ಮೇಷ.
ಅತಿಯಾದ ಒತ್ತಡ. ಕೆಲಸದಲ್ಲಿ ತಪ್ಪು ಘಟಿಸಬಹುದು. ಮನೆಯವರ ಜತೆ ವಾಗ್ವಾದ ನಡೆದೀತು. ಮಾತು ಹದವಾಗಿರಲಿ.
ವೃಷಭ
ಬಹಳಷ್ಟು ಕೆಲಸ ಇಂದು ನಡೆಯಬೇಕಿದೆ. ಎಲ್ಲರ ಜತೆ ಸಹನೆಯಿಂದ ವರ್ತಿಸಿ. ಹಣದ ವ್ಯವಹಾರದಲ್ಲಿ ತುಸು ಏರುಪೇರು ಸಂಭವ.
ಮಿಥುನ
ಮನಸ್ಸು ವಿಚಲಿತಗೊಳಿಸುವ ವಿಷಯದತ್ತ ಗಮನ ಹರಿಸದಿರಿ. ಕೌಟುಂಬಿಕ ಬೇಡಿಕೆ ಈಡೇರಿಸಿ. ಬೇಸರದ ಬೆಳವಣಿಗೆ.
ಕಟಕ
ನಿಮ್ಮ ವ್ಯವಹಾರ ಸುಗಮವಾಗಿ ಸಾಗುವ ಮೂಲಕ ಮಾನಸಿಕ ನಿರಾಳತೆ. ಚಿಂತೆ ಉಂಟು ಮಾಡಿದ್ದ ವಿಷಯ ಇತ್ಯರ್ಥ ಕಾಣುವುದು.
ಸಿಂಹ
ಕುಟುಂಬ ಸದಸ್ಯರ ಮೇಲೆ ಅಸಹನೆ ತೋರುವ ಪ್ರಸಂಗ ಒದಗೀತು. ಮಾತಿನ ಚಕಮಕಿಯೂ ನಡೆದೀತು. ಸಂಯಮ ಕಳಕೊಳ್ಳದಿರಿ.
ಕನ್ಯಾ
ಸಂತೋಷ, ಸಮಾಧಾನಕರ ದಿನ. ಕ್ಲೇಶಗಳು ಬಾಧಿಸವು. ಪ್ರತಿಕೂಲ ಬೆಳವಣಿಗೆ ಸಂಭವಿಸದು. ಬಂಧು ಮಿತ್ರರ ಭೇಟಿ.
ತುಲಾ
ವ್ಯವಹಾರದಲ್ಲಿ ಲಾಭ. ಧನಪ್ರಾಪ್ತಿ. ಆದರೆ ಕೌಟುಂಬಿಕ ಶಾಂತಿ ಕಲಕುವ ಬೆಳವಣಿಗೆ. ಬಂಧುಗಳಿಂದ ಅಸಹಕಾರ.
ವೃಶ್ಚಿಕ
ಇತರರ ಜತೆ ಹೊಂದಾಣಿಕೆ ಸಾಧಿಸಿ. ನಿಮ್ಮದೇ ಮಾತು ನಡೆಯಬೇಕೆಂದು ಹಠ ಹಿಡಿಯಬೇಡಿ. ವಾಗ್ವಾದ ನಡೆಸಬೇಡಿ.
ಧನು
ಸಮಾಧಾನ, ತಾಳ್ಮೆ ಇಂದಿನ ನಡೆಯಾಗಲಿ. ದುಡುಕು ಎಲ್ಲವನ್ನು ಹಾಳು ಮಾಡೀತು. ಆಪ್ತರ ಜತೆ ನಿಷ್ಟುರ ತಪ್ಪಿಸಿ. ಮಾತು ಮಿತವಾಗಿರಲಿ.
ಮಕರ
ಆಪ್ತರ ಜತೆಗೆ ಭಿನ್ನಾಭಿಪ್ರಾಯ ಸಂಭವ. ಕಹಿ ಮನಸ್ಸು. ಅಸಹನೆ ಅಽಕ. ಹೆಚ್ಚುವರಿ ಖರ್ಚು. ಆರೋಗ್ಯದ ಚಿಂತೆ ಕಾಡಬಹುದು.
ಕುಂಭ
ಹಲವಾರು ಬದಲಾವಣೆಗೆ ಇಂದು ಸಾಕ್ಷಿಯಾಗುವಿರಿ. ವಾಗ್ವಾದ ನಡೆದೀತು. ಸಂಬಂಧ ಕಾಯ್ದುಕೊಳ್ಳಿ. ಸಹನೆಯಿಂದ ವರ್ತಿಸಿ.
ಮೀನ
ಕೆಲಸದಲ್ಲಿ ತಪ್ಪು ನಡೆದೀತು. ಹಾಗಾಗಿ ಎಚ್ಚರ ವಹಿಸಿ. ಖರ್ಚು ಹೆಚ್ಚು. ಧನಹಾನಿಯೂ ಸಂಭವಿಸಬಹುದು. ಚರ್ಮದ ಅಲರ್ಜಿ.
ದಿನಭವಿಷ್ಯ: ಈ ರಾಶಿಯವರಿಗೆ ಇಂದು ಸಮಾಧಾನಕರ, ಸಂತೋಷದ ದಿನ
