ದಿನಭವಿಷ್ಯ: ಹೊಸ ವ್ಯವಹಾರಕ್ಕೆ ಕೈ ಹಾಕಲಿದ್ದೀರಾ? ನಿಶ್ಚಿಂತೆಯಿಂದ ಹೂಡಿಕೆ ಮಾಡಿ

ಮೇಷ
ಹೊಸ ವ್ಯವಹಾರದಲ್ಲಿ ಹಣ ಹೂಡುವುದು ಲಾಭ ತರಲಿದೆ. ಕುಟುಂಬದಲ್ಲಿ  ಸಣ್ಣ ವಿಷಯಕ್ಕೆ ವೈಮನಸ್ಸು ಸಂಭವ. ಸಹನೆಯಿಂದ ನಡಕೊಳ್ಳಿ.

ವೃಷಭ
ಉದಾಸೀನತೆ ಬಿಟ್ಟು ಕೆಲಸವನ್ನು ಸಕಾಲದಲ್ಲಿ ಮುಗಿಸಲು ಆದ್ಯತೆ ಕೊಡಿ. ಒತ್ತಡ ಅಧಿಕವಾದೀತು. ಬಂಧುಮಿತ್ರರಿಂದ ನೆರವು ಅಲಭ್ಯ.

ಮಿಥುನ
ಸಂಗಾತಿ ಜತೆ  ಭಿನ್ನಮತ. ಮಾತು ಹದ ತಪ್ಪದಂತೆ ನೋಡಿಕೊಳ್ಳಿ.ಸಣ್ಣ ವಿಷಯ ವಿಕೋಪಕ್ಕೆ ಕೊಂಡೊಯ್ಯದಿರಿ. ಆರ್ಥಿಕ ಒತ್ತಡ.

ಕಟಕ
ಮನೆಯಲ್ಲಿ ವಾಗ್ವಾದ ಸಂಭವ. ಮನೆಯವರ  ಅಭಿಪ್ರಾಯಕ್ಕೂ ಮನ್ನಣೆ ನೀಡಿ. ಆರೋಗ್ಯದ ಬಗ್ಗೆ  ಗಮನ ಕೊಡಿರಿ. ಆಹಾರ ಹಿತಮಿತವಿರಲಿ.

ಸಿಂಹ
ಸಂಬಂಧದಲ್ಲಿ  ಗೊಂದಲ. ಕೆಲವು ಮಾತು ಅಥವಾ ವರ್ತನೆ ತಪ್ಪಾಭಿಪ್ರಾಯಕ್ಕೆ ಕಾರಣ ವಾದೀತು. ಆತುರದ ತೀರ್ಮಾನ ಕೈಗೊಳ್ಳದಿರಿ.

ಕನ್ಯಾ
ಇತರರ ಜತೆ ವಿನಯ ದಿಂದ ವ್ಯವಹರಿಸಿ. ನಿಮ್ಮ ವರ್ತನೆಯಿಂದ ಇತರರ ವಿರೋಧ ಕಟ್ಟಿಕೊಳ್ಳುವ ಸಾಧ್ಯತೆ. ಹಣದ ಒತ್ತಡ ನಿವಾರಣೆ.

ತುಲಾ
ಯಾವುದೋ ವಿಷಯದಲ್ಲಿ ನಿಮಗೆ ಗೊಂದಲವಿದೆ.  ನಿರ್ಧಾರ ತಾಳಲಾಗದೆ ತೊಳಲಾಟ.  ಸಲಹೆ ಪಡೆದು ಮುಂದುವರಿಯಿರಿ.

ವೃಶ್ಚಿಕ
ಗ್ರಹಗತಿ ನಿಮಗಿಂದು ಪೂರಕವಾಗಿದೆ. ಯೋಚಿ ಸಿದ ಕಾರ್ಯಸಿದ್ಧಿ.ಆದರೆ ಅದಕ್ಕೆ ನಿಮ್ಮ ಶ್ರಮವೂ ಬೇಕಾಗುತ್ತದೆ. ಕೌಟುಂಬಿಕ ಒತ್ತಡ.

ಧನು
ಕೌಟುಂಬಿಕವಾಗಿ ಸೌಹಾರ್ದ, ಸಾಮರಸ್ಯ. ವೃತ್ತಿಯಲ್ಲಿ  ಇತರರ  ಜತೆ ಸಂಘರ್ಷ ನಡೆದೀತು. ಅನಿರೀಕ್ಷಿತ  ಖರ್ಚು ಒದಗಿ ಬರುವುದು.

ಮಕರ
ಸಣ್ಣಪುಟ್ಟ ಜಗಳ, ವಾಗ್ವಾದದಿಂದ ದೂರವಿರಿ. ವೃತ್ತಿಯಲ್ಲಿ ಕೆಲಸದ ಹೊರೆ ಹೆಚ್ಚಳ. ಧನಲಾಭ. ಜತೆಗೇ ಖರ್ಚೂ ಹೆಚ್ಚಳ. ಬಂಧುಗಳ ಭೇಟಿ.

ಕುಂಭ
ಬದಲಾದ ಪರಿಸ್ಥಿತಿಗೆ ಹೊಂದಿಕೊಳ್ಳಲು ಕಲಿಯಿರಿ. ನಿಮ್ಮ ನಡೆ ಕೆಲವರಿಗೆ ಸಮಸ್ಯೆ ಸೃಷ್ಟಿಸಬಹುದು. ಸಹನೆಯಿರಲಿ.

ಮೀನ
ಕೆಲಸದ ಒತ್ತಡ ಅಧಿಕ. ವಿರಾಮ ಪಡೆದು ಆತ್ಮೀಯರ ಜತೆ ಕಾಲ ಕಳೆಯುವ ಯೋಜನೆಗೆ  ವಿಘ್ನ. ಕೌಟುಂಬಿಕ ಹೊಣೆ ಹೆಚ್ಚಳ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here