ದಿನಭವಿಷ್ಯ: ಕೆಲಸದಲ್ಲಿ ಒತ್ತಡ ಹೆಚ್ಚಿರಬಹುದು, ಆದರೆ ಉತ್ತಮವಾಗಿ ನಿಭಾಯಿಸುತ್ತೀರಿ..

ಸೋಮವಾರ, 26 ಸೆಪ್ಟೆಂಬರ್ 2022

ಮೇಷ
ವೃತ್ತಿಯಲ್ಲಿ ನಿಮಗೆ ಅನುಕೂಲಕರ ಬೆಳವಣಿಗೆ. ಆರ್ಥಿಕ ಪ್ರಗತಿ. ಉತ್ತಮ ಸಹಕಾರ. ಅಜೀರ್ಣ, ಬೆನ್ನುನೋವಿನಂತಹ ಸಮಸ್ಯೆ ಕಾಣಿಸೀತು.

ವೃಷಭ
ಉದ್ಯೋಗದಲ್ಲಿ ಉನ್ನತಿ. ಕೆಲವು ಬದ್ಧತೆಗಳನ್ನು ಇಂದು ಈಡೇರಿಸುವ ಪರಿಸ್ಥಿತಿ. ಅದನ್ನು ಪೂರೈಸಲು ಆದ್ಯತೆ ಕೊಡಿ. ಕೊಟ್ಟ ಮಾತಿಗೆ ತಪ್ಪದಿರಿ.

ಮಿಥುನ
ಸಂಗಾತಿ ಜತೆಗೆ ಭಾವನಾತ್ಮಕ ಸಂಘರ್ಷ ಉಂಟಾದೀತು. ವೃತ್ತಿಯ ಒತ್ತಡವನ್ನು ಮನೆಗೆ ತರಬೇಡಿ. ಆರ್ಥಿಕ ಸಮಸ್ಯೆಯಿಂದ ಕೆಲವು ಕೆಲಸ ಉಳಿಯುವುದು.

ಕಟಕ
ನಿಮ್ಮ ಉದ್ದೇಶ ಸಾಧನೆಗೆ ಪೂರಕವಾದ ದಿನ. ಉದ್ಯಮದಲ್ಲಿ ಫಲಪ್ರದ ಬೆಳವಣಿಗೆ. ಕೌಟುಂಬಿಕ ಪರಿಸರ ಉಲ್ಲಾಸದಾಯಕ. ಬಂಧುಗಳ ಭೇಟಿ.

ಸಿಂಹ
ನಿಮ್ಮಿಂದ ಕೆಲಸದಲ್ಲಿ ಪ್ರಮಾದಗಳು ಸಂಭವಿಸಬಹುದು. ಹಾಗಾಗಿ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಿ. ದುಂದುವೆಚ್ಚಕ್ಕೆ ತಡೆಹಾಕುವುದೊಳಿತು.

ಕನ್ಯಾ
ನಿಮಗಿಂದು ಅದೃಷ್ಟದ ದಿನ. ಯಾವುದೇ ಕೆಲಸ ಹಿಡಿದರೂ ಯಶ ಸಾಧಿಸುವಿರಿ. ಕೌಟುಂಬಿಕ ಪರಿಸರವೂ ನೆಮ್ಮದಿ ತರುವುದು. ಭಿನ್ನಮತ ನಿವಾರಣೆ.

ತುಲಾ
ನಿಮ್ಮ ಪಾಲಿಗೆ ಅತ್ಯಂತ ಯಶಸ್ವೀ ದಿನ. ನಿಮ್ಮ ಕೆಲವು ನಿರ್ಧಾರಗಳು ಉತ್ತಮ ಫಲ ನೀಡುತ್ತವೆ. ಹಣದ ಹೂಡಿಕೆಯಿಂದ ಲಾಭ ಗಳಿಸುವಿರಿ.

ವೃಶ್ಚಿಕ
ನಿಮಗಿಂದು ಪೂರಕ ದಿನ. ಕಾರ್ಯದಲ್ಲಿ ಸಫಲತೆ. ಹಣಕಾಸು ಸ್ಥಿತಿ ಸುಧಾರಿಸಲು ಸೂಕ್ತ ನಿರ್ಧಾರ ತೆಗೆದುಕೊಳ್ಳಿ. ಅದು ಯಶಸ್ಸು ಕಾಣುವುದು.

ಧನು
ಕೆಲಸದ ಒತ್ತಡ ಅಧಿಕ. ಸರಿಯಾಗಿ ಯೋಜಿಸಿ ಕಾರ್ಯ ಕೈಗೊಳ್ಳಿ. ಕೌಟುಂಬಿಕ ಸಮಸ್ಯೆ ಅಸಹನೆ ಸೃಷ್ಟಿಸೀತು. ಸಹನೆಯಿಂದ ನಡಕೊಳ್ಳಿ.

ಮಕರ
ಖಾಸಗಿ ಬದುಕು ಮತ್ತು ವೃತ್ತಿಯಲ್ಲಿ ಕೆಲವು ಸಮಸ್ಯೆ ಎದುರಿಸುತ್ತೀರಿ. ಇಂದು ಪ್ರತಿಯೊಂದು ಕೆಲಸ  ಎಚ್ಚರಿಕೆಯಿಂದ ಪರಿಶೀಲಿಸಿ ಕೈಗೊಳ್ಳಿರಿ. ಹಣದ ಅಡಚಣೆ.

ಕುಂಭ
ಮನೆಯಲ್ಲಿ ಸಂಬಂಧ ಹದಗೆಡಬಹುದು. ಪ್ರತಿಯೊಂದಕ್ಕೂ ನಿಮ್ಮ ಆತುರದ ಪ್ರತಿಕ್ರಿಯೆ ಇದಕ್ಕೆ ಕಾರಣವಾಗುವುದು. ಸಂಯಮ ಮುಖ್ಯ.

ಮೀನ
ದೀರ್ಘಕಾಲದಿಂದ ನನೆಗುದಿಗೆ ಇಟ್ಟಿದ್ದ ಪ್ರಮುಖ ನಿರ್ಧಾರ ಕಾರ್ಯಗತಗೊಳಿಸಿ. ಇನ್ನಷ್ಟು ಮೀನಮೇಷ ಎಣಿಸುವುದು ಸರಿಯಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!