ದಿನಭವಿಷ್ಯ: ಸ್ವಲ್ಪ ಕಷ್ಟವಾದರೂ ಪರವಾಗಿಲ್ಲ, ಇಂದು ಅತ್ಯುತ್ತಮ ಫಲ ದೊರೆಯಲಿದೆ

ಮೇಷ
ವಿರಾಮವಾಗಿ ದಿನ ಕಳೆಯುವ ಯೋಜನೆ ನಿಮ್ಮದಾದರೂ ಅದಕ್ಕೆ ಅವಕಾಶ ದೊರಕದು. ಯಾರದೋ ಚಿಂತೆ ನಿಮ್ಮ ತಲೆಗೇರಲಿದೆ.

ವೃಷಭ
ಸಂಬಂಧದಲ್ಲಿ  ಬಿಕ್ಕಟ್ಟು. ಆಪ್ತರ ಸಲಹೆಗೆ ಕಿವಿಗೊಡಿ. ಅನ್ಯರ ಸಮಸ್ಯೆ ಮೈಮೇಲೆ ಎಳೆದುಕೊಳ್ಳದಿರಿ. ಅದರಿಂದ ದೂರವಿರಿ.

ಮಿಥುನ
ಏಕಾಗ್ರಚಿತ್ತತೆ ಕದಡುವ ಹಲವು ವಿಚಾರ ನಿಮ್ಮ ಸುತ್ತಲಿವೆ. ಅದರಿಂದ ದೂರವಿರಿ. ನಿಮ್ಮ ಪ್ರಗತಿಯ ಮಾರ್ಗ ವಿವೇಕದಿಂದ ಆರಿಸಿರಿ.

ಕಟಕ
ನಿಮ್ಮ ಮೃದು ನೀತಿ ಮುಂದುವರಿಸಿದರೆ ಪ್ರತಿಕೂಲವಾದೀತು. ಕೆಲ ವಿಷಯಗಳಲ್ಲಿ ಕಠಿಣ ನಿಲುವು ತಾಳಿ. ಆರ್ಥಿಕ ಒತ್ತಡ ಹೆಚ್ಚುವುದು.

ಸಿಂಹ
ಕೆಲಸದ ಮಧ್ಯೆ ವಿರಾಮ ಪಡೆಯಲು ಮರೆಯದಿರಿ. ನಿರಂತರ ಕೆಲಸ ಆರೋಗ್ಯ ಕೆಡಿಸಬಹುದು. ಕೌಟುಂಬಿಕ ವಿರಸ.

ಕನ್ಯಾ
ಮನೆಯಲ್ಲಿ ಕಲಹ ಉಂಟಾದರೆ ಅದನ್ನು ಉಲ್ಬಣಗೊಳಿಸದಿರಿ. ಬೇಗನೆ ಶಮನಗೊಳಿಸಿ. ಹಿರಿಯರಿಗೆ ಆರೋಗ್ಯ ಸಮಸ್ಯೆ.

ತುಲಾ
ಸಮಸ್ಯೆಯನ್ನು ಹಾಗೆಯೆ ಬಿಡಬೇಡಿ. ಅದನ್ನು ದಿಟ್ಟವಾಗಿ ಎದುರಿಸಿ. ಕಷ್ಟವಾದರೂ ಬಳಿಕ ಉತ್ತಮ ಫಲ ಪಡೆಯುವಿರಿ.

ವೃಶ್ಚಿಕ
ಬಿಡುವಿರದ ದಿನ. ಬಹಳಷ್ಟು ವಿಷಯ ಒಂದೇ ದಿನ ಇತ್ಯರ್ಥ ಪಡಿಸಬೇಕಾದ ಒತ್ತಡ.ತಾಳ್ಮೆ ಕಳಕೊಳ್ಳದಿರಿ. ವಾಗ್ವಾದದಿಂದ ದೂರವಿರಿ.

ಧನು
ಬಾಕಿ ಇರುವ ಕಾರ್ಯ ಮುಗಿಸಿರಿ. ಸಂಬಂಧವನ್ನು ಲಘುವಾಗಿ ಪರಿಗಣಿಸಬೇಡಿ. ಪ್ರೀತಿಪಾತ್ರರಿಗೆ ಕೊಟ್ಟ ಬದ್ಧತೆ ಮರೆಯದಿರಿ.

ಮಕರ
ಹೆಚ್ಚಿನ ಹೊಣೆ ನಿಮ್ಮ ಮೇಲೆ ಬೀಳಲಿದೆ. ಇತರರ ಕಾರ್ಯ ನೀವು ಮಾಡಬೇಕಾದೀತು. ಕೌಟುಂಬಿಕ ಮನಸ್ತಾಪ ಬೇಗ ಪರಿಹರಿಸಿ.

ಕುಂಭ
ಮನೆಯಲ್ಲಿ ಭಿನ್ನಾಭಿಪ್ರಾಯ. ವದಂತಿ ನಿಮ್ಮ ನೆಮ್ಮದಿ ಹಾಳು ಮಾಡಬಹುದು. ಇತರರ ವಿಷಯದಲ್ಲಿ ಹಸ್ತಕ್ಷೇಪ ಮಾಡದಿರಿ.

ಮೀನ
ಬಿಕ್ಕಟ್ಟಿನಿಂದಲೇ ದಿನ ಆರಂಭ. ದಿನವಿಡೀ ಬಿಡುವಿರದು. ಆದರೂ ಮಾಡಿದ ಕೆಲಸ ತೃಪ್ತಿ ತರಲಿದೆ. ಸೂಕ್ತ ನೆರವೂ ದೊರಕಲಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!