ದಿನಭವಿಷ್ಯ
ಮೇಷ
ನಿಮ್ಮಿಂದ ಕೆಲವರ ಮನಸ್ಸು ನೋಯಬಹುದು. ಅದಕ್ಕೆ ಆಸ್ಪದ ಕೊಡದಿರಿ. ಹಣದ ವಿಷಯದಲ್ಲಿ ವಾಗ್ವಾದ ನಡೆಯಬಹುದು.
ವೃಷಭ
ನಿಮ್ಮ ಮಾತು, ವರ್ತನೆ ತಿದ್ದಿಕೊಳ್ಳದಿದ್ದರೆ ಕೆಲವು ಸ್ನೇಹಿತರನ್ನು ಕಳಕೊಳ್ಳುವಿರಿ. ದುಡುಕು, ರೋಷ ಬಿಡಿ. ಸಮಾಧಾನದ ನಡೆ ಒಳ್ಳೆಯದು.
ಮಿಥುನ
ಎಲ್ಲ ಕೆಲಸದಲ್ಲಿ ಪರಿಪೂರ್ಣತೆ ಬಯಸುವಿರಿ. ಕೆಲವರ ಕಾರ್ಯ ನಿಮಗೆ ಅಸಮಾಧಾನ ಹುಟ್ಟಿಸಬಹುದು. ಸಂಘರ್ಷ ಬೇಡ.
ಕಟಕ
ಬಿಡುವಿಲ್ಲದ ಕೆಲಸ. ಅದರ ಜತೆಗೇ ಕೌಟುಂಬಿಕ ಒತ್ತಡ. ಮನಸ್ಸು ಮತ್ತು ಹೃದಯ ಎರಡೂ ಭಾರವಾದೀತು. ಸಹನೆಯಿರಲಿ.
ಸಿಂಹ
ದೊಡ್ಡ ಕನಸು ಕಾಣುವುದರಲ್ಲಿ ತಪ್ಪಿಲ್ಲ. ಆದರೆ ಅದನ್ನು ನನಸಾಗಿಸಲು ಅದೃಷ್ಟವನ್ನಷ್ಟೆ ನೆಚ್ಚಬಾರದು. ನಿಮ್ಮ ಪ್ರಯತ್ನವೂ ಅಗತ್ಯ.
ಕನ್ಯಾ
ನೀವು ಕೈಗೊಂಡ ಕಾರ್ಯದಲ್ಲಿ ನಿಮಗೆ ಯಶಸ್ಸು ದೊರಕಲಿದೆ. ಆರ್ಥಿಕವಾಗಿಯೂ ಸುಗಮ ದಿನ. ದೊಡ್ಡ ಖರ್ಚು ಬಾಧಿಸದು. ಕೌಟುಂಬಿಕ ಶಾಂತಿ.
ತುಲಾ
ಮನೆಯ ನವೀಕರಣಕ್ಕೆ ಕಾಲ ಕೂಡಿಬರುವುದು. ಹಣಕ್ಕಾಗಿ ಚಿಂತಿಸ ಬೇಕಿಲ್ಲ.ಸೂಕ್ತ ನೆರವು ಲಭ್ಯ. ಕೌಟುಂಬಿಕ ಸಮಸ್ಯೆಯೊಂದು ಪರಿಹಾರ ಕಾಣುವುದು.
ವೃಶ್ಚಿಕ
ಇಂದು ಎಚ್ಚರದಿಂದಿರಿ. ಬೇರೆಯವರ ನಡುವಿನ ಜಗಳದಲ್ಲಿ ನೀವು ಬಲಿಪಶು ಆಗುವ ಸಾಧ್ಯತೆಯಿದೆ. ಅವರಿಂದ ದೂರವಿರುವುದು ನಿಮಗೆ ಕ್ಷೇಮ.
ಧನು
ನಿಮ್ಮ ಆಪ್ತರ ಭಾವನೆಗಳಿಗೆ ಸೂಕ್ತವಾಗಿ ಸ್ಪಂದಿಸುವಿರಿ. ಇದರಿಂದ ಬಾಂಧವ್ಯ ವೃದ್ಧಿ. ವೃತ್ತಿಯಲ್ಲಿ ಕಠಿಣ ಹೊರೆಯೊಂದು ನಿವಾರಣೆ ಆಗುವುದು.
ಮಕರ
ಕಾರ್ಯವೊಂದು ಸುಲಲಿತವಾಗಿ ನಡೆದು ನಿಮಗೆ ನಿರಾಳತೆ ತರುವುದು. ಬಂಧುಗಳ ಜತೆಗಿನ ವಿರಸ ನಿವಾರಣೆ. ಕೌಟುಂಬಿಕ ಸಮಾಧಾನ.
ಕುಂಭ
ದಿನವಿಡೀ ನಿರಾಳವಾಗಿ ಕಳೆಯುವಿರಿ. ಸಂಜೆ ವೇಳೆಗೆ ಜೇಬಿಗೆ ಭಾರವಾಗುವ ಖರೀದಿ ನಡೆದೀತು. ಕುಟುಂಬಸ್ಥರ ಬೇಡಿಕೆ ಹೆಚ್ಚಬಹುದು.
ಮೀನ
ನಿಮ್ಮ ಪ್ರಾಮಾಣಿಕತೆ ನಿಮ್ಮ ಆಸ್ತಿ. ಅದರಿಂದ ನೀವು ಇತರರ ಮೆಚ್ಚುಗೆ ಗಳಿಸುವಿರಿ. ವೃತ್ತಿಯಲ್ಲಿ ಹೆಚ್ಚುವರಿ ಹೊಣೆ. ಸಹೋದ್ಯೋಗಿಗಳ ಸಹಕಾರ.