ದಿನಭವಿಷ್ಯ
ಮೇಷ
ನಿಮ್ಮ ದೇಹಾರೋಗ್ಯ ಕಾಪಾಡಲು ಆದ್ಯತೆ ಕೊಡಿ. ವ್ಯಾಯಾಮ, ಮಿತ ಆಹಾರದಂತಹ ನಿಯಮ ಪಾಲಿಸಿ. ಬಂಧುಗಳಲ್ಲಿ ವಿರಸ ತಪ್ಪಿಸಿರಿ.
ವೃಷಭ
ಅಪ್ತೇಷ್ಟರ ಸಂಗದಲ್ಲಿ ಸಮಯ ಕಳೆಯವಿರಿ. ಅವರ ಹಿತಾಸಕ್ತಿಗೆ ನೀವೂ ಸಹಕರಿಸುವಿರಿ. ಸಂಜೆ ವೇಳೆಗೆ ಖರ್ಚು ಹೆಚ್ಚುವಂತಹ ವಿದ್ಯಮಾನ ಸಂಭವ.
ಮಿಥುನ
ಭಾವುಕತೆ ಮತ್ತು ಲೌಕಿಕ ವಿಚಾರಗಳು ಇಂದು ಸಮಾನ ಆದ್ಯತೆ ಪಡೆಯುತ್ತವೆ. ಆಪ್ತರಿಂದ ಮನಸ್ಸಿನ ಮೇಲೆ ಪರಿಣಾಮ ಬೀರುವ ವರ್ತನೆ.
ಕಟಕ
ನಿಮ್ಮ ಕೆಲವು ಭಾವನೆ ಗಳು ವಾಸ್ತವಿಕತೆಗೆ ದೂರವಾಗಿವೆ. ಅದನ್ನು ಅತಿಯಾಗಿ ಹಚ್ಚಿಕೊಳ್ಳದಿರಿ. ವೃತ್ತಿಯಲ್ಲಿ ಆರ್ಥಿಕ ಏರುಪೇರು.
ಸಿಂಹ
ಸಣ್ಣ ವಿಷಯಗಳು ದೊಡ್ಡ ತಾಕಲಾಟ ಸೃಷ್ಟಿಸಬಹುದು. ಎಲ್ಲದಕ್ಕೂ ಭಾವುಕವಾಗಿ ಸ್ಪಂದಿಸುವುದು ಬಿಡಿ. ವಾಸ್ತವಿಕ ನೆಲೆಗಟ್ಟಲ್ಲಿ ಯೋಚಿಸಿರಿ.
ಕನ್ಯಾ
ಉದ್ಯೋಗದಲ್ಲಿ ಹೆಚ್ಚಿನ ಅಕಾರ ನಿಮಗೆ ದೊರೆಯುವುದು. ಅದನ್ನು ಸದುಪಯೋಗ ಮಾಡಿಕೊಳ್ಳಿ. ಇತರರ ದ್ವೇಷ ಕಟ್ಟಿಕೊಳ್ಳುವ ಕಾರ್ಯ ಎಸಗದಿರಿ.
ತುಲಾ
ನೀವು ಏನೇ ಕಾರ್ಯ ಮಾಡಿದರೂ ಕೆಲವರನ್ನು ಮೆಚ್ಚಿಸುವುದು ಅಸಾಧ್ಯ. ಅಂತಹ ಅಸಾಧ್ಯ ಕೆಲಸಕ್ಕೆ ಪ್ರಯತ್ನಿಸದಿರುವುದೇ ಒಳಿತು. ನಿಮ್ಮ ಹಿತ ನೋಡಿಕೊಳ್ಳಿ.
ವೃಶ್ಚಿಕ
ಸಣ್ಣಪುಟ್ಟ ನೋವು ಸಂಭವಿಸಬಹುದು. ಕೆಲವರ ವರ್ತನೆ ನಿಮಗೆ ಅಸಹನೀಯ ಎನಿಸಬಹುದು. ಕುಟುಂಬಸ್ಥರ ಸಂಗದಲ್ಲಿ ಸಮಾಧಾನ.
ಧನು
ಪೂರ್ಣ ಮನಸ್ಸಿಟ್ಟು ಕಾರ್ಯ ಎಸಗಬೇಕು. ಅರೆಮನಸ್ಸಿನ ಕಾರ್ಯ ಫಲ ನೀಡದು. ದೂರದ ಬಂಧುವಿನಿಂದ ಶುಭಸುದ್ದಿ ಕೇಳುವಿರಿ. ಧನಾಗಮ.
ಮಕರ
ಹೊಸ ಕಾರ್ಯ, ಹೊಸ ಹೊಣೆಗಾರಿಕೆ ಇಂದು ನಿಮ್ಮನ್ನು ಬಿಝಿ ಆಗಿಡುವುದು. ಕೆಲವರ ಚುಚ್ಚು ಮಾತುಗಳಿಗೆ ಕಿವಿಗೊಡದಿರಿ. ಅದನ್ನು ಕಡೆಗಣಿಸಿರಿ.
ಕುಂಭ
ನಿಮ್ಮ ಮನಸ್ಥಿತಿ ಪದೇಪದೇ ಬದಲಾದೀತು. ಇದರಿಂದ ನಿಮ್ಮ ಆಪ್ತರು ಗೊಂದಲಕ್ಕೆ ಸಿಲುಕುವರು. ಆರ್ಥಿಕ ಒತ್ತಡ ನಿವಾರಣೆ.
ಮೀನ
ಯಾರನ್ನೋ ಮೆಚ್ಚಿಸುವುದು ನಿಮ್ಮ ಗುರಿ. ಅದಕ್ಕೆ ನೂರೆಂಟು ವಿಘ್ನಗಳು. ಕೊನೆಗೂ ನಿಮ್ಮ ಪ್ರಯತ್ನಕ್ಕೆ ಫಲ ಸಿಗುವುದು.