ದಿನಭವಿಷ್ಯ: ಕುಟುಂಬ ಸದಸ್ಯರ ಜೊತೆ ಸಂತಸದ ದಿನ ಕಳೆಯುವಿರಿ, ಇದು ನಿಮ್ಮ ಬೆಸ್ಟ್‌ ಟೈಮ್‌!

ಮೇಷ
ಹಿರಿಯರನ್ನು ಗೌರವಿಸಿ. ಕುಟುಂಬ ಸದಸ್ಯರ ಜತೆ ಕಾಲ ಕಳೆಯಿರಿ. ಅವರಿಗೆ ನಿಮ್ಮ ಕಾಳಜಿಯ ಅಗತ್ಯ ಬೀಳಲಿದೆ.

ವೃಷಭ
ಆರೋಗ್ಯಪೂರ್ಣ ಆಹಾರ ಸೇವಿಸಿ. ಕುಟುಂಬ ಸದಸ್ಯರ ಆದರಾತಿಥ್ಯ ಮನಸ್ಸಿಗೆ ನಿರಾಳತೆ ತರುವುದು. ಶಾಂತಿ, ಸಮಾಧಾನ.

ಮಿಥುನ
ಬಂಧುಗಳ ಜತೆ  ಮಾತಿನ ಚಕಮಕಿ ತಪ್ಪಿಸಿ. ಕ್ಷುಲ್ಲಕ ವಿಷಯ ಕಡೆಗಣಿಸಿ. ಆರ್ಥಿಕ ಒತ್ತಡ ಹೆಚ್ಚಲಿದೆ. ಆರೋಗ್ಯದ ಕಡೆ ಗಮನ ಹರಿಸಿರಿ.

ಕಟಕ
ಸಂಘರ್ಷವನ್ನು  ಸಮಾಧಾನದಿಂದ ನಿಭಾಯಿಸಿ. ಕೋಪ ಫಲ ನೀಡದು. ಕೌಟುಂಬಿಕ ಪರಿಸರ ಸಮಾಧಾನಕರ. ಆರ್ಥಿಕ ಪರಿಸ್ಥಿತಿ ಉತ್ತಮ.

ಸಿಂಹ
ಕುಟುಂಬ ಸದಸ್ಯರ ಜತೆ ನಿಮ್ಮ ಭಾವನೆ ಹಂಚಿಕೊಳ್ಳಿ. ಅವರೇ ನಿಮ್ಮನ್ನು  ಅರ್ಥ ಮಾಡಿ ಕೊಳ್ಳುವವರು. ಕೆಲಸದಲ್ಲಿ ಪ್ರಮಾದ ಎಸಗದಿರಿ.

ಕನ್ಯಾ
ನಿಮ್ಮ ಕೆಲಸವನ್ನು ಇತರರ ಜತೆ ಹಂಚಿ ಕೊಳ್ಳುವುದು ಮುಖ್ಯ. ಅದರಿಂದ ಸುಲಭವಾಗಿ ಗುರಿ ಸಾಧಿಸಬಲ್ಲಿರಿ. ಆರ್ಥಿಕ ಬಿಕ್ಕಟ್ಟು ಸಂಭವ.

ತುಲಾ
ವೃತ್ತಿಯಲ್ಲಿ ನಿಮ್ಮ ಗುರಿ ಸಾಧಿಸುವಿರಿ. ಗ್ರಹಗತಿ ನಿಮಗೆ ಪೂರಕ ವಾಗಿರುವುದು. ಅದರ ಉಪಯೋಗ ಪಡೆಯಿರಿ. ಆರ್ಥಿಕ ಲಾಭ.

ವೃಶ್ಚಿಕ
ದೈಹಿಕ ಆರೋಗ್ಯದಷ್ಟೆ ಮಾನಸಿಕ ಆರೋಗ್ಯವೂ ಮುಖ್ಯ. ಸಣ್ಣ ವಿಷಯಕ್ಕೆ ಮನಸ್ಸು ಕೆಡಿಸಿಕೊಳ್ಳದಿರಿ. ಶಾಂತಚಿತ್ತತೆ ಇರಲಿ. ಎಲ್ಲರ ಜತೆ ಹೊಂದಾಣಿಕೆಯಿರಲಿ.

ಧನು
ಸಮಯಕ್ಕೆ ಸರಿಯಾಗಿ ಕಾರ್ಯ ಮುಗಿಯದು. ಇಂದು ಗ್ರಹಗತಿಯೇ ಹಾಗಿದೆ. ಎಲ್ಲ ಕೆಲಸದಲ್ಲಿ ವಿಳಂಬ. ಕೌಟುಂಬಿಕ ಅಶಾಂತಿ.

ಮಕರ
ಕೆಲಸದಲ್ಲಿ ಶಿಸ್ತು ಅವಶ್ಯ. ಇಲ್ಲ ವಾದರೆ ಗೊಂದಲ ಸೃಷ್ಟಿ ಯಾದೀತು. ವೃತ್ತಿಯಲ್ಲಿ  ಮನಸ್ತಾಪ ಸಂಭವ. ವಾಗ್ವಾದದಿಂದ ದೂರವಿರಿ.

ಕುಂಭ
ಮುಖ್ಯ ವಿಚಾರದಲ್ಲಿ ಕೆಲವರ ಜತೆ ಭಿನ್ನಮತ ಉಂಟಾದೀತು. ಅದನ್ನು ವಿಕೋಪಕ್ಕೆ ಕೊಂಡೊಯ್ಯಬೇಡಿ. ಸಮಾಧಾನಚಿತ್ತ ಮುಖ್ಯ.

ಮೀನ
ವ್ಯವಹಾರದಲ್ಲಿ ಹೂಡಿಕೆಯಿಂದ ಲಾಭ ಸಿಗಲಿದೆ. ಆರ್ಥಿಕ ಪರಿಸ್ಥಿತಿ ಸುಧಾರಣೆ. ಕುಟುಂಬಸ್ಥರ ಜತೆ ಆತ್ಮೀಯ ಕಾಲಕ್ಷೇಪ. ಆರೋಗ್ಯ ಸುಸ್ಥಿರ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!