ದಿನಭವಿಷ್ಯ: ಈ ರಾಶಿಯವರಿಗೆ ಇಂದು ಉತ್ಸಾಹದ ದಿನ, ಕಾರ್ಯಗಳೆಲ್ಲ ಸಲೀಸು..

ಮೇಷ
ಇತರರ ಕುರಿತಾದ ನಿಮ್ಮ ಭಾವನೆ, ಪ್ರೀತಿ ವ್ಯಕ್ತಪಡಿಸಲು ಹಿಂಜರಿಯಬೇಕಾಗಿಲ್ಲ. ನಿಮಗೆ ಸೂಕ್ತ ಸ್ಪಂದನೆ ದೊರಕಲಿದೆ. ಆರ್ಥಿಕ ಸ್ಥಿತಿ ಉತ್ತಮ.

ವೃಷಭ
ಅತ್ಮವಿಶ್ವಾಸ, ಧೈರ್ಯ ಇಂದು ಹೆಚ್ಚು. ಹಾಗಾಗಿ ಯಾವುದೇ ಕಾರ್ಯ ಕಷ್ಟವೆಂದೆನಿಸದು. ಸಮಸ್ಯೆ ಇರುವುದು ಆಪ್ತ ಬಂಧುಗಳ ವರ್ತನೆಯಲ್ಲಿ.

ಮಿಥುನ
ಪ್ರತಿಕೂಲ ಸನ್ನಿವೇಶ ಇದ್ದರೂ ಅದನ್ನು ಸರಿಯಾಗಿ ನಿಭಾಯಿಸುವಿರಿ. ಎಲ್ಲರ ಜತೆ ಹೊಂದಿಕೊಂಡು ಬಾಳುವಲ್ಲಿ ಯಶ ಕಾಣುವಿರಿ.

ಕಟಕ
ಸಮಸ್ಯೆ ಕಾಡುತ್ತದೆ. ಅದು ನಿಮ್ಮಿಂದ ಉಂಟಾದ ಸಮಸ್ಯೆ ಅಲ್ಲ. ಅದಕ್ಕೆ ಬೇರೆಯವರು ಕಾರಣರು. ಸೂಕ್ಷ್ಮ ನಿಭಾವಣೆ ಅಗತ್ಯ.

ಸಿಂಹ
ಎಲ್ಲರ ಜತೆ ಸುಲಲಿತವಾಗಿ ಬೆರೆಯಲು ಸಫಲರಾಗುವಿರಿ. ಇದು ಅವರೊಂದಿಗೆ ಸಂಬಂಧ ವೃದ್ಧಿಸಲು ಸಹಾಯಕ ಆಗುವುದು.

ಕನ್ಯಾ
ಉತ್ಸಾಹದ ದಿನ.  ಕಾರ್ಯಗಳೆಲ್ಲ ಸಲೀಸು. ಹಣದ ವಿಚಾರದಲ್ಲಿ ನಿಮಗೆ ಪೂರಕ ಬೆಳವಣಿಗೆ. ಅನವಶ್ಯ ಖರ್ಚು ನಿಯಂತ್ರಣ ಅವಶ್ಯ.

ತುಲಾ
ನಿಮ್ಮ ಮೇಲಧಿಕಾರಿ ಜತೆ ಉತ್ತಮ ಹೊಂದಾಣಿಕೆ ಸಾಧಿಸಲು ಸಫಲ. ಹಾಗಾಗಿ ಪ್ರತಿಕೂಲ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸುವಿರಿ.

ವೃಶ್ಚಿಕ
ಸಮಸ್ಯೆಯನ್ನು ಕೌಶಲದಿಂದ ನಿಭಾಯಿಸಿ. ಆತುರದ ಪ್ರತಿಕ್ರಿಯೆ ತೋರದಿರಿ. ಖಾಸಗಿ ಬದುಕಲ್ಲಿ ಶುಭ ಬೆಳವಣಿಗೆ ಉಂಟಾಗಬಹುದು.

ಧನು
ಅನಿರೀಕ್ಷಿತ ಪ್ರಸಂಗಗಳಿಗೆ ಸಾಕ್ಷಿಯಾಗುವಿರಿ. ಕೆಲವು ಆಘಾತ ತಂದರೆ, ಇನ್ನು ಕೆಲವು ಹರ್ಷ ತರಲಿದೆ. ನಿಮ್ಮ ಸುತ್ತಲಿನ ನಯವಂಚಕರ ಕುರಿತು ಎಚ್ಚರದಿಂದಿರಿ.

ಮಕರ
ನಿಮ್ಮ ಪ್ರಮುಖ ನಿರ್ಧಾರಕ್ಕೆ ಕುಟುಂಬ ಸದಸ್ಯರ ವಿರೋಧ ಬಂದೀತು. ಕಠಿಣ ಶ್ರಮಕ್ಕೆ ಉತ್ತಮ ಪ್ರತಿಫಲ ಪಡೆಯುವಿರಿ. ವಿದ್ಯಾರ್ಥಿಗಳಿಗೆ ಯಶ.

ಕುಂಭ
ವೃತ್ತಿ ಕ್ಷೇತ್ರದಲ್ಲಿ  ನಿಷ್ಠುರ ವರ್ತನೆ ತೋರದಿರಿ. ಅದರಿಂದ ಬಾಂಧವ್ಯ ಹಾಳಾದೀತು. ಎಲ್ಲರ ಜತೆ ಅರಿತು ವ್ಯವಹರಿಸಲು ಆದ್ಯತೆ ಕೊಡಿರಿ.

ಮೀನ
ನಿಮ್ಮೆಲ್ಲಾ ಸಮಸ್ಯೆ ಮರೆತು ಜೀವನ ಆನಂದಿಸುವ ಕಾಲವಿದು. ಕೆಟ್ಟ ಅನುಭವ ಮರೆಯಿರಿ. ಸಂತೋಷದ ವಿಷಯಕ್ಕೆ ಗಮನ ಕೊಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!