ದಿನಭವಿಷ್ಯ: ದಿನಮುಗಿಯುವುದರೊಳಗೆ ಗುಡ್‌ನ್ಯೂಸ್‌ ಗ್ಯಾರೆಂಟಿ! ಇಂದು ನಿಮ್ಮ ವೇತನ ಹೆಚ್ಚಳ

ಮೇಷ
ವೇತನದಲ್ಲಿ ಏರಿಕೆ. ಹೆಚ್ಚುವರಿ ಆದಾಯದ ದಾರಿ ತೋರಲಿದೆ. ನಿಮ್ಮ ವಕ್ತಿತ್ವ ಇತರರನ್ನು ಆಕರ್ಷಿಸಲಿದೆ. ಸಂತಾನ ಆಕಾಂಕ್ಷಿಗಳಿಗೆ ಶುಭದಿನ.

ವೃಷಭ
ವೃತ್ತಿ ಜಾಗದಲ್ಲಿ ನಯವಂಚಕರ ಕುರಿತು ಎಚ್ಚರದಿಂದಿರಿ. ಪ್ರಮುಖ ವಿಷಯಗಳಲ್ಲಿ ನಿಮ್ಮ ಮನಸ್ಸಾಕ್ಷಿ ಪ್ರಕಾರ ನಡಕೊಳ್ಳಿ.

ಮಿಥುನ
ಆರ್ಥಿಕ ಸ್ಥಿತಿಯನ್ನು ಸರಿಯಾಗಿ ನಿಭಾಯಿಸಿ. ಖರ್ಚು ತಗ್ಗಿಸಿ. ಪ್ರೀತಿಯ ಅಹವಾಲು ಪೂರಕ ಸ್ಥಿತಿ ಸೃಷ್ಟಿಸುವುದು. ವಿವಾಹ ಸಂಬಂಧ ಉಂಟಾದೀತು.

ಕಟಕ
ದೀರ್ಘಾವಽ ಸಂಬಂಧವೊಂದು ಇಂದು ಆರಂಭವಾದೀತು. ಆದರೆ ವಿವೇಕ ಕಳಕೊಳ್ಳದಿರಿ. ವ್ಯಾಪಾರ ಪಾಲುದಾರಿಕೆ ಲಾಭ ತರುವುದು.

ಸಿಂಹ
ಅಚ್ಚರಿಯ ಬೆಳವಣಿಗೆ ಸಂಭವ. ಅದು ನಿಮಗೆ ಒಳಿತನ್ನೆ ತರಬಹುದು. ಕುಟುಂಬ ಸದಸ್ಯರಿಗೆ ಹೆಚ್ಚು ಸಮಯ ಕೊಡಿ. ಖರ್ಚು ನಿಯಂತ್ರಣದ ತೃಪ್ತಿ.

ಕನ್ಯಾ
ಹೆಚ್ಚು ಚಟುವಟಿಕೆಯ ದಿನವಿದು. ನಿಮ್ಮ ಸಾಮರ್ಥ್ಯದ ಪರೀಕ್ಷೆ ನಡೆಯಲಿದೆ. ಖಾಸಗಿ ವಿಚಾರದಲ್ಲಿ ಪ್ರಮುಖ ನಿರ್ಧಾರ ತಾಳದಿರಿ.

ತುಲಾ
ನೀವು ಹಿಂದೆ ಮಾಡಿದ ಕಾರ್ಯವೊಂದು ಈಗ ಕೆಲವರ ಅಸಂತೃಪ್ತಿಗೆ ಕಾರಣವಾದೀತು. ಆದರೆ ನಿಧಾನವಾಗಿ ಎಲ್ಲವೂ ಸರಿಯಾಗಲಿದೆ.

ವೃಶ್ಚಿಕ
ನಿಮ್ಮ ಸಮಸ್ಯೆಗೆ ನೀವೇ ಕಾರಣ. ಅದರ ಪರಿಹಾರವೂ ನಿಮ್ಮಿಂದಲೆ ಆಗಬೇಕು. ಅನ್ಯರನ್ನು ನಂಬಿ ಕೂರದಿರಿ. ಆತ್ಮ ಗೌರವ ಕಳಕೊಳ್ಳದಿರಿ.

ಧನು
ಮನಶ್ಯಾಂತಿಗಾಗಿ ಏಕಾಂತ ಬಯಸುವಿರಿ. ಲೌಕಿಕ ವಿಷಯದಿಂದ ದೂರ ಸರಿಯಬೇಡಿ. ನಿಮ್ಮ ಪಾಲಿನ ವಿಶೇಷ ವ್ಯಕ್ತಿಯ ಭೇಟಿ ಸಾಧ್ಯವಾಗಲಿದೆ.

ಮಕರ
ಪ್ರೀತಿಪಾತ್ರರ ಸಂಗದಲ್ಲಿ ದಿನ ಕಳೆಯುವ ಅವಕಾಶ. ಆದರೆ ಸಂಜೆ ವೇಳೆಗೆ ಏಕಾಂಗಿತನದ ನೋವು. ವಿವಾಹಿತರಿಗೆ ಶುಭಕರ ಬೆಳವಣಿಗೆ.

ಕುಂಭ
ಸಹೋದ್ಯೋಗಿ ಜತೆ ಆತ್ಮೀಯ ಸಂಬಂಧ ಬೆಳೆದೀತು. ಆದಾಯ ಹೆಚ್ಚಳ ನಿರೀಕ್ಷಿಸಿ. ಕೌಟುಂಬಿಕ ಸಮಸ್ಯೆ ಪರಿಹಾರ ಕಾಣಲಿದೆ.

ಮೀನ
ಚಿಪ್ಪಿನಿಂದ ಹೊರಬಂದು ಎಲ್ಲರ ಜತೆ ಬೆರೆಯಲು ಕಲಿಯಿರಿ. ಅನವಶ್ಯ ವಾಗ್ವಾದದಿಂದ ದೂರವಿರಿ. ಹೊಟ್ಟೆ ಕೆಡುವ ಸಾಧ್ಯತೆಯಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!