Sunday, December 3, 2023

Latest Posts

ದಿನ ಭವಿಷ್ಯ : ವಿನಯವಂತಿಕೆ ಒಳ್ಳೆಯದು,ಆದರೆ ಕೆಲವರ ಜತೆ ಕಠಿಣವಾಗಿಯೇ ವರ್ತಿಸಬೇಕು

ಬುಧವಾರ, 12 ಏಪ್ರಿಲ್ 2023 ಮಂಗಳೂರು

ಮೇಷ
ಹಳೆಯ ಕೆಲವು ವಿಚಾರ ಗಳನ್ನು ತೊಡೆದು ಹಾಕಿ ಹೊಸತನ್ನು ಅಳವಡಿಸಿ ಕೊಳ್ಳಲು ಯತ್ನಿಸುವಿರಿ. ಸಂಬಂಧದಲ್ಲಿ ಏರುಪೇರು ಉಂಟಾದೀತು.

ವೃಷಭ
ನಿಮ್ಮ ವ್ಯವಹಾರದಲ್ಲಿ ಪ್ರಗತಿ. ಇನ್ನಷ್ಟು ಸುಧಾರಣೆ ಮಾಡಿಕೊಳ್ಳಲು ಸೂಕ್ತ ಕಾಲ. ಯಾವ ಹಿನ್ನಡೆ ನಿಮ್ಮನ್ನು ಬಾಧಿಸದು. ಸುಖೀ ಸಂಸಾರ.

ಮಿಥುನ
ವಿನಯವಂತಿಕೆ ಒಳ್ಳೆಯದು. ಆದರೆ ಕೆಲವರ ಜತೆ ಕಠಿಣವಾಗಿಯೇ ವರ್ತಿಸಬೇಕು. ಈ ಪಾಠವು ಇಂದು ನಿಮಗೆ ಮನವರಿಕೆ ಆಗಲಿದೆ.

ಕಟಕ
ಉತ್ಸಾಹದ ದಿನ. ಉದ್ಯೋಗದಲ್ಲಿ ಪ್ರಗತಿ. ಆದರೂ ಕೆಲವು ನೆಗೆಟಿವ್ ವಿಚಾರಗಳು ಮನಸ್ಸು ಕೊರೆಯುತ್ತವೆ. ಅವುಗಳನ್ನು ಮೊದಲು ನಿವಾರಿಸಿಕೊಳ್ಳಿ.

ಸಿಂಹ
ಮುಂಜಾನೆಯಿಂದಲೆ ಒತ್ತಡ, ಉದ್ವಿಗ್ನತೆ. ಈ ದಿನ ಸರಿಯಿಲ್ಲ ಎಂಬಂತೆ ಭಾಸವಾಗುವುದು. ಆದರೆ ಹೆಚ್ಚು ಚಿಂತೆ ಬೇಡ, ದೊಡ್ಡ ಹಾನಿ ನಿಮಗೆ ತಟ್ಟದು.

ಕನ್ಯಾ
ನಿಮ್ಮ ಎಲ್ಲಾ ಬಗೆಯ ಪ್ರತಿಭೆಯ ಪ್ರದರ್ಶನಕ್ಕೆ ಅವಕಾಶ ದೊರಕಲಿದೆ. ಕುಟುಂಬ ಸದಸ್ಯರ ಜತೆ ಹೆಚ್ಚು ಕಾಲ ಕಳೆಯಿರಿ. ಅವರನ್ನು ಕಡಗಣಿಸುವುದು ಬೇಡ.

ತುಲಾ
ಬದುಕು ಏಕತಾನ ಎನಿಸುವುದು. ಬದಲಾವಣೆ ಇಲ್ಲದೆ ಬೋರ್. ಆದರೆ ಬದಲಾವಣೆ ನೀವೇ ತಂದುಕೊಳ್ಳಬೇಕು. ಅದಕ್ಕೆ ಕಾಯುವುದಲ್ಲ.

ವೃಶ್ಚಿಕ
ಕೆಲವು ವ್ಯವಹಾರಗಳಿಗೆ ಹೆಚ್ಚು ಹಣ ಹೂಡುವ ತುಡಿತ ಸಂಭವ. ಆದರೆ ಯೋಚಿಸಿ ಹೆಜ್ಜೆಯಿಡಿ. ಇತರರ ಸಲಹೆ ಪಡೆಯಲು ಹಿಂಜರಿಯದಿರಿ.

ಧನು
ನಿಮ್ಮ ನಿಷ್ಠಾವಂತ ದುಡಿಮೆಗೆ ಸೂಕ್ತ ಪ್ರತಿಫಲ ದೊರಕುವುದು. ಇತರರು ನಿಮ್ಮ ಸಾಮರ್ಥ್ಯ ಗುರುತಿಸುವರು.

ಮಕರ
ವೃತ್ತಿಯಲ್ಲಿ ನಿಮ್ಮ ಮೇಲೆ ಹೆಚ್ಚಿನ ಹೊಣೆ ಹೇರುವರು. ಅದನ್ನು ನಿಭಾಯಿಸುವ ತಾಕತ್ತು ನಿಮ್ಮಲ್ಲಿದೆ. ಹಾಗಾಗಿ ಹೊಣೆ ವಹಿಸಿಕೊಳ್ಳಲು ಹಿಂಜರಿಯದಿರಿ.

ಕುಂಭ
ಯಾವುದೇ ಕಾರ್ಯದಲ್ಲೂ ಇಂದು ಸಫಲರಾಗುವಿರಿ. ನಿಮ್ಮ ವಿರೋಧಿಗಳ ಮನಸ್ಸು ಗೆಲ್ಲುವಿರಿ. ಕೌಟುಂಬಿಕ ಸಾಮರಸ್ಯಕ್ಕೆ ಭಂಗ ಬರಲಾರದು.

ಮೀನ
ಪ್ರೀತಿಯ ವಿಷಯ ದಲ್ಲಿ  ನಿಮ್ಮ ಬದುಕಿಗೆ ತಿರುವು. ಕುಟುಂಬಸ್ಥರ ಜತೆ ಆತ್ಮೀಯ ಕಾಲಕ್ಷೇಪ. ಹಣದ ವಿಷಯದಲ್ಲಿ ಪೂರಕ ಬೆಳವಣಿಗೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!