Wednesday, January 14, 2026
Wednesday, January 14, 2026
spot_img

ದಿನಭವಿಷ್ಯ: ನಿಮ್ಮಲ್ಲಿ ನಿರುತ್ಸಾಹ ತರಿಸುವ ಜನರಿಂದ ಇಂದು ದೂರವಿದ್ರೆ ಒಳ್ಳೆಯದು

ಮೇಷ.
 ಕುಟುಂಬದ ಹಿತಾಸಕ್ತಿ ಇಂದು ಪ್ರಾಮುಖ್ಯ ಪಡೆಯುತ್ತದೆ. ಆದರೆ ವೃತ್ತಿಯ ಕಡೆಗಣನೆ ಬೇಡ. ಪ್ರೇಮಿಯಿಂದ ಗುಣಾತ್ಮಕ ಸ್ಪಂದನೆ.  
ವೃಷಭ
ಇತರರ ಏಳಿಗೆ ಕಂಡು ಕರುಬಬೇಡಿ. ಕುಟುಂಬದ ಏಳಿಗೆಗೆ ಗಮನ ಕೊಡಿ. ಐಷಾರಾಮಿ ವಸ್ತು ಖರೀದಿಯಿಂದ ವ್ಯಯ.      
ಮಿಥುನ
ವೃತ್ತಿಯಲ್ಲಿ ಪ್ರಗತಿ. ಆದರೆ ಖಾಸಗಿ ಬದುಕಲ್ಲಿ ಹಿನ್ನಡೆ. ನೆರೆಕರೆ ಜತೆ ಕಲಹವಾದೀತು. ಆರ್ಥಿಕ ಬಿಕ್ಕಟ್ಟು ಹೆಚ್ಚುವುದು. ಬಂಧು ಜತೆ ವಿರಸ.  
ಕಟಕ
ಪ್ರವಾಸದಲ್ಲಿ ಖುಷಿ ಕಾಣುವಿರಿ. ಧಾರ್ಮಿಕತೆ ಕೂಡಾ ಆಸಕ್ತಿ ತರಲಿದೆ. ಪ್ರೀತಿಪಾತ್ರರ ಜತೆ ಆತ್ಮೀಯ ಕಾಲಕ್ಷೇಪ. ಹೆಚ್ಚಿನ ಚಿಂತೆ ಬಾಽಸದು.  
ಸಿಂಹ
ಗ್ರಹಗತಿ ಪೂರಕ. ಉತ್ಸಾಹ ಅಽಕ. ಧನ ಪ್ರಾಪ್ತಿ. ವಿದ್ಯಾರ್ಥಿಗಳಿಗೆ ಯಶ.  ಕೆಮ್ಮಿನಂತ ಆರೋಗ್ಯ ಸಮಸ್ಯೆ ಕಾಡಬಹುದು.      
ಕನ್ಯಾ
ವೃತ್ತಿಯಲ್ಲಿ ಬಿಕ್ಕಟ್ಟು. ಕೆಲವರ ಅಸಹಕಾರ ಎದುರಿಸುವಿರಿ. ಕುಟುಂಬ ಸದಸ್ಯರ ಜತೆ ಮಾತಿನ ಚಕಮಕಿ. ಸಹನೆ ಕಾಯ್ದು ಕೊಳ್ಳುವುದು ಮುಖ್ಯ.        
ತುಲಾ
ನಿಮ್ಮೆಡೆಗೆ ಬರುವ ಸವಾಲುಗಳನ್ನು ಎದುರಿಸಲು ಸಜ್ಜಾಗಿ. ಹಿಂಜರಿಕೆ ಬೇಕಿಲ್ಲ. ಅಂತಿಮವಾಗಿ ನಿಮಗೆ ಪೂರಕವೇ ಆಗಲಿದೆ.        
ವೃಶ್ಚಿಕ
 ಪಾಸಿಟಿವ್ ಚಿಂತನೆ ಬೆಳೆಸಿಕೊಳ್ಳಿ. ಬಿಕ್ಕಟ್ಟು ಪರಿಹರಿಸಲು ಶಕ್ತರಾಗುವಿರಿ. ಸರಿಯಾಗಿ ಯೋಚಿಸಿ ಹೊಸ ವ್ಯವಹಾರ ಆರಂಭಿಸಿ.
ಧನು
ಹೆಚ್ಚು ಉತ್ಸಾಹ. ಹೊಸ ಅವಕಾಶ ಒದಗಿಬಂದರೆ ಅದನ್ನು ಕಡೆಗಣಿಸಬೇಡಿ. ಕೌಟುಂಬಿಕ ಕಲಹ ನೆಮ್ಮದಿ ಕಲಕಬಹುದು.  
ಮಕರ
ಕೆಲ ಬೆಳವಣಿಗೆ ನಿಮಗೆ ಆಘಾತ ತರಬಹುದು. ಅದನ್ನು ಎದುರಿಸಲು ತಯಾರಾಗಿ. ಇತರರ ಭಾವನೆಗೆ ನೋವು ತರಬೇಡಿ.  
ಕುಂಭ
ಆರೋಗ್ಯ ಸಮಸ್ಯೆ ಕಾಡಲಿದೆ. ವೃತ್ತಿಯಲ್ಲಿ ಬಡ್ತಿ ದೊರಕಬಹುದು. ಏಕಾಂಗಿಗಳಿಗೆ ವೈವಾಹಿಕ ಸಂಬಂಧ ಕೂಡಿಬಂದೀತು. ಕೌಟುಂಬಿಕ ಸಹಕಾರ.  
 ಮೀನ
 ನಿಮ್ಮನ್ನು ನಿರುತ್ಸಾಹಗೊಳಿಸುವ ವ್ಯಕ್ತಿಗಳಿಂದ ದೂರವಿರಿ. ಕುಟುಂಬದ ಹಿರಿಯರಿಗೆ ಆರೋಗ್ಯ ಸಮಸ್ಯೆ. ಹಳೆ ಹೂಡಿಕೆಯಿಂದ ಲಾಭ.

Most Read

error: Content is protected !!