ದಿನಭವಿಷ್ಯ: ಎಷ್ಟೇ ಬಯಸಿದರೂ ಇಂದು ಕೂಡ ನಿಮಗೆ ವಿರಾಮ ಸಿಗೋದಿಲ್ಲ, ಭಾರೀ ಕೆಲಸ!

ಭಾನುವಾರ, 30 ಜನವರಿ 2022

ಮೇಷ
ವಿರಾಮ ಬಯಸಿದರೂ ನಿಮಗೆ ಸಾಧ್ಯವಾಗದು. ಏನೇನೋ ಕಾರ್ಯ ಗಳು ಬೆನ್ನಟ್ಟುತ್ತವೆ. ಇತರರ ನೆರವಿಗೂ ಹೋಗಬೇಕಾಗುತ್ತದೆ. ಕೌಟುಂಬಿಕ ಒತ್ತಡ.

ವೃಷಭ
ಸಭೆ, ಸಮಾರಂಭ ನಿಮ್ಮ ದಿನವನ್ನು ಬಳಸುತ್ತದೆ. ಸಾಮಾಜಿಕ ಚಟುವಟಿಕೆ ಹೆಚ್ಚು. ಕೌಟುಂಬಿಕ ಪರಿಸರ ಉಲ್ಲಾಸದಾಯಕ. ಖರ್ಚು ಮಾತ್ರ ಹೆಚ್ಚು.

ಮಿಥುನ
ನೆರೆಕರೆಯಿಂದ ಕಿರಿಕಿರಿ. ಮಾತಿಗೆ ಮಾತು ಬೆಳೆಸದಿರಿ. ಕೆಲವು ವಿಷಯಗಳಲ್ಲಿ ಮೌನ ಸಾಸುವುದೇ ಲೇಸು.ಬಂಧುಗಳಿಂದ ಶುಭ ಸುದ್ದಿ ಕೇಳಬಹುದು.

ಕಟಕ
ಕೆಲವು ವಿಷಯಗಳು ಮನಸ್ಸು ಕೊರೆಯುತ್ತವೆ. ಸಮಸ್ಯೆ ಸಣ್ಣದಾದರೂ ಅಸಹನೆ ಅಕ. ಕುಟುಂಬಸ್ಥರ ಅಸಹಕಾರವೂ ಮನಸ್ಸು ಕೆಡಿಸುತ್ತದೆ.

ಸಿಂಹ
ವೃತ್ತಿಯ ಬಿಕ್ಕಟ್ಟು ಮರೆತು ನಿರಾಳವಾಗಿ ಕಾಲ ಕಳೆಯಲು ಬಯಸುವಿರಿ. ಆದರೆ ಮನೆಯಲ್ಲೂ ನಿಮಗೆ ಶಾಂತಿಭಂಗ. ವಾಗ್ವಾದ, ಭಿನ್ನಾಭಿಪ್ರಾಯ.

ಕನ್ಯಾ
ಸಮಾರಂಭದಲ್ಲಿ ಪಾಲ್ಗೊಳ್ಳುವ ಅವಕಾಶ. ಬಂಧುಗಳ ಭೇಟಿ. ಕಾಡುತ್ತಿದ್ದ ಸಮಸ್ಯೆಗೆ ಹಠಾತ್ ಪರಿಹಾರ ದೊರಕಬಹುದು. ಮನಸ್ಸಿಗೆ ನಿರಾಳತೆ.

ತುಲಾ
ವೃತ್ತಿಯ ಸಮಸ್ಯೆ ಕಾಡುವುದು. ಸಹೋದ್ಯೋಗಿಯೊಬ್ಬರ ವರ್ತನೆ ಅಸಹನೀಯ ಎನಿಸುವುದು. ಅವರನ್ನು ನಿಭಾಯಿಸಲು ಯೋಜನೆ ಹೂಡಬೇಕು.

ವೃಶ್ಚಿಕ
ಕೌಟುಂಬಿಕ ಸಮಸ್ಯೆ ಪರಿಹಾರ. ಭಿನ್ನಾಭಿಪ್ರಾಯ ಶಮನ. ಕುಟುಂಬಸ್ಥರ ಜತೆ ಉತ್ತಮ ಸೌಹಾರ್ದ. ಹಿರಿಯರ ಆರೋಗ್ಯ ಸುಧಾರಣೆ.

ಧನು
ಆರ್ಥಿಕ ಪರಿಸ್ಥಿತಿ ಆತಂಕಕ್ಕೆ ಕಾರಣ ವಾಗುತ್ತದೆ. ದೊಡ್ಡ ಮೊತ್ತದ ಧನ ಬಯಸುವಿರಿ. ಆಪ್ತರಿಂದ ಸಹಾಯ ನಿರಾಕರಣೆ.

ಮಕರ
ಬಂಧುಗಳ ಜತೆ ಕೂಡಿ ಕಳೆಯುವ ಅವಕಾಶ. ಹೊಸ ಸಂಬಂಧ ಕೂಡಿಬರಬಹುದು. ಖರ್ಚು ಕಡಿಮೆ ಮಾಡಬೇಕಾದ ಒತ್ತಡ ಉಂಟಾಗುವುದು.

ಕುಂಭ
ಮನೆಯಲ್ಲಿ ನೆಮ್ಮದಿ ಕಲಕುವ ಬೆಳವಣಿಗೆ ಉಂಟಾಗಬಹುದು. ಅದಕ್ಕೆ ಯಾರದೋ ವರ್ತನೆ ಕಾರಣ ವಾಗುವುದು. ಸಹನೆ ಯಿಂದ ನಿಭಾಯಿಸಿ.

ಮೀನ
ಕೌಟುಂಬಿಕ ಸಹಕಾರ ಮತ್ತು ಸಾಮರಸ್ಯ. ಪ್ರಮುಖ ಕೆಲಸ ಇಂದು ಪೂರ್ಣಗೊಳ್ಳುವುದು. ಖರ್ಚು ಹೆಚ್ಚಾದರೂ ಮನಸ್ಸಿಗೆ ಸಮಾಧಾನ, ನಿರಾಳತೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!