ದಿನಭವಿಷ್ಯ: ಕೆಲಸದ ಮಧ್ಯೆ ಬಿಗ್‌ ಬ್ರೇಕ್‌, ನಿಮಗಿಂದು ಮನರಂಜನಾತ್ಮಕ ದಿನ

ಮೇಷ
ನಿಮ್ಮ ದೃಢ ನಿಲುವು  ಸಮಸ್ಯೆ ಪರಿಹಾರಕ್ಕೆ ನೆರವಾಗುವುದು. ವೃತ್ತಿಯಲ್ಲಿ ಹೊಣೆ ಅಽಕ.  ಮನೆಯ ವ್ಯವಹಾರದಲ್ಲಿ ಅಸಹನೆ ಹೆಚ್ಚಲಿದೆ.

ವೃಷಭ
ಸಾಂಸಾರಿಕ  ಸಮಸ್ಯೆ ಪರಿಹಾರ. ನಿಮ್ಮ ಸಾಧನೆ ಇತರರನ್ನು ಪ್ರೇರೇಪಿಸಲಿದೆ. ಕಠಿಣ ಕಾರ್ಯ ಸುಗಮವಾಗಿ ಮುಗಿಯುವುದು.

ಮಿಥುನ
ಮನೆಯಲ್ಲಿ ಉತ್ತಮ  ಹೊಂದಾಣಿಕೆ.  ಮನೆಯ ಪರಿಸರ ಹೆಚ್ಚು ಸೌಹಾರ್ದದಾಯಕ. ಆರ್ಥಿಕ ಪರಿಸ್ಥಿತಿ ಕಠಿಣವಾಗಲಿದೆ.

ಕಟಕ
ನಿಮ್ಮ ಕಾರ್ಯದಲ್ಲಿ ಏರುಪೇರು. ಆದರೆ ಅಂತಿಮವಾಗಿ ಎಲ್ಲವೂ ಸುಸೂತ್ರವಾಗುವುದು. ಧನಪ್ರಾಪ್ತಿ. ಬಂಧುಗಳ ಸಹಕಾರ.

ಸಿಂಹ
ಆತ್ಮೀಯರ ಜತೆ ಸಂಬಂಧ ಹಳಸಿದ್ದರೆ ಅದನ್ನು ಸರಿಪಡಿಸಲು ನೀವೇ ಮುಂದಾಗಿ. ವಿರಸ ಮುಂದುವರಿಸದಿರಿ. ವೃತ್ತಿಯಲ್ಲಿ ಒತ್ತಡ ಹೆಚ್ಚು.

ಕನ್ಯಾ
ನಿಮಗಿಂದು ನಿರಾಳ ದಿನ. ಮನರಂಜನಾತ್ಮಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುವ ಅವಕಾಶ. ಬಂಧುಗಳಿಂದ ನಿಮಗೆ ಹಿತವೆನಿಸುವ ಸುದ್ದಿ.

ತುಲಾ
ನಿಮ್ಮ  ಕಾರ್ಯ ಎಚ್ಚರಿಕೆಯಿಂದ ನೆರವೇರಿಸಿ. ನಿಮ್ಮಲ್ಲಿ ತಪ್ಪು ಕಂಡುಹಿಡಿಯಲು ಕೆಲವರು ಕಾದಿರುತ್ತಾರೆ. ಅವಕಾಶ ನೀಡದಿರಿ.

ವೃಶ್ಚಿಕ
ವ್ಯವಹಾರಕ್ಕೆ  ಸಂಬಂಧಿಸ ಇಂದು ಪ್ರಮುಖ ನಿರ್ಧಾರ ತಾಳದಿರಿ. ನಿಮಗೆ ಪೂರಕ ಆಗಲಾರದು.  ಸಣ್ಣ ವಿಷಯಕ್ಕೆ ಮನಸ್ತಾಪ.

ಧನು
ನಿಮ್ಮ ಗುರಿ ಈಡೇರುವ ತನಕ ನಿಮ್ಮ ಪ್ರಯತ್ನ ನಿಲ್ಲಿಸದಿರಿ. ಹಿನ್ನಡೆಗಳಿಗೆ ಅಂಜದಿರಿ. ದಿನದಂತ್ಯಕ್ಕೆ ನಿಮಗೆ ಉತ್ತಮ ಪ್ರತಿಫಲ.

ಮಕರ
ಮಹತ್ವದ ವಿಚಾರದಲ್ಲಿ ತುರ್ತು ನಿರ್ಧಾರ ತಾಳಬೇಕಾದೀತು. ನಿಮ್ಮ ನಿರ್ಧಾರ ಯುಕ್ತ ಫಲವನ್ನೆ ನೀಡುವುದು.

ಕುಂಭ
ಒತ್ತಡಪೂರ್ಣ ದಿನ. ಕೆಲವಾರು ಕಾರ್ಯ ಒಮ್ಮೆಗೇ ಮುಗಿಸಬೇಕಾದ ಒತ್ತಡ. ದೈಹಿಕ ಅನಾರೋಗ್ಯ, ಮೈ ನೋವು ಬಾಧಿಸಬಹುದು.

ಮೀನ
ಖಾಸಗಿ ಬದುಕಿನಲ್ಲಿ ನಿಮಗೆ  ಪೂರಕವಾದ ಬೆಳವಣಿಗೆ. ವ್ಯವಹಾರದಲ್ಲಿ ಒತ್ತಡ ಅಧಿಕ. ಆರ್ಥಿಕ ಬಿಕ್ಕಟ್ಟು ನಿವಾರಣೆ, ಧನಪ್ರಾಪ್ತಿ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!