ದಿನಭವಿಷ್ಯ: ಈ ರಾಶಿಯವರಿಗೆ ಇಂದು ಹೆಚ್ಚು ಕೆಲಸವೇ ಇಲ್ಲ, ಬರೀ ಬೋರು!

ಮೇಷ
ಬಾಕಿ ಇರುವ ಕಾರ್ಯ ಪೂರೈಸಲು ಆದ್ಯತೆ ಕೊಡಿ. ನೀವು ಬಯಸಿದ ವ್ಯಕ್ತಿ ನಿಮಗೆ ಹತ್ತಿರವಾಗುತ್ತಾರೆ. ಆತ್ಮೀಯ ಸಂಬಂಧ ಬೆಳೆಯಬಹುದು.

ವೃಷಭ
ವೃತ್ತಿಯಲ್ಲಿ ನಿಮಗೆ ಅನುಕೂಲಕರ ಬೆಳವಣಿಗೆ. ನಿಮ್ಮ ಅಭೀಷ್ಟ ಈಡೇರಿಕೆ. ಖಾಸಗಿ ಬದುಕಿನಲ್ಲೂ ನಿಮ್ಮ ಇಷ್ಟಾರ್ಥ ಪೂರೈಸುವುದು.

ಮಿಥುನ
ಆದಾಯ ಹೆಚ್ಚಿಸುವ ಪ್ರಯತ್ನ ನಡೆಸುವಿರಿ. ಆದರೆ ಯೋಜನೆ ಸರಿಯಾಗಿರಲಿ. ಇತರರ ಸಹಕಾರ ಸಿಗದಿದ್ದರೆ ವಿಫಲತೆ ಕಾಣುವಿರಿ. ಕೌಟುಂಬಿಕ ವಾಗ್ವಾದ.

ಕಟಕ
ವೃತ್ತಿ ಬದುಕಿನಲ್ಲಿ ಸಫಲತೆ. ನೀವು ಬಯಸಿದ ಉದ್ದೇಶ ಈಡೇರುವುದು. ನಿಮ್ಮ ಕುಟುಂಬಸ್ಥರ ಜತೆ ಹೆಚ್ಚು ಸಮಯ ಕಳೆಯಲು ಗಮನ ಕೊಡಿ.

ಸಿಂಹ
ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಗಮನ ಕೊಡಿ. ಖರ್ಚು ಕಡಿಮೆ ಮಾಡುವುದೂ ಅದರಲ್ಲಿ ಒಂದು ದಾರಿ. ಕೌಟುಂಬಿಕ ಬಿಕ್ಕಟ್ಟು ನಿವಾರಣೆ.

ಕನ್ಯಾ
ಉದ್ಯೋಗದಲ್ಲಿ ಹೆಚ್ಚು ಹೊಣೆಗಾರಿಕೆ. ಹಣದ ನಿಭಾವಣೆಯಲ್ಲಿ ಹೆಚ್ಚು ಒತ್ತಡ ಅನುಭವಿಸುವಿರಿ. ಇತರರ ವದಂತಿಯ ಮಾತು ನಂಬಿ ಕೆಡದಿರಿ. ವಿವೇಚನೆಯಿರಲಿ.

ತುಲಾ
ಸಂಗಾತಿ ಜತೆಗೆ ಉತ್ತಮ ಹೊಂದಾಣಿಕೆ. ಹಾಗಾಗಿ ಮನೆಯಲ್ಲಿ ಸೌಹಾರ್ದ ಪರಿಸ್ಥಿತಿ. ಆರ್ಥಿಕ ಪ್ರಗತಿ ತೃಪ್ತಿದಾಯಕ. ಧನಲಾಭ. ಸಾಂಸಾರಿಕ ಸಹಕಾರ.

ವೃಶ್ಚಿಕ
ಇಂದಿನದು ಯಶಸ್ವಿ ದಿನ. ಆರಂಭದಲ್ಲಿ ಕೆಲವು ಸಂಕಷ್ಟಗಳನ್ನು ಎದುರಿಸಿದರೂ ಬಳಿಕ ಎಲ್ಲವೂ ಸರಿಯಾಗುವುದು. ನಿಮ್ಮ ಉದ್ದೇಶ ಈಡೇರುವುದು.

ಧನು
ಇತರರ ಜತೆ ಉತ್ತಮ ಸಂವಹನ ಸಾಧಿಸಲಾಗದೆ ಗೊಂದಲದ ಸ್ಥಿತಿಗೆ ಸಿಲುಕುವಿರಿ. ಮೊದಲಿಗೆ ಮನಸ್ಸಿನ ದ್ವಂದ್ವ ಕಳೆದುಕೊಳ್ಳಿ. ನಿಶ್ಚಿತ ನಿರ್ಧಾರ ತಾಳಿ.

ಮಕರ
ನಿರಾಳವಾಗಿ ಕೂತು ಮೊದಲಿಗೆ ಮನಸ್ಸಿನಲ್ಲಿ ಮಂಥನ ನಡೆಸಿ. ನಿಮ್ಮ ಕಾರ್ಯದ ತಪ್ಪುಒಪ್ಪುಗಳ ಪರಾಮರ್ಶೆ ನಡೆಸಿ. ಬಳಿಕ ಸೂಕ್ತ ನಿರ್ಧಾರ ತಾಳಿರಿ.

ಕುಂಭ
ಹೆಚ್ಚಿನ ಚಟುವಟಿಕೆ ಇಲ್ಲದ ಉದಾಸ ದಿನ. ಕೆಲವು ವಿಷಯಗಳಲ್ಲಿ ಹೆಚ್ಚು ತಾಳ್ಮೆ ಪ್ರದರ್ಶಿಸಬೇಕು. ದೈಹಿಕ ಆಲಸ್ಯ,  ಮೈಕೈ ನೋವು ಉಂಟಾದೀತು.

ಮೀನ
ಬದುಕಿನಲ್ಲಿ ಗುಣಾತ್ಮಕ ಬದಲಾವಣೆ. ಆರ್ಥಿಕ ಪ್ರಗತಿ. ಉಳಿತಾಯ ಹೆಚ್ಚಳ. ನಿಮ್ಮ ಇಷ್ಟದ ವ್ಯಕ್ತಿಯನ್ನು ಭೇಟಿ ಆಗುವ ಅವಕಾಶ. ನಿಮಗೆ ಪೂರಕ ದಿನ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!