ದಿನಭವಿಷ್ಯ: ನಿಮ್ಮ ಕೆಲಸದ ಬಗ್ಗೆ ಸಹೋದ್ಯೋಗಿಗಳಿಗೆ ಹೊಟ್ಟೆಉರಿ! ತಲೆ ಕೆಡಿಸಿಕೊಳ್ಳಬೇಡಿ

ಮೇಷ
ಸಹೋದ್ಯೋಗಿಗಳು ನಿಮ್ಮ ಕೆಲಸದ ಕುರಿತು ಕೊಂಕು ತೆಗೆದಾರು. ಅದಕ್ಕೆ ತಲೆ ಕೆಡಿಸಿಕೊಳ್ಳದಿರಿ. ಕೌಟುಂಬಿಕ ಅಸಹಕಾರ ಎದುರಿಸುವಿರಿ.

ವೃಷಭ
ಕೌಟುಂಬಿಕ ಸಮಸ್ಯೆ ಇತ್ಯರ್ಥ ಪಡಿಸುವಲ್ಲೆ ಕಾಲ ಕಳೆಯುವಿರಿ. ಇತರ ವಿಷಯಗಳತ್ತ ಗಮನ ಹರಿಸಲು ವೇಳೆ ಸಾಲದು. ವೃತ್ತಿಯಲ್ಲಿ  ಕಿರುಕುಳ.

ಮಿಥುನ
ನಿಮ್ಮ ಪಾಲಿಗೆ ಮಹತ್ವದ ಪ್ರಸಂಗ ಉಂಟಾದೀತು. ಅದರಿಂದ ನಿಮಗೆ ಅನುಕೂಲವಾಗಲಿದೆ. ವೈರ ಅಂತ್ಯ, ಸ್ನೇಹ ಹೆಚ್ಚಳ.

ಕಟಕ
ಅಽಕ ಕೆಲಸದಿಂದ ಹೆಚ್ಚು ಒತ್ತಡ. ಇತರರ ಸಹಾಯ ಕೇಳಲು ಹಿಂಜರಿಕೆ ಬೇಡ. ಕೌಟುಂಬಿಕ ಕಲಹಕ್ಕೆ ಆಸ್ಪದ ಕೊಡಬೇಡಿ.

ಸಿಂಹ
ಖರ್ಚುವೆಚ್ಚದ ಮೇಲೆ ನಿಯಂತ್ರಣವಿಡಿ. ಅನ್ಯರ ಬೇಡಿಕೆ ಈಡೇರಿಸಲು ನಿಮ್ಮ ಹಣ ವಿನಿಯೋಗಿಸುವಿರಿ. ಸಾಂಸಾರಿಕ ಅಸಮಾಧಾನ.

ಕನ್ಯಾ
ನಿಮ್ಮ ಕೋಪತಾಪ ನಿಯಂತ್ರಿಸಿ. ಇಲ್ಲವಾದರೆ ಸಂಘರ್ಷ ಉಂಟಾದೀತು. ನಿಮ್ಮ ವ್ಯವಹಾರದಲ್ಲಿ  ಹಸ್ತಕ್ಷೇಪಕ್ಕೆ ಅನ್ಯರಿಗೆ  ಅವಕಾಶ ಕೊಡಬೇಡಿ.

ತುಲಾ
ವ್ಯವಹಾರ ಉನ್ನತಿಯ ಸಂಕೇತ ತೋರಲಿದೆ. ಪ್ರತಿಕೂಲ ಸನ್ನಿವೇಶದಲ್ಲೂ  ಶಾಂತಚಿತ್ತತೆ ಕಾಪಾಡಿಕೊಳ್ಳಿ. ಸಣ್ಣ ವಿಷಯಕ್ಕೆ ಉದ್ವಿಗ್ನ ಗೊಳ್ಳದಿರಿ.

ವೃಶ್ಚಿಕ
ಸ್ನೇಹಿತರು ಮತ್ತು ಕುಟುಂಬ ಸದಸ್ಯರ ಜತೆ ಆತ್ಮೀಯವಾಗಿ ಸಮಯ ಕಳೆಯಲು ಅವಕಾಶ ಸಿಗಲಿದೆ. ಹಣದ ಹರಿವು ಅಭಾದಿತ.

ಧನು
ವ್ಯಕ್ತಿಯೊಬ್ಬರ ಆಕರ್ಷಣೆಗೆ ಒಳಗಾಗುವ ಸಾಧ್ಯತೆ. ಸ್ವನಿಯಂತ್ರಣ ಅವಶ್ಯ. ಸಣ್ಣ ತಪ್ಪು ದೊಡ್ಡ ಎಡವಟ್ಟು ಸೃಷ್ಟಿಸಬಹುದು. ಕುಟುಂಬದ ಅಸಹಕಾರ.

ಮಕರ
ಭಾವನಾತ್ಮಕ ಏರುಪೇರು. ಯಾರದೋ ಮಾತು ಮನಸ್ಸಿಗೆ ನೋವು ತರಬಹುದು. ಸ್ಥಿತಪ್ರಜ್ಞತೆ ಬೆಳೆಸಿಕೊಳ್ಳಿ. ಉದ್ಯಮದಲ್ಲಿ ಯಶ ಸಿಗಲಿದೆ.

ಕುಂಭ
ಕಠಿಣ ದುಡಿಮೆಗೆ ಉತ್ತಮ ಪ್ರತಿಫಲ ಎಂಬುದನ್ನು ನೀವು ಅರಿಯಬೇಕು. ಪ್ರಯತ್ನಿಸದೇ ಫಲ ಪಡೆಯಲು ಯತ್ನಿಸದಿರಿ.

ಮೀನ
ಮಾಡಬೇಕಾದ ಕಾರ್ಯ ಬೇಗ ಮಾಡಿ ಮುಗಿಸಿ. ವಿಳಂಬ ಸಲ್ಲದು. ಕೌಟುಂಬಿಕ ಕಾರ್ಯಕ್ಕೆ ಸಮಯ ಕೊಡಿ. ವೃತ್ತಿಯಲ್ಲಿ ಸಮಾಧಾನ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!