Monday, March 27, 2023

Latest Posts

ದಿನಭವಿಷ್ಯ| ಈ ರಾಶಿಯವರಿಗೆ ಯಾವುದೋ ಸಮಸ್ಯೆ ಹೆಚ್ಚು ಚಿಂತೆಗೀಡು ಮಾಡುತ್ತದೆ…

ಮೇಷ
ನಿಮ್ಮ ಕಠಿಣ ಶ್ರಮಕ್ಕೆ ತಕ್ಕ ಪ್ರತಿಫಲ ದೊರಕುವುದು. ವೃತ್ತಿಯಲ್ಲಿ ಯಶಸ್ಸು. ವೈಯಕ್ತಿಕ ಬದುಕಿನಲ್ಲಿ ಸಂತೋಷ. ಕೌಟುಂಬಿಕ ನೆಮ್ಮದಿ ಮರಳುವುದು.

ವೃಷಭ
ಅತಿಯಾದ ಭಾವುಕತೆ ಒಳ್ಳೆಯದಲ್ಲ. ಅದು ನಿಮಗೆ ಪ್ರತಿಕೂಲಕರವಾಗಿ ಪರಿಣಮಿಸಲಿದೆ. ಕೆಲವು ವಿಷಯ ಅತಿಯಾಗಿ ಹಚ್ಚಿಕೊಳ್ಳದಿರಿ.

ಮಿಥುನ
ವೃತ್ತಿಗಿಂತ ವೈಯಕ್ತಿಕ ವಿಷಯಗಳೇ ಇಂದು ನಿಮಗೆ ಪ್ರಾಮುಖ್ಯತೆ ಪಡೆಯುತ್ತವೆ. ಆಪ್ತರ ವರ್ತನೆ ನಿಮ್ಮ ಭಾವನೆಯ ಏರುಪೇರಿಗೆ ಕಾರಣ.

ಕಟಕ
ಗಂಭೀರ ವಿಷಯಗಳಲ್ಲಿ  ನೀವು ವ್ಯಸ್ತರಾಗುವಿರಿ. ಸರಿಯಾದ ನಿರ್ಧಾರ ತಾಳದಿದ್ದರೆ  ಪ್ರತಿಕೂಲ ಆಗಬಹುದು. ಯೋಚಿಸಿ, ಯೋಜಿಸಿ ಮುನ್ನಡೆಯಿರಿ.

ಸಿಂಹ
ಆರ್ಥಿಕ ವಿಷಯ ಆದ್ಯತೆ ಪಡೆಯುತ್ತದೆ. ಅಗತ್ಯ ಕಾರ್ಯಕ್ಕೆ ಹಣದ ಹೊಂದಾಣಿಕೆಯಲ್ಲಿ ತೊಡಗುವಿರಿ. ಆದರೆ ಅಡ್ಡಿಗಳು ಎದುರಾಗುತ್ತವೆ.

ಕನ್ಯಾ
ಕೆಲವರು ನಿಮ್ಮಿಂದ ಇಂದು ಹೆಚ್ಚು ಖರ್ಚು ಮಾಡಿಸುತ್ತಾರೆ. ಸಾಧ್ಯವಾದಷ್ಟು ಅವರ ಪ್ರಭಾವಕ್ಕೆ ಸಿಲುಕದಿರಿ. ಕೌಟುಂಬಿಕ ಅಸಮಾಧಾನ.

ತುಲಾ
ಅಕ ಕೆಲಸದ ಒತ್ತಡ. ಅಧಿಕ ಖರ್ಚು. ವಿರಾಮವಿಲ್ಲದ ದಿನ. ಇದು ನಿಮ್ಮ ಇಂದಿನ ದಿನಚರಿ. ಕೌಟುಂಬಿಕ ಸದಸ್ಯರು ನಿಮಗೆ ಸಾಂತ್ವನ ನೀಡುವರು.

ವೃಶ್ಚಿಕ
ಕಷ್ಟದ ದಿನ. ಇತರರಿಂದ ಅಸಹಕಾರ. ಇಚ್ಛಿಸಿದ ಕಾರ್ಯ ಪೂರ್ಣ ಗೊಳಿಸಲು ಕಷ್ಟ. ವೈಯಕ್ತಿಕವಾಗಿಯೂ ನಿರಾಶೆಯ ದಿನ. ಕಟುಂಬಿಕ ಅಶಾಂತಿ.

ಧನು
ನಿಮ್ಮ ಕಾರ್ಯಕ್ಷಮತೆ ಎಲ್ಲರ ಗಮನ ಸೆಳೆಯುವುದು. ಇತರರು ನಿಮ್ಮ ಮಾರ್ಗದರ್ಶನ ಪಡೆಯುತ್ತಾರೆ. ಕೌಟುಂಬಿಕ ಶಾಂತಿ.

ಮಕರ
ಬೇಜವಾಬ್ದಾರಿ ವರ್ತನೆ ನಿಮಗೆ ಹಾನಿ ತರಬಹುದು. ವಿವೇಕದಿಂದ ವರ್ತಿಸಿ. ಕುಟುಂಬಸ್ಥರಿಂದ ಕಿರುಕುಳ ಅನುಭವಿಸುವಿರಿ.

ಕುಂಭ
ಯಾವುದೋ ಸಮಸ್ಯೆಯು ಹೆಚ್ಚು ಚಿಂತೆಗೆ ಕಾರಣವಾಗುತ್ತದೆ. ಇತರರ ಸಲಹೆ ಪಡೆದು ಅದಕ್ಕೆ ಪರಿಹಾರ ಕಂಡುಕೊಳ್ಳಿ.

ಮೀನ
ಆತ್ಮೀಯರ ಒಡನಾಟದಲ್ಲಿ ಕಳೆಯುವಿರಿ. ಅವರೊಂದಿಗೆ ಸಣ್ಣ ವಿಷಯಗಳಿಗೆ ಜಗಳವಾಗಬಹುದು. ಆದರೆ ಬೇಗ ರಾಜಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!