ಮೇಷ
ಇಂದು ಪ್ರಮುಖ ಕಾರ್ಯ ಯೋಚಿಸಿದ್ದರೆ ಕೂಡಲೇ ಕಾರ್ಯಗತ ಮಾಡಿ. ಕಾಲ ಪ್ರಶಸ್ತವಿದೆ. ಕೌಟುಂಬಿಕ ವಾಗ್ವಾದ ನಡೆದರೂ ಬಳಿಕ ಶಾಂತಿ.
ವೃಷಭ
ನಿಮಗೆ ಇಷ್ಟವಿಲ್ಲದ ಬೆಳವಣಿಗೆ ಉಂಟಾದೀತು. ಆದರೆ ಉತ್ಸಾಹ ಕಳಕೊಳ್ಳದಿರಿ. ಬಳಿಕ ಸರಿಯಾಗುವುದು. ಖರ್ಚು ಹೆಚ್ಚಲಿದೆ. ಆರ್ಥಿಕ ಒತ್ತಡ.
ಮಿಥುನ
ನಿಮ್ಮ ನೆಮ್ಮದಿ ಕೆಡಿಸಲು ಕೆಲವರ ಯತ್ನ. ಭಾವನಾತ್ಮಕ ಬ್ಲಾಕ್‌ಮೇಲ್‌ಗೆ ಬಗ್ಗದಿರಿ. ದೃಢವಾಗಿ ವರ್ತಿಸಿ. ಹಣದ ಒತ್ತಡ ಕಡಿಮೆಯಾಗಲಿದೆ.
ಕಟಕ
ಆತ್ಮೀಯರ ಮಾತುಗಳಿಗೆ ಸಹನೆ ಯಿಂದ ಕಿವಿಗೊಡಿ. ಸೌಹಾರ್ದ ವಾತಾವರಣ ಕಾಪಾಡಿ. ವಾಗ್ವಾದದಿಂದ ಲಾಭವಿಲ್ಲ.
ಸಿಂಹ
ಮನೆಯಲ್ಲಿ ಶಾಂತಿ ನೆಲೆಸಲು ಆದ್ಯತೆ ಕೊಡಿ. ನಿಮ್ಮಿಂದಲೇ ಹೊಂದಾಣಿಕೆ ನಡೆಯಬೇಕು. ನಿಮ್ಮ ನಿಲುವಿಗೆ ಹಠ ಹಿಡಿಯದಿರಿ.
ಕನ್ಯಾ
ಮಾನಸಿಕ ಒತ್ತಡ. ಆಪ್ತರು ನಿಮ್ಮಿಂದ ದೂರವಾದಾರು. ಪ್ರೀತಿಯ ವಿಷಯದಲ್ಲಿ ಮಹತ್ವದ ಬೆಳವಣಿಗೆ. ನೆಮ್ಮದಿ ದೂರ.
ತುಲಾ
ಆಶಾವಾದ ಹೆಚ್ಚಳ. ಸಮಸ್ಯೆ ಪರಿಹಾರ. ಆರ್ಥಿಕ ಪ್ರಗತಿ. ಅನಿರೀಕ್ಷಿತ ಧನ ಸಂಚಯ. ಆರೋಗ್ಯ ಪರಿಸ್ಥಿತಿ ಸುಧಾರಣೆ.
ವೃಶ್ಚಿಕ
ನಿಮಗೆ ಪೂರಕ ದಿನ. ಕಾರ್ಯದಲ್ಲಿ ಪ್ರಗತಿ. ಮನೆಯಲ್ಲಿ ಹೆಚ್ಚುವರಿ ಹೊಣೆ. ಅದನ್ನು ಸರಿಯಾಗಿ ನಿಭಾಯಿಸಲು ಶಕ್ತರಾಗುವಿರಿ.
ಧನು
ನೆಮ್ಮದಿ ಕಳಕೊಳ್ಳುವ ಪ್ರಸಂಗ ಉಂಟಾದೀತು. ನಿಮ್ಮ ಕೆಲಸ ಸಾಽಸಲು ಹೆಚ್ಚಿನ ಶ್ರಮ ಬೇಕಾಗಲಿದೆ. ಮನೆಯ ವಾತಾವರಣ ಅಸಹನೀಯ ಎನಿಸೀತು.
ಮಕರ
ಸಂತೋಷ ಮತ್ತು ಬೇಸರ ಎರಡನ್ನೂ ಇಂದು ಅನುಭವಿಸುವಿರಿ. ಆಪ್ತರು ನಿಮ್ಮನ್ನು ಕಡೆಗಣಿಸಿದ ಭಾವ ಕಾಡಬಹುದು. ವಾಸ್ತವ ಅರಿಯಿರಿ.
ಕುಂಭ
ಯಾವುದೇ ಬಿಕ್ಕಟ್ಟಿಗೆ ಕ್ಷಿಪ್ರವಾಗಿ ಸ್ಪಂದಿಸಿ. ವಿಳಂಬ ಧೋರಣೆ ಸಲ್ಲದು. ಪ್ರತಿಕೂಲ ಸನ್ನಿವೇಶಕ್ಕೆ ಧೈರ್ಯಗೆಡದಿರಿ. ಸೂಕ್ತ ನೆರವೂ ಲಭಿಸಲಿದೆ.
ಮೀನ
ಈ ದಿನ ನಿಮಗೆ ಪೂರಕವಾಗಿಲ್ಲ. ಸಂಬಂಧದಲ್ಲಿ ಬಿರುಕು ಮೂಡಬಹುದು. ಉದ್ಯಮದಲ್ಲಿ ಹಿನ್ನಡೆ. ಆರೋಗ್ಯ ಸಮಸ್ಯೆ.