ದಿನಭವಿಷ್ಯ: ಹಲವು ದಿನಗಳಿಂದ ಚಿಂತೆಗೆ ಕಾರಣವಾಗಿದ್ದ ವಿವಾದಕ್ಕೆ ಇಂದು ಪರಿಹಾರ ಸಿಗಲಿದೆ

ಮೇಷ
ಆರೋಗ್ಯ ಸುಸ್ಥಿರ. ಚಿಂತೆ ಅನವಶ್ಯ. ಕಾರ್ಯದಲ್ಲಿ ಸಫಲತೆ. ಸ್ಪರ್ಧಾತ್ಮಕ ವಿಷಯದಲ್ಲಿ ಗೆಲುವು ನಿಶ್ಚಿತ. ಕೌಟುಂಬಿಕ ಸಾಮರಸ್ಯ.

ವೃಷಭ
ದೈಹಿಕ ಶ್ರಮ ಹೆಚ್ಚು. ಮನೆಯಲ್ಲಿನ ಬೇಡಿಕೆ ಈಡೇರಿಸಲು ಹೆಚ್ಚು ಶ್ರಮ ಪಡುವಿರಿ. ಹಣದ ಕೊರತೆ ಕಾಡಬಹುದು. ಮಿತವ್ಯಯ ಸಾಧಿಸಿ.

ಮಿಥುನ
ಯಾವುದೇ ಕೆಲಸ ಸಫಲವಾಗಲು ಪರಸ್ಪರ ಸಹಕಾರ ಅಗತ್ಯ. ಬಿಗುಮಾನ ಬಿಡಿ.  ಹೊಂದಾಣಿಕೆಯಿಂದ ವರ್ತಿಸಿರಿ.

ಕಟಕ
ಕಾಡುತ್ತಿದ್ದ ದೈಹಿಕ ನೋವಿಗೆ ಶಮನ ದೊರಕುವುದು. ಖರ್ಚು ಹೆಚ್ಚಲಿದೆ. ಕೌಟುಂಬಿಕ ಬಿಕ್ಕಟ್ಟು ಪರಿಹಾರ. ಮಾನಸಿಕ ನಿರಾಳತೆ.

ಸಿಂಹ
ಬಂಧುಗಳಿಂದ ಲಾಭವಾಗಲಿದೆ. ಚಿಂತೆಗೆ ಕಾರಣವಾಗಿದ್ದ ವಿವಾದ ಪರಿಹಾರ. ನೆರೆಯವರ ಜತೆಗೆ ಸಂಘರ್ಷ ತಪ್ಪಿಸುವುದೊಳಿತು.

ಕನ್ಯಾ
ನಿಮ್ಮ ಮುಂದೆ ಹಲವು ಅವಕಾಶಗಳು. ಆಯ್ಕೆಯ ಗೊಂದಲ. ಯೋಚಿಸಿ ನಿರ್ಧಾರ ತಾಳಿ. ಆರೋಗ್ಯದ ಕಡೆ ಹೆಚ್ಚು ಗಮನ ಕೊಡಿ. ಪಥ್ಯಾಹಾರ ಒಳಿತು.

ತುಲಾ
ಆದ್ಯತೆಯ ಮೇರೆಗೆ ಕಾರ್ಯಾಚರಿಸಿ. ಅಮುಖ್ಯ ಕಾರ್ಯಗಳಿಗೆ ಮಹತ್ವ ಕೊಡಬೇಡಿ. ನೆಗೆಟಿವ್ ಚಿಂತನೆಯವರ ಪ್ರಭಾವಕ್ಕೆ ಸಿಲುಕಬೇಡಿ.

ವೃಶ್ಚಿಕ
ನಿಮ್ಮ ಆಹಾರ ಸೇವನೆಯಲ್ಲಿ ಹೆಚ್ಚು ಶಿಸ್ತು ರೂಪಿಸಿ. ಅನಿಯಮಿತ ಆಹಾರದಿಂದ ಆರೋಗ್ಯ ಸಮಸ್ಯೆ ಸಂಭವ. ಕೌಟುಂಬಿಕ ಅಸಹಕಾರ.

ಧನು
ಕೆಲ ವಿಷಯಗಳಲ್ಲಿ ಕುಟುಂಬ ಸದಸ್ಯರ ಜತೆ ರಹಸ್ಯ ಬೇಡ. ಅದು ವಿರಸಕ್ಕೆ ಕಾರಣ ಆದೀತು. ಮುಕ್ತ ಮಾತುಕತೆ ಒಳ್ಳೆಯದು.

ಮಕರ
ವೃತ್ತಿಯಲ್ಲಿ ಹೆಚ್ಚು ಹೊಣೆಗಾರಿಕೆ. ಅದನ್ನು ನಿಭಾಯಿಸಲು ಹಿಂಜರಿಕೆ ಬೇಡ. ಮನೆಯಲ್ಲಿ ಮಾತಿನ ಸಂಘರ್ಷ ನಡೆದೀತು. ಸಂಯಮ ಅವಶ್ಯ.

ಕುಂಭ
ಮನೆಯಲ್ಲಿನ ಸಮಸ್ಯೆ ಇಂದು ಪರಿಹಾರ ಕಾಣಲಿದೆ. ಇನ್ನಿತರ ವಿಷಯಗಳತ್ತ ಗಮನ ಹರಿಸಲು ಸಕಾಲ. ಇನ್ನು ವಿಳಂಬ ಮಾಡದಿರಿ.

ಮೀನ
ಪ್ರಮುಖ ವಿಷಯ ದಲ್ಲಿ ಅನಿಶ್ಚಿತತೆ ಕಾಡುವುದು. ಗೊಂದಲಕ್ಕೆ ಆಸ್ಪದ ನೀಡದಿರಿ. ಹಿತೈಷಿಗಳ ಸಲಹೆ ಪಡೆದು ಮುಂದಿನ ಹೆಜ್ಜೆಯಿಡಿ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!