ದಿನಭವಿಷ್ಯ: ವ್ಯಕ್ತಿಯೊಬ್ಬರ ಆಕರ್ಷಣೆಗೆ ಒಳಗಾಗುವಿರಿ, ಹಿತಮಿತ ಅರಿತು ವರ್ತಿಸಿ!

ಶುಕ್ರವಾರ, 25 ಫೆಬ್ರವರಿ 2022 ಮಂಗಳೂರು

ಮೇಷ
ಹಿತವೆಂದುಕೊಂಡ ಕೆಲವು ವಿಷಯಗಳು ಅಹಿತ ಎನ್ನಿಸಬಹುದು. ಆಪ್ತರೇ ನಿಮ್ಮಿಂದ ದೂರ ಆಗಬಹುದು. ನಿಮ್ಮ ವರ್ತನೆಯೂ ಅದಕ್ಕೆ ಕಾರಣವಾಗುತ್ತದೆ.

ವೃಷಭ
ವೈಯಕ್ತಿಕ ಬದುಕಿನಲ್ಲಿ ಏರುಪೇರು. ಮನಸ್ಸು ಕೆಡಿಸುವಂತಹ ಬೆಳವಣಿಗೆ. ಕೆಲವರ ವರ್ತನೆ ಅಸಹನೀಯ ಎನಿಸಬಹುದು. ತಾಳ್ಮೆಯಿರಲಿ.

ಮಿಥುನ
ಭಾವನಾತ್ಮಕವಾಗಿ ಕೋಲಾಹಲದ ದಿನ. ಇತರರು ನಿಮ್ಮ ಬಗ್ಗೆ ಏನಂದುಕೊಳ್ಳುವರೋ ಎಂದು ಚಿಂತಿಸುವಿರಿ. ಎಲ್ಲರನ್ನು ಮೆಚ್ಚಿಸುವ ಯತ್ನ ಕೈಗೂಡದು.

ಕಟಕ
ಧಾರ್ಮಿಕ, ಆಧ್ಯಾತ್ಮಿಕ ವಿಷಯಗಳು ಹೆಚ್ಚು ಆಸಕ್ತಿ ಕೆರಳಿಸಬಹುದು. ಹಾಗೆಂದು ಲೌಕಿಕ ವಿಷಯ ಕಡೆಗಣಿಸಬೇಡಿ. ಕುಟುಂಬ, ಕರ್ತವ್ಯ ಮರೆಯಬೇಡಿ.

ಸಿಂಹ
ನಿರಾಳ ದಿನ. ಹೆಚ್ಚಿನ ಸಮಸ್ಯೆಗಳು ಕಾಡಲಾರವು. ಆಪ್ತರೊಂದಿಗಿನ ವಿರಸ ಶಮನ. ಕೌಟುಂಬಿಕ ಮತ್ತು ವೃತ್ತಿ ಕಾರ್ಯಗಳು ಸಲೀಸು.

ಕನ್ಯಾ
ಪ್ರೀತಿಯ ಭಾವದಲ್ಲಿ ಮುಳುಗುವಿರಿ. ವ್ಯಕ್ತಿಯೊಬ್ಬರ ಆಕರ್ಷಣೆಗೆ ಒಳಗಾಗುವ ಸಾಧ್ಯತೆ. ಹಿತಮಿತ ಅರಿತು ವರ್ತಿಸಿರಿ.

ತುಲಾ
ಇಂದು ನಿಮ್ಮ ಸುತ್ತಲಿರುವ ಎಲ್ಲರ ಜತೆಗೂ ಏಕಾಭಿಪ್ರಾಯ ಹೊಂದಿರುವಂತೆ ಕಾಣುತ್ತದೆ. ಅಭಿಪ್ರಾಯ ಭೇದ ಉಂಟಾಗದು. ಮನಸ್ಸು  ನಿರಾಳ.

ವೃಶ್ಚಿಕ
ನೀರಸ ದಿನ. ಉತ್ಸಾಹ ಹೆಚ್ಚಿಸುವ ಯಾವ ಬೆಳವಣಿಗೆ ಸಂಭವಿಸದು. ಏಕತಾನತೆಯ ಕಾರ್ಯ. ಪ್ರಮುಖ ಕಾರ್ಯ ಇಂದು ಮುಗಿಸಲು ಪ್ರಯತ್ನಿಸಿ.

ಧನು
ನಿಮಗಿಂತ ಮೇಲಿನವರು ನಿಮ್ಮ ಮೇಲೆ ಹಲವು ಹೊಣೆ ಹೇರಿಯಾರು. ಅದನ್ನೆಲ್ಲ ಸಮರ್ಥವಾಗಿ ನಿಭಾಯಿಸುವಿರಿ. ದಿನದಂತ್ಯಕ್ಕೆ ತೃಪ್ತಿಯ ಭಾವ.

ಮಕರ
ಎಲ್ಲ ಕಾರ್ಯಗಳು ಇಂದು ಸಲೀಸಾಗಿ ನಡೆಯುವವು. ಹೆಚ್ಚಿನ ಪ್ರಯತ್ನ ಪಡದೇ ಕಾರ್ಯಸಿದ್ಧಿ. ಕೌಟುಂಬಿಕ ಪರಿಸರ ಉಲ್ಲಾಸದಾಯಕ.

ಕುಂಭ
ಮುಂಜಾನೆ ನೀವು ಸಮಸ್ಯೆಯ ಸಾಗರದಲ್ಲೇ ಮುಳುಗಿರುವಂತೆ ಅನಿಸಬಹುದು. ಆದರೆ ಅಪರಾಹ್ನ ಎಲ್ಲವೂ ನಿರಾಳ. ನಿಮಗೆ ಪೂರಕ ಬೆಳವಣಿಗೆಗಳು.

ಮೀನ
ತೃಪ್ತಿಕರ ದಿನ. ಆಪ್ತರೊಂದಿಗೆ ಸಮಾಲೋಚನೆ. ಕಾರ್ಯ ಸಾಫಲ್ಯ. ಕೌಟುಂಬಿಕ ಮನಸ್ತಾಪ ಅಂತ್ಯ, ಸಹಕಾರ ಹೆಚ್ಚಳ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!