ದಿನಭವಿಷ್ಯ: ಕಡಿದುಹೋದ ಸಂಬಂಧವೊಂದು ಮತ್ತೆ ಚಿಗುರುವ ಸಮಯ…

ಮಂಗಳವಾರ, 15 ಫೆಬ್ರವರಿ 2022

ಮೇಷ
ನಿಮ್ಮ ಗುರಿ ಸಾಧಿಸುವ ಕಾರ್ಯ ಸುಲಭ ವಾಗಲಿದೆ. ಪೂರಕ ಬೆಳವಣಿಗೆ. ಹಣದ ವಿಚಾರದಲ್ಲಿ ಮಾತ್ರ ಎಚ್ಚರಿಕೆಯಿಂದ ಮುಂದುವರಿಯಿರಿ.

ವೃಷಭ
ನಿರಂತರ ಒತ್ತಡ ಮತ್ತು ಕಾರ್ಯಬಾಹುಳ್ಯ ದಿಂದ ಬಳಲುವಿರಿ. ಮನಸ್ಸು ಎತ್ತೆತ್ತಲೋ ಹರಿಯಲು ಅವಕಾಶ ಕೊಡದಿರಿ. ಏಕಾಗ್ರತೆ ಮುಖ್ಯ.

ಮಿಥುನ
ಕಡಿದುಹೋದ ಸಂಬಂಧವೊಂದು ಮತ್ತೆ ಚಿಗಿತುಕೊಳ್ಳುವುದು. ಪೂರ್ವಗ್ರಹ ಬಿಟ್ಟು ವ್ಯವಹರಿಸಿ. ಕೌಟುಂಬಿಕ  ಪರಿಸ್ಥಿತಿ ಹೆಚ್ಚು ಉತ್ಸಾಹಪೂರ್ಣ.

ಕಟಕ
ನಿಮ್ಮ ಭವಿಷ್ಯಕ್ಕೆ ಪೂರಕವಾಗಬಲ್ಲ ಸೂಕ್ತ ನಿರ್ಧಾರ ತಾಳಿರಿ. ಯಾರದೋ ಪ್ರಭಾವದಿಂದ ತಪ್ಪು ನಿರ್ಧಾರಕ್ಕೆ ಬಲಿಯಾಗದಿರಿ.

ಸಿಂಹ
ಮನಸ್ಸು ಕೆಡಿಸುವ ಪ್ರಸಂಗ ಸಂಭವಿಸ ಬಹುದು. ಅಥವಾ ಗತನೆನಪು ಕಾಡಬಹುದು. ವ್ಯಕ್ತಿಗತ ಬದುಕಿನಲ್ಲಿ ಕೆಲವು ಸಮಸ್ಯೆ ಎದುರಿಸುವಿರಿ.

ಕನ್ಯಾ
ವೃತ್ತಿ ಮತ್ತು ಖಾಸಗಿ ಬದುಕಿನ ಮಧ್ಯೆ ಸಮತೋಲನ ಸಾಸಿರಿ. ಯಾವುದನ್ನೂ ಕಡೆಗಣಿಸುವುದು ತರವಲ್ಲ. ಖರ್ಚಿನಲ್ಲಿ ಹೆಚ್ಚಳ.

ತುಲಾ
ಹಣದ ವ್ಯವಹಾರ  ಎಚ್ಚರದಿಂದ ನಿರ್ವಹಿಸಿ. ನಷ್ಟವಾಗದಂತೆ ನೋಡಿಕೊಳ್ಳಿ. ಬಂಧುಗಳಿಂದ ಕಿರಿಕಿರಿ ಎದುರಿಸುವಿರಿ. ತಾಳ್ಮೆಯಿಂದ ವ್ಯವಹರಿಸಿ.

ವೃಶ್ಚಿಕ
ಯಾವುದೋ ವಿಷಯದಲ್ಲಿ ಮಾನಸಿಕ ತುಮುಲ. ಸರಿಯಾದ ನಿರ್ಧಾರ ತಾಳಲಾಗದೆ ಜಿಜ್ಞಾಸೆ. ಆಪ್ತರು ಮತ್ತು ಹಿರಿಯರ ಸಲಹೆ ಪಡೆದು ಮುಂದುವರಿಯಿರಿ.

ಧನು
ಕಾರ್ಯದಲ್ಲಿ ಎಚ್ಚರವಿರಲಿ. ಸಣ್ಣ ತಪ್ಪುಗಳು ದೊಡ್ಡ ಹಾನಿ ಉಂಟು ಮಾಡಬಹುದು. ಆರ್ಥಿಕವಾಗಿ ಹಿನ್ನಡೆ ಅನುಭವಿಸುವಿರಿ.

ಮಕರ
ಕೆಲದಿನಗಳಿಂದ ಕಾಡುತ್ತಿದ್ದ ಸಮಸ್ಯೆಗೆ ಪರಿಹಾರ ಸಿಗುವುದು. ನೆಮ್ಮದಿ ಮೂಡುವುದು. ಸೂಕ್ತ ಸಹಕಾರ ಕೂಡ ನಿಮಗೆ ಲಭಿಸುವುದು. ಚಿಂತೆ ಬೇಡ.

ಕುಂಭ
ಹೆಚ್ಚು ಉತ್ಸಾಹದ ದಿನ. ಕಾರ್ಯದಲ್ಲಿ ಸಫಲತೆ. ಹದಗೆಟ್ಟ ಸಂಬಂಧ ಮತ್ತೆ ಸುಧಾರಿಸುವುದು. ಇತರರ ಅಭಿಪ್ರಾಯಕ್ಕೆ  ಬೆಲೆ ಕೊಡಿ. ಅವರನ್ನು ಕಡೆಗಣಿಸಬೇಡಿ.

ಮೀನ
ನಿಮ್ಮ ಸುತ್ತಲಿನವರ ಭಾವನೆಗಳಿಗೆ ಸೂಕ್ತವಾಗಿ ಸ್ಪಂದಿಸಿ. ಅವರ ನೆಮ್ಮದಿಗೆ ನಿಮ್ಮದೂ ಕೊಡುಗೆ ಇರಲಿ. ಅಕ ಖರ್ಚು ಮಾಡದಿರಿ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!