ಮೇಷ
ಸಹೋದ್ಯೋಗಿಗಳು ಸಮಸ್ಯೆ ಸೃಷ್ಟಿಸುವರು. ಮನಶ್ಯಾಂತಿ ಕಳೆದು ಕೊಳ್ಳದಿರಿ. ಬಳಿಕ ನಿಮಗೆ ಒಳಿತಾಗಲಿದೆ. ಆಪ್ತ ಸಂಬಂಧ ಏರುಪೇರು.
ವೃಷಭ
ಮನೆಯ ಕಾರ್ಯ ಮತ್ತು ವೃತ್ತಿಯ ಮಧ್ಯೆ ಅಸಮತೋಲನ ಉಂಟಾದೀತು. ಇದರಿಂದ ಎಲ್ಲವೂ ಅಸ್ತವ್ಯಸ್ತ. ಹೊಂದಾಣಿಕೆ ಮುಖ್ಯ.
ಮಿಥುನ
ಚಿಂತೆಗೆ ಕಾರಣವಾದ ವಿಷಯಗಳೆಲ್ಲ ಇತ್ಯರ್ಥ. ಮಾನಸಿಕ ನಿರಾಳತೆ. ಮುನಿಸಿಕೊಂಡವರು ಸಮೀಪವಾಗುತ್ತಾರೆ. ಕೌಟುಂಬಿಕ ಸಾಮರಸ್ಯ.
ಕಟಕ
ವ್ಯವಹಾರದಲ್ಲಿ ಕೆಲವು ಮಹತ್ವದ ಬೆಳವಣಿಗೆ. ಅದೃಷ್ಟವನ್ನೆ ನಂಬಿ ಕೂರಬೇಡಿ. ನಿಮ್ಮ ಪ್ರಯತ್ನವೂ ಅಗತ್ಯವಾಗಿದೆ.
ಸಿಂಹ
ಆಪ್ತ ಸಂಬಂಧ ಉಳಿಸಲು ನಿಮ್ಮ ಅಹಂ ಅಡ್ಡಿ ಬಾರದಿರಲಿ. ಖರ್ಚಿನ ದಾರಿ ಹೆಚ್ಚು ವುದು. ಆದಾಯ ಗಳಿಕೆಯ ಸಾಧ್ಯತೆ ಕಡಿಮೆ.
ಕನ್ಯಾ
ವೃತ್ತಿಯಲ್ಲಿ ಯಶಸ್ಸು. ಆದಾಯ ಹೆಚ್ಚಳ. ಸಮಸ್ಯೆಯೊಂದು ಪರಿಹಾರ, ನೆಮ್ಮದಿ. ಕುಟುಂಬ ಸದಸ್ಯರ ಸಹಕಾರ, ಬೆಂಬಲ.
ತುಲಾ
ನಿಮ್ಮ ಹೊಣೆಗಾರಿಕೆ ನಿಭಾಯಿಸುವಲ್ಲಿ ಎಚ್ಚರಿಕೆ ವಹಿಸಿ. ನಿರ್ಲಕ್ಷ್ಯವು ಹಾನಿ ತರಬಹುದು. ಇತರರ ಮೇಲೆ ಜವಾಬ್ದಾರಿ ದಾಟಿಸಬೇಡಿ.
ವೃಶ್ಚಿಕ
ಕರ್ತವ್ಯ ಕ್ಷಿಪ್ರವಾಗಿ ನಿಭಾಯಿಸುವಿರಿ. ಅದರಿಂದ ಯಶ. ಆರ್ಥಿಕ ಪರಿಸ್ಥಿತಿ ಉತ್ತಮ. ಬಂಧುಗಳಿಂದ ಪ್ರೀತಿ, ಆದರ ಪಡೆಯುವಿರಿ.
ಧನು
ಮಾನಸಿಕ ಒತ್ತಡ. ನಿಮ್ಮ ಕೆಲಸದ ಮೇಲೆ ಗಮನ ಕಡಿಮೆಯಾಗಲಿದೆ. ಸಂಗಾತಿ ಜತೆಗೆ ಭಿನ್ನಮತ. ಅನವಶ್ಯ ಖರ್ಚು.
ಮಕರ
ನಿಮಗಿಂದು ಪೂರಕ ದಿನ. ನಿಮ್ಮ ಕಾರ್ಯ ಸಫಲ. ಆತ್ಮೀಯರಿಂದ ಭಾವನಾತ್ಮಕ ಬೆಂಬಲ.ಕೌಟುಂಬಿಕ ಉದ್ವಿಗ್ನತೆ ಶಮನಗೊಳ್ಳುವುದು.
ಕುಂಭ
ಖಾಸಗಿ ವಿಷಯದಲ್ಲಿ ಪೂರಕ ಬೆಳವಣಿಗೆ. ಪ್ರೀತಿ ಯಲ್ಲಿ ಯಶಸ್ಸು. ನಿಮ್ಮ ಭಾವನೆಗೆ ಸೂಕ್ತ ಸ್ಪಂದನೆ ಪಡೆಯುವಿರಿ. ವಿವಾದಕ್ಕೆ ಆಸ್ಪದ ನೀಡದಿರಿ.
ಮೀನ
ಕೊರಗೊಂದು ಕಾಡುತ್ತಿದೆ. ಅದನ್ನು ನಿಭಾಯಿಸಲು ಕಷ್ಟ ಪಡುವಿರಿ. ಸೂಕ್ತ ನೆರವು ಬೇಗನೆ ಒದಗಲಿದೆ. ಆ ಬಳಿಕ ಮನಶ್ಯಾಂತಿ.