತ್ತಮ ಹೊಂದಾಣಿಕೆ. ಭಿನ್ನಮತ ನಿವಾರಣೆ.

ಕಟಕ
ಯಶಸ್ವೀ ದಿನ. ಖಾಸಗಿಯಾಗಿಯೂ ವೃತ್ತಿಯಲ್ಲಿಯೂ ನೀವು ಬಯಸಿದ ಬೆಳವಣಿಗೆ. ಆರೋಗ್ಯಕ್ಕೆ ಸಂಬಂಸಿ ತುಸು ಆತಂಕ. ಆರ್ಥಿಕ ಸುಧಾರಣೆ.

ಸಿಂಹ
ನಿರಾಳ ದಿನ. ಕೆಲಸದ ಒತ್ತಡವಿಲ್ಲ. ಇರುವ ಕೆಲಸವನ್ನು ಸುಲಭದಲ್ಲಿ ಮುಗಿಸುವಿರಿ. ಹಣದ ವಿಷಯಕ್ಕೆ ಸಂಬಂಸಿ ಖುಶಿ ತರುವ ಬೆಳವಣಿಗೆ.

ಕನ್ಯಾ
ನಿಮ್ಮ ಶ್ರಮಕ್ಕೆ ಫಲ ದೊರಕುವುದು ನಿಧಾನವಾಗುತ್ತದೆ. ಹಾಗಾಗಿ ಯೋಜಿಸಿ ಮುನ್ನಡೆಯಿರಿ. ಕೆಲಸ ವಿಫಲವಾಯಿತೆಂದು ಈಗಲೇ ಹತಾಶೆ ಬೇಡ.

ತುಲಾ
ಖಾಸಗಿ ಬದುಕಿನ ಕೆಲವು ಸಮಸ್ಯೆಗಳನ್ನು ಬಗೆಹರಿಸಲು ಆದ್ಯತೆ ಕೊಡಿ. ವೃತ್ತಿಯಲ್ಲಿ  ಏಳು ಬೀಳು ಎರಡನ್ನೂ ಅನುಭವಿಸುವಿರಿ. ಆರ್ಥಿಕ ಒತ್ತಡ.

ವೃಶ್ಚಿಕ
ಯಶಸ್ಸು ಸುಲಭವಾಗಿ ನಿಮ್ಮ ಕೈಸೇರುವುದು. ನಿಮ್ಮ ಪ್ರತಿಭೆಯ ಪ್ರದರ್ಶನಕ್ಕೆ ಅವಕಾಶ ದೊರಕುವುದು. ಮನೆಯ ಸದಸ್ಯರ ಜತೆ ಅನವಶ್ಯ ವಾದಕ್ಕೆ ಹೋಗದಿರಿ.

ಧನು
ಸಂತೋಷದ ದಿನ. ಕೆಲಸದ ಒತ್ತಡದಿಂದ ಮುಕ್ತಿ. ಸಂಬಂಧದಲ್ಲಿ ಹೊಂದಾಣಿಕೆ. ನಿಮ್ಮಲ್ಲಿ ಇರುವ ಹಣದಲ್ಲೆ  ತೃಪ್ತಿ ಕಂಡುಕೊಳ್ಳಿ. ಇತರರ ಜತೆ ತುಲನೆ ಬೇಡ.

ಮಕರ
ಆರಂಭಿಸಬೇಕಿದ್ದ ಮುಖ್ಯ ಕಾರ್ಯವನ್ನು ಮುಂದೂಡ ಬೇಕಾದೀತು. ಕೆಲಸದ ಒತ್ತಡದಿಂದ ನಿಮ್ಮಿಂದ ಕೆಲವು ತಪ್ಪುಗಳು ಘಟಿಸಬಹುದು.

ಕುಂಭ
ಕೆಲಸದಲ್ಲಿ ನಿಮ್ಮ ಮೇಲೆ ಹೆಚ್ಚುವರಿ ಹೊಣೆಗಾರಿಕೆ ಬಿದ್ದೀತು. ಅದನ್ನು ನಗುನಗುತ್ತಲೇ ನಿರ್ವಹಿಸಿ. ಇತರರ ಮೇಲೆ ಅಸಹನೆ ಕಾರಲು ಹೋಗದಿರಿ.

ಮೀನ
ಉದ್ಯಮಿಗಳಿಗೆ ಇಂದು ಧನಾಗಮ. ವೃತ್ತಿಯಲ್ಲಿ ತೃಪ್ತಿಯ ಬೆಳವಣಿಗೆ. ಕೌಟುಂಬಿಕ ವ್ಯವಹಾರದಲ್ಲಿ ಉದ್ವಿಗ್ನತೆ ಹೆಚ್ಚಲು ಅವಕಾಶ ಕೊಡಬೇಡಿ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!