ಮೇಷ
ಶೀತ, ಜ್ವರದಂತಹ ಅನಾರೋಗ್ಯ ಕಾಡಬಹುದು. ತುಸು ಮುನ್ನೆಚ್ಚರ ವಹಿಸಿದರೆ ಎಲ್ಲ ಸರಿಯಾಗುವುದು. ಖರ್ಚು ಅಧಿಕ.
ವೃಷಭ
ಒತ್ತಡ ಹೆಚ್ಚಿ ಸುವ ಬೆಳವಣಿಗೆ. ತಾಳ್ಮೆ ಇರಲಿ. ಕುಟುಂಬ ಸದಸ್ಯರ ಕಾಳಜಿ ವಹಿಸಿ. ಅವರಿಗೆ ನೋವಾಗದಂತೆ ನೋಡಿಕೊಳ್ಳಿ.
ಮಿಥುನ
ನಿಮ್ಮ ನಿರೀಕ್ಷೆ ಇಂದು ಈಡೇರದು. ಬಯಸಿದ ಅವಧಿಯಲ್ಲಿ ಕೆಲಸ ಮುಗಿಯದು. ಮಾನಸಿಕ ಒತ್ತಡದಿಂದ ಆರೋಗ್ಯ ಸಮಸ್ಯೆ ಉಂಟಾದೀತು.
ಕಟಕ
ಬಯಸಿದ ಕಾರ್ಯ ಇಂದು ಕೈಗೂಡಲಿದೆ. ವೃತ್ತಿಯಲ್ಲಿ ಉತ್ತಮ ಸಂವಹನ ಸಾಧಿಸಲು ನಯವಾದ ಮಾತು ಅಗತ್ಯ.
ಸಿಂಹ
ಬಂಧುಗಳ ಜತೆ ಮೃದುವಾದ ಮಾತಿರಲಿ. ಕಠೋರ ಮಾತು ಸಂಬಂಧ ಕೆಡಿಸಬಹುದು. ಶೇರು ವ್ಯವಹಾರದಲ್ಲಿ ನಷ್ಟ ಉಂಟಾದೀತು.
ಕನ್ಯಾ
ಕುಟುಂಬಸ್ಥರಿಗೆ ತಮ್ಮನ್ನು ಕಡೆಗಣಿಸಲಾಗು ತ್ತಿದೆ ಎಂಬ ಭಾವನೆ ಬರದಂತೆ ನೋಡಿಕೊಳ್ಳಿ. ಯಾವುದೋ ಬೆಳವಣಿಗೆ ಮನಶ್ಯಾಂತಿ ಕೆಡಿಸಲಿದೆ.
ತುಲಾ
ನಿಮ್ಮ ಉದ್ಯೋಗ ವ್ಯವಹಾರ ಇಂದು ಸುಗಮವಾಗಿ ಸಾಗುವುದು. ಅಡ್ಡಿಗಳು ನಿವಾರಣೆ. ಕೌಟುಂಬಿಕ ಉದ್ವಿಗ್ನತೆ ಶಮನ. ಶಾಂತಿ.
ವೃಶ್ಚಿಕ
ಹೊಸ ವ್ಯವಹಾರ, ವ್ಯಾಪಾರ ಆರಂಭಿಸಿದ ಮಂದಿ ಹೆಚ್ಚು ಎಚ್ಚರ ವಹಿಸಬೇಕು. ನಷ್ಟ ವಾದೀತು. ಕುಟುಂಬದಲ್ಲಿ ಆರೋಗ್ಯ ಸಮಸ್ಯೆ.
ಧನು
ನಿಮ್ಮ ಉದ್ದೇಶ ಇಂದು ಸುಲಭದಲ್ಲಿ ಈಡೇರದು. ಬಹಳಷ್ಟು ಶ್ರಮ ಪಡಬೇಕಾಗುವುದು. ಮನೆಯಲ್ಲಿ ಅಭಿಪ್ರಾಯ ಭೇದ. ವಾಗ್ವಾದ.
ಮಕರ
ನಿಮ್ಮ ಕಾರ್ಯ ಇಂದು ಹೆಚ್ಚಿನವರ ಗಮನ ಸೆಳೆಯುತ್ತದೆ. ಅದನ್ನು ಸಫಲವಾಗಿಸಿದರೆ ಮನ್ನಣೆಯೂ ದೊರಕು ತ್ತದೆ. ಕೌಟುಂಬಿಕ ಸಾಂತ್ವನ.
ಕುಂಭ
ಕುಟುಂಬ ಸದಸ್ಯರ ಜತೆ ಅತೀ ಸಣ್ಣ ವಿಷಯ ದೊಡ್ಡದಾಗಿಸಬೇಡಿ. ಸಮಾಧಾನ ಚಿತ್ತ ಎಲ್ಲದಕ್ಕೂ ಒಳಿತು. ಆರ್ಥಿಕ ಬಿಕ್ಕಟ್ಟು ಹೆಚ್ಚಳ.
ಮೀನ
ವೃತ್ತಿಯಲ್ಲಿ ಮೇಲಿನವರ ಬೆಂಬಲ ನಿಮಗೆ ಸಿಗಲಿದೆ. ಧಾರ್ಮಿಕ ವಿಚಾರದಲ್ಲಿ ಆಸಕ್ತಿ. ಒತ್ತಡ ಮರೆಯಲು ಇದು ಸಹಕಾರಿ.