ಮೇಷ
ಹಳೆಯ ಸ್ನೇಹಿತರ ಸಂಪರ್ಕ. ವೃತ್ತಿಯಲ್ಲಿ ಸಣ್ಣಪುಟ್ಟ ಕಿರಿಕಿರಿಗಳು. ಕೆಲವರ ಅಸಹಕಾರ. ಮಾನಸಿಕ ಒತ್ತಡ. ಸಂಜೆ ವೇಳೆಗೆ ಸಮಾಧಾನ.
ವೃಷಭ
ಭಾವನಾತ್ಮಕ ಏರುಪೇರು. ಸಂಬಂಧ ಗಳನ್ನು ಪರಾಮರ್ಶೆ ಮಾಡಿಕೊಳ್ಳುವ ಸಮಯ. ಆತ್ಮೀಯರು ದೂರವಾಗುವರು.
ಮಿಥುನ
ನಿಮ್ಮ ಹೊಸ ಯೋಜನೆ ನಿರೀಕ್ಷಿತ ಫಲ ನೀಡದು. ನಿಮ್ಮ ಶ್ರಮ ವ್ಯರ್ಥವಾಗುವುದು. ಆರ್ಥಿಕ ಒತ್ತಡವೂ ಹೆಚ್ಚಲಿದೆ.
ಕಟಕ
ವೃತ್ತಿಯಲ್ಲಿ ಸಮಸ್ಯೆ. ಕೆಲವರಿಂದ ವಿಘ್ನ. ಕೌಟುಂಬಿಕವಾಗಿಯೂ ಒತ್ತಡ ಹೆಚ್ಚಿಸುವ ಬೆಳವಣಿಗೆ. ಸಮಚಿತ್ತ ದಿಂದ ವ್ಯವಹರಿಸಿ.
ಸಿಂಹ
ನಿಮ್ಮ ಕೆಲಸಕ್ಕೆ ಪ್ರಶಂಸೆ ಬಯಸುವಿರಿ. ಆದರೆ ನಿಮ್ಮ ಕೆಲಸ ಮೆಚ್ಚಿಕೊಳ್ಳುವವರಿಗಿಂತ ಟೀಕಿಸುವವರೇ ಜಾಸ್ತಿ. ಆ ಬಗ್ಗೆ ಚಿಂತೆ ಬೇಡ.
ಕನ್ಯಾ
ಬದಲಾವಣೆಯ ಗಾಳಿ ಬೀಸಲಿದೆ. ಅದಕ್ಕೆ ಎದುರಾಗಿ ಹೋಗದಿರಿ. ನೀವೂ ಅದರೊಂದಿಗೆ ಸಾಗಿ. ಹೊಂದಾಣಿಕೆಯ ಬದುಕು ಒಳ್ಳೆಯದು.
ತುಲಾ
ನಿಮ್ಮ ಕಾರ್ಯದಲ್ಲಿ ಇಂದು ಹೆಚ್ಚು ಶ್ರಮ ಹಾಕಬೇಕಾಗುವುದು. ಕೆಲವರಿಂದ ದಿನವಿಡೀ ಕಿರಿಕಿರಿ. ಅಪೂರ್ಣ ಕೆಲಸ ಒತ್ತಡ ಹೇರುತ್ತದೆ.
ವೃಶ್ಚಿಕ
ನಿಮ್ಮ ಮೆಚ್ಚಿನ ಕಾರ್ಯ ಕೈಗೆತ್ತಿಕೊಳ್ಳಿ. ಇತರರ ಒತ್ತಡಕ್ಕೆ ಮಣಿಯ ಬೇಡಿ. ಕೌಟುಂಬಿಕ ಅಶಾಂತಿ ನಿವಾರಣೆ. ಮಾನಸಿಕ ನಿರಾಳತೆ.
ಧನು
ಕುಟುಂಬಕ್ಕೆ ಹೆಚ್ಚು ಆದ್ಯತೆ ಕೊಡಿ. ಅವರ ಕಾಳಜಿ ಅರಿತುಕೊಳ್ಳಿ. ಹಿರಿಯರ ಆರೋಗ್ಯ ಚಿಂತೆಗೆ ಕಾರಣವಾದೀತು. ಆರ್ಥಿಕ ಬಿಕ್ಕಟ್ಟು.
ಮಕರ
ಕೌಟುಂಬಿಕ ಕಾರ್ಯದಲ್ಲಿ ಹೆಚ್ಚು ವ್ಯಸ್ತ. ಕೆಲವು ಕಾರ್ಯಗಳೂ ಬಾಕಿ ಉಳಿಯುತ್ತವೆ. ಬಂಧುಗಳ ಜತೆಗೆ ವಿರಸ ಉಂಟಾದೀತು.
ಕುಂಭ
ಕೌಟುಂಬಿಕ ಬಿಕ್ಕಟ್ಟು. ಕುಟುಂಬದ ಬೇಡಿಕೆ ಪೂರೈಸುವುದು ನಿಮ್ಮ ಕರ್ತವ್ಯವಾಗಲಿ. ಕೆಲ ವಿಷಯದಲ್ಲಿ ತ್ಯಾಗ ಅಗತ್ಯವಾದೀತು.
ಮೀನ
ಮನೆಯಲ್ಲಿ ಅಶಾಂತಿ. ನೆಮ್ಮದಿ ದೂರ. ಹತಾಶೆ ಬೇಡ, ಒಳ್ಳೆ ಕಾಲ ಬಂದೇ ಬರುತ್ತದೆ ಎಂಬ ವಿಶ್ವಾಸವಿರಲಿ. ಹನುಮನ ಪ್ರಾರ್ಥನೆ ಮಾಡಿರಿ.


