ದಿನಭವಿಷ್ಯ : ಆರ್ಥಿಕವಾಗಿ  ಹೆಚ್ಚು ಸಬಲರಾಗುವಿರಿ, ಕೊಟ್ಟ ಸಾಲ ಮರಳಿ ಬರುವುದು

ಮೇಷ
ನಿಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಉತ್ತಮ ಕಾರ್ಯಸಿದ್ಧ. ಅವಕಾಶ ದೊರಕಲಿದೆ. ಆರೋಗ್ಯ ಸುಧಾರಣೆ. ಬಂಧುಗಳಿಂದ ಸಹಕಾರ.

ವೃಷಭ
ನಿಮ್ಮ ಕಾರ್ಯದಲ್ಲಿ ಪ್ರಾಕ್ಟಿಕಲ್ ಆಗಿರಿ. ಭಾವುಕತೆ ಒಳಿತು ತರದು. ಯಾವುದೇ ವಿಚಾರವನ್ನು ಸಮಾಧಾನದಿಂದ ವಿವೇಚಿಸಿರಿ.

ಮಿಥುನ
ನಿಮ್ಮ ಪಾಲಿಗೆ ಶುಭದಿನ. ಕಾರ್ಯಸಫಲತೆ, ಆತ್ಮವಿಶ್ವಾಸ ವೃದ್ಧಿ. ಕಾಡುತ್ತಿದ್ದ ಸಮಸ್ಯೆ ಪರಿಹಾರ. ಆತ್ಮೀಯರಿಂದ ಉತ್ತಮ ಸಹಕಾರ.

ಕಟಕ
ಆತ್ಮವಿಶ್ವಾಸ ಕುಂದಿಸುವ ಬೆಳವಣಿಗೆ ಉಂಟಾದೀತು. ಕಾರ್ಯಕ್ಕೆ ಕೆಲವು ಅಡೆತಡೆ ಸಂಭವ. ದಿನದಂತ್ಯಕ್ಕೆ ಎಲ್ಲ ಸರಿಯಾಗುವುದು.

ಸಿಂಹ
ನಿಮಗಿಂದು ತೃಪ್ತಿಕರ ದಿನ. ಕೌಟುಂಬಿಕ ಭಿನ್ನಮತ, ಬಿಕ್ಕಟ್ಟು ಪರಿಹಾರ. ಆರ್ಥಿಕ ಸ್ಥಿರತೆ. ಆರೋಗ್ಯ ಸಮಸ್ಯೆ ಕಾಡದು. ಬಂಧುಜನರ ಸಹಕಾರ.

ಕನ್ಯಾ
ವಿವಾದಗಳನ್ನು ನೀವಾಗಿ ಮೈಮೇಲೆ ಎಳೆದುಕೊಳ್ಳುವ ಸಂಭವವಿದೆ. ಅಂತಹ ಯತ್ನದಿಂದ ದೂರವಿರಿ. ಆದಷ್ಟು ಹೊಂದಾಣಿಕೆ ಒಳ್ಳೆಯದು.

ತುಲಾ
ಕೆಲಸದಲ್ಲಿ ತಪ್ಪು ಉಂಟಾದೀತು. ಎಚ್ಚರವಿರಲಿ.  ಇತರರನ್ನು ಅತಿಯಾಗಿ ಅವಲಂಬಿಸಬೇಡಿ. ಅಲರ್ಜಿ ಸಮಸ್ಯೆಯಿಂದ ಕಿರಿಕಿರಿ.

ವೃಶ್ಚಿಕ
ಹೆಚ್ಚುವರಿ ಕೆಲಸದ ಹೊರೆ. ಅದರಿಂದ ಮಾನಸಿಕ ಒತ್ತಡ. ಮನೆಯಲ್ಲಿ ಮಾತಿನ ಮೇಲೆ ಹಿಡಿತವಿರಲಿ. ಅಂಕೆ ತಪ್ಪಿದ ಮಾತು ಸಂಬಂಧ ಕೆಡಿಸಬಹುದು.

ಧನು
ಆರ್ಥಿಕವಾಗಿ  ಹೆಚ್ಚು ಸಬಲರಾಗುವಿರಿ. ಕೊಟ್ಟ ಸಾಲ ಮರಳಿ ಬರುವುದು. ಕೌಟುಂಬಿಕ ಒತ್ತಡವೊಂದು ನಿವಾರಣೆ. ಮನಸ್ಸಿಗೆ ನಿರಾಳತೆ.

ಮಕರ
ವೃತ್ತಿ ಕ್ಷೇತ್ರದಲ್ಲಿ ಅಧಿಕ ಒತ್ತಡ. ತೃಪ್ತಿ ತಾರದ ಬೆಳವಣಿಗೆ. ಸಂಗಾತಿ ಜತೆಗೆ ವಾಗ್ವಾದ ಉಂಟಾದೀತು. ಅದನ್ನು ವಿಕೋಪಕ್ಕೆ ಕೊಂಡೊಯ್ಯದಿರಿ.

ಕುಂಭ
ಸಂಬಂಧದಲ್ಲಿ ಅಹಂಕಾರ ಸಲ್ಲದು. ಅದು ಬಾಂಧವ್ಯ ಕೆಡಿಸಬಹುದು. ನಿಮ್ಮ ವರ್ತನೆಯನ್ನು ತಿದ್ದಿಕೊಳ್ಳಬೇಕು. ಸಂವಹನ ಕೊರತೆ.

ಮೀನ
ಪ್ರಮುಖ ಕಾರ್ಯವೊಂದನ್ನು ಮಾಡಿ ಮುಗಿಸಿದ ತೃಪ್ತಿ. ಕಷ್ಟವೆಂದುಕೊಂಡ ಕಾರ್ಯ ಸುಲಭದಲ್ಲಿ ಮುಗಿಯುವುದು. ಕೌಟುಂಬಿಕ ನೆಮ್ಮದಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!