ಮೇಷ
ಇತರರನ್ನು ಒಲಿಸುವ ಕಲೆ ನಿಮಗೆ ತಿಳಿದಿದೆ. ಇದು ನಿಮ್ಮ ವ್ಯವಹಾರ ಸುಗಮ ಮಾಡಲಿದೆ. ಆರ್ಥಿಕ ಸ್ಥಿತಿ ಉನ್ನತಿ.
ವೃಷಭ
ನಿಮ್ಮ ಸಾಮರ್ಥ್ಯ ಎಲ್ಲರ ಗಮನಕ್ಕೆ ಬರುವ ಪ್ರಸಂಗ ಒದಗುವುದು. ವಿಶ್ವಾಸದಿಂದ ಹೆಜ್ಜೆ ಇಡಿ. ಜಗತ್ತೇ ನಿಮಗೆ ತಲೆ ಬಾಗುವುದು.
ಮಿಥುನ
ನೀವು ಕಾಯುತ್ತಿದ್ದ ಅವಕಾಶವೊಂದು ಇಂದು ಸಿಗಲಿದೆ. ಅದರಿಂದ ಉತ್ತಮ -ಲ ಪಡೆಯುವಿರಿ. ಕೌಟುಂಬಿಕ ಸಹಕಾರ.
ಕಟಕ
ಸ್ವಂತ ವ್ಯವಹಾರದಲ್ಲಿ ಎಚ್ಚರದಿಂದ ಹೆಜ್ಜೆ ಇಡಿ. ವಂಚನೆಗೆ ಒಳಗಾಗುವ ಸಾಧ್ಯತೆ ಇದೆ. ಯಾರನ್ನೂ ಕುರುಡಾಗಿ ನಂಬದಿರಿ. ಬಂಧುಗಳ ಸಹಕಾರ.
ಸಿಂಹ
ಹೆಚ್ಚು ಉತ್ಸಾಹದ ದಿನ. ಕಾರ್ಯದಲ್ಲಿ ಸಫಲತೆ. ಸಣ್ಣ ವಿಷಯ ಗಂಭೀರವಾಗಿ ಪರಿಗಣಿಸಿ ಮನಸ್ಸು ಹಾಳು ಮಾಡಿಕೊಳ್ಳದಿರಿ.
ಕನ್ಯಾ
ಕಠಿಣವೆಂದು ಭಾವಿಸಿದ ಕಾರ್ಯ ಸುಲಭದಲ್ಲಿ ಸಾಧ್ಯ. ಪ್ರೀತಿಪಾತ್ರರ ಜತೆ ಹೆಚ್ಚು ಸಮಯ ಕಳೆಯಿರಿ. ಖರ್ಚು ನಿಯಂತ್ರಣ.
ತುಲಾ
ಯಾವುದೋ ವಿಷಯ ಚಿಂತೆಗೆ ಕಾರಣವಾಗಿದೆ. ಅದು ಪೂರಕ ಇತ್ಯರ್ಥ ಕಾಣಲಿದೆ. ನಿರಾಳವಾಗಿರಿ. ಇಷ್ಟದೇವರ ಪ್ರಾರ್ಥಿಸಿ.
ವೃಶ್ಚಿಕ
ಹೆಚ್ಚು ಪ್ರಾಕ್ಟಿಕಲ್ ಆಗಿ ವರ್ತಿಸಿರಿ. ಇದರಿಂದ ಅನಗತ್ಯ ಮಾನಸಿಕ ನೋವು ತಿನ್ನುವುದು ತಪ್ಪಲಿದೆ. ಕೌಟುಂಬಿಕ ಅಶಾಂತಿ ನಿವಾರಣೆ.
ಧನು
ನಿಮ್ಮ ಪ್ರಗತಿಗೆ ಅಡ್ಡಿ ತರುತ್ತಿರುವ ವಿಷಯ ಮೊದಲಿಗೆ ಇತ್ಯರ್ಥ ಮಾಡಿಕೊಳ್ಳಿ. ಅದನ್ನು ಬೆಳೆಯಲು ಬಿಡಬೇಡಿ. ಅವಶ್ಯ ನೆರವು ಲಭ್ಯ.
ಮಕರ
ನಿಮ್ಮ ಹಿಂದಿನ ಕೆಲವು ತಪ್ಪುಗಳು ಈಗ ಕುಟುಕಲು ಶುರು ಮಾಡಬಹುದು. ಜಾಣತನದಿಂದ ಅದನ್ನು ನಿಭಾಯಿಸಿ. ಪ್ರಾಮಾಣಿಕ ವರ್ತನೆ ತೋರಿ.
ಕುಂಭ
ಹೊಸ ವ್ಯವಹಾರಕ್ಕೆ ಈಗಲೆ ಕೈಹಾಕದಿರಿ. ವಿಘ್ನಗಳು ಕಾಡಬಹುದು. ಕೌಟುಂಬಿಕ ಸಮಸ್ಯೆ ಸೌಹಾರ್ದದಿಂದ ಪರಿಹಾರ ಕಾಣಲಿದೆ.
ಮೀನ
ಗುರಿ ಸಾಧನೆಗೆ ಕೆಲವರು ಅಡ್ಡಗಾಲು ಹಾಕಲು ಯತ್ನಿಸುವರು. ಅವರನ್ನು ದೂರವಿಡಿ. ಖರ್ಚು ಕಡಿಮೆ ಮಾಡಲು ಅದ್ಯತೆ ಕೊಡಿ.