ಮೇಷ.
ಪ್ರೀತಿಯ ವಿಚಾರ ದಲ್ಲಿ ಪೂರಕ ಬೆಳವಣಿಗೆ. ಶೇರು ಹೂಡಿಕೆಗೆ ಸಕಾಲ, ಲಾಭವಾಗಲಿದೆ. ಆರೋಗ್ಯ ಕುರಿತಾದ ಆತಂಕ ನಿವಾರಣೆ.
ವೃಷಭ
ಕುಟುಂಬದ ಕುರಿತಂತೆ ಹೆಚ್ಚು ಆಸ್ಥೆ ತೋರುವಿರಿ. ಬೇರೆ ವಿಷಯ ಇಂದು ಗೌಣ. ಖರ್ಚು ನಿಯಂತ್ರಿಸಿ. ವಿದ್ಯಾರ್ಥಿಗಳಿಗೆ ಯಶ.
ಮಿಥುನ
ಆದಾಯ ಹೆಚ್ಚಳ. ಹಣ ಹೂಡಿಕೆಯಿಂದ ಲಾಭ. ಎಲ್ಲವೂ ನಿಮಗೆ ಪೂರಕ. ಆದರೂ ಮನಸ್ಸಿನಲ್ಲಿ ಮಾತ್ರ ಏನೋ ಬೇಸರ, ಕೊರಗು.
ಕಟಕ
ನಿಮ್ಮದು ಮೃದು ಸ್ವಭಾವ. ಆದರೆ ಅದನ್ನು ಇತರರು ದುರುಪಯೋಗ ಮಾಡದಂತೆ ಎಚ್ಚರ ವಹಿಸಿ. ಯೋಚಿಸಿ ನಿರ್ಧಾರ ತಾಳಿ.
ಸಿಂಹ
ಮೇಲಧಿಕಾರಿಗಳ ಮೆಚ್ಚುಗೆ. ಕಾರ್ಯದಲ್ಲಿ ನೆಮ್ಮದಿ. ಸಂಗಾತಿಗೆ ಸಂತೋಷ ತರುವಿರಿ. ಅನಿರೀಕ್ಷಿತ ಮೂಲದಿಂದ ಆದಾಯ ಗಳಿಕೆ.
ಕನ್ಯಾ
ಏರುಪೇರಿನ ದಿನ. ವೃತ್ತಿಯಲ್ಲಿ ಉನ್ನತಿ. ಪ್ರೀತಿಪಾತ್ರರ ಜತೆ ಭಿನ್ನಮತ. ಹೆತ್ತವರ ಅಸಂತೋಷಕ್ಕೆ ಕಾರಣರಾಗಬೇಡಿ.
ತುಲಾ
ನಿರೀಕ್ಷಿಸದ ಕಡೆಯಿಂದ ಹಣ ಬರಲಿದೆ. ನಿಮ್ಮ ಹವ್ಯಾಸಕ್ಕೆ ಹೆಚ್ಚು ನೀರೆರೆಯಿರಿ. ವಿದ್ಯಾರ್ಥಿಗಳಿಗೆ ಕಠಿಣ ದಿನವಾದೀತು.
ವೃಶ್ಚಿಕ
ಆರ್ಥಿಕ ಪರಿಸ್ಥಿತಿ ಉಜ್ವಲ. ವಿವಾಹಿತರಿಗೆ ಶುಭ ಬೆಳವಣಿಗೆ. ಏಕಾಂಗಿಗಳು ಸಂಗಾತಿಗಾಗಿ ಇನ್ನೂ ಕೆಲಕಾಲ ಕಾಯಬೇಕು. ವಿದ್ಯಾರ್ಥಿಗಳಿಗೆ ಯಶ.
ಧನು
ಕಷ್ಟಕಾಲ ಕಾಡಲಿದೆ. ಸಹೋದ್ಯೋಗಿಗಳ ನೆರವು ಪಡೆಯಿರಿ. ಆರೋಗ್ಯದ ಕುರಿತು ಕಾಳಜಿಯಿರಲಿ. ಬಂಧುಗಳ ಜತೆ ವಿರಸ. ಉದ್ಯಮಕ್ಕೆ ವಿಘ್ನ.
ಮಕರ
ಸಮಸ್ಯೆಯೊಂದು ಕಾಡಲಿದೆ. ನಿಮ್ಮ ಹಳೆಯ ಅನುಭವ ಬಳಸಿ ಪರಿಹಾರ ಕಂಡುಕೊಳ್ಳಿ. ಆತುರ ಬೇಡ. ಕೌಟುಂಬಿಕ ನೆಮ್ಮದಿಗೆ ಭಂಗವಿಲ್ಲ.
ಕುಂಭ
ಅದೃಷ್ಟದ ದಿನ. ಎಲ್ಲದರಲ್ಲೂ ಯಶಸ್ಸು. ಹಿನ್ನಡೆ ಬಾಽಸದು. ಕೌಟುಂಬಿಕ ಚಿಂತೆಯೊಂದು ನಿವಾರಣೆ ಆಗಬಹುದು.
ಮೀನ
ಕಠಿಣ ದಿನ. ಕುಟುಂಬ ಮತ್ತು ವೃತ್ತಿ ಮಧ್ಯೆ ಸಮತೋಲನ ಸಾಧಿಸಿ. ಆದಾಯ ಮೀರಿ ಖರ್ಚು ಮಾಡದಿರಿ. ಆರೋಗ್ಯ ಸಮಸ್ಯೆ.