Thursday, September 18, 2025

ದಿನಭವಿಷ್ಯ: ವೃತ್ತಿಪರರಂತೆ ವರ್ತಿಸಿ, ಯಾವ ಸಮಸ್ಯೆಯೂ ಬಾಧಿಸದು

ಮೇಷ.
 ನಿಮ್ಮ ಕಾರ್ಯಕ್ಕೆ ಮೆಚ್ಚುಗೆ. ವೇತನ ಏರಿಕೆ ಆದೀತು. ಹೊರಗಿನ ಆಹಾರ ಸೇವನೆ ಹೊಟ್ಟೆ ಕೆಡಿಸಬಹುದು. ಆತ್ಮೀಯ ಬಂಧುಗಳ ಭೇಟಿ.
ವೃಷಭ
ಆರ್ಥಿಕ ಪ್ರಗತಿ ಸಾಧಾರಣ. ಉದ್ಯೋಗ ಬದಲಿಸಲು ಯೋಜಿಸಿದ್ದರೆ ಮುಂದೆ ಹೆಜ್ಜೆಯಿಡಿ.  ಕೌಟುಂಬಿಕ ಮನಸ್ತಾಪ. ಸಹನೆಯಿರಲಿ. ಮಿಥುನ
ಏರುಪೇರು ಇಲ್ಲದ ಸಹಜ ದಿನ. ಕುಟುಂಬದ ಜತೆ ಹೆಚ್ಚು ಕಾಲ ಕಳೆಯಿರಿ. ಅವರನ್ನು ನಿರ್ಲಕ್ಷಿಸಿದ ಭಾವನೆ ಬಾರದಿರಲಿ.    
ಕಟಕ
ಪ್ರಮುಖರನ್ನು ಭೇಟಿಯಾಗುವುದಿದ್ದರೆ ನಡೆನುಡಿಯಲ್ಲಿ ಪಕ್ವತೆ ಇರಲಿ. ದುಬಾರಿ ವಸ್ತು ಖರೀದಿ ಜೇಬಿಗೆ ತೂತು ಕೊರೆಯಬಹುದು.  
ಸಿಂಹ
ಪ್ರತಿಕೂಲ ಸ್ಥಿತಿಯಲ್ಲೂ ಹೋರಾಟ ಮನೋಭಾವ ಬಿಡಬೇಡಿ. ಆಪ್ತರ ಮುಂದೆ ನಿಮ್ಮ ಭಾವನೆ ತೋಡಿಕೊಳ್ಳಿ.  ಆರ್ಥಿಕ ಸ್ಥಿರತೆ.    
ಕನ್ಯಾ
ಪ್ರಮುಖ ಕಾರ್ಯಕ್ಕೆ ಯೋಜಿಸಿದ್ದರೆ ಯಶಸ್ಸು ಸಿಗಲಿದೆ. ಸಣ್ಣ ವಿಷಯಕ್ಕೆ ಚಿಂತೆ ಮಾಡುವುದು ಬಿಡಿ. ಎಲ್ಲವೂ ನಿಮಗೆ ಪೂರಕವಾಗಿ ಸಾಗಲಿದೆ.          
ತುಲಾ
ವೃತ್ತಿಪರರಂತೆ ವರ್ತಿಸಿ. ಆಗ ಯಾವುದೇ ಸವಾಲು ಎದುರಿಸಲು ಶಕ್ತರಾಗುವಿರಿ. ದೌರ್ಬಲ್ಯ ಮೇಲುಗೈ ಸಾಽಸಲು ಬಿಡಬೇಡಿ.     ವೃಶ್ಚಿಕ
 ಕೆಲಸದ ಒತ್ತಡ. ವಿರಾಮಕ್ಕೆ ಅವಕಾಶ ಸಿಗದು. ಸಣ್ಣ ಮಟ್ಟಿನ ಆರೋಗ್ಯ ಸಮಸ್ಯೆ. ಬಂಧುವಿನ ಜತೆ ವಾಗ್ವಾದ ಉಂಟಾದೀತು.  
ಧನು
 ಕೆರಿಯರ್‌ಗೆ ಸಂಬಂಽಸಿ ಅನುಕೂಲಕರ ಬೆಳವಣಿಗೆ. ಜಡತ್ವ ಕಾಡಬಹುದು. ಅದಕ್ಕೆ  ನಿಮ್ಮ ಅಜೀರ್ಣದ ಸಮಸ್ಯೆಯೂ ಕಾರಣ.  
ಮಕರ
ವೃತ್ತಿ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ನಡೆದೀತು. ಅದನ್ನು ವಿರೋಽಸಬೇಡಿ. ಹೊಂದಾಣಿಕೆ ಒಳಿತು. ಖರ್ಚು ನಿಯಂತ್ರಣ.  
ಕುಂಭ
ಉತ್ಸಾಹದಿಂದ ದಿನದ ಆರಂಭ. ಆದರೆ ಬಳಿಕ ನಿರುತ್ಸಾಹದ ಬೆಳವಣಿಗೆ ನಡೆದೀತು. ಸ್ಥೈರ್ಯ ಕಳಕೊಳ್ಳದಿರಿ.  ಆರ್ಥಿಕ ಒತ್ತಡ.
 ಮೀನ
 ನಿಮ್ಮ ಭಾವನೆಗೆ ಸ್ಪಂದಿಸುವ ಜನರ ಜತೆ ಸಮಯ ಕಳೆಯಿರಿ. ಅದರಿಂದ ಬೇಸರ ಕಡಿಮೆಯಾದೀತು. ಸಾಂತ್ವನ ದೊರಕೀತು.

ಇದನ್ನೂ ಓದಿ