ದಿನಭವಿಷ್ಯ: ಕೆಲಸ ಹೆಚ್ಚು ಒಪ್ಪೋಣ, ಆದರೆ ಆರೋಗ್ಯದ ಬಗ್ಗೆ ಇಂದು ಹೆಚ್ಚು ಗಮನಕೊಡಿ!

ಮೇಷ
ಹಳೆಯ ನೆನಪು ಕೆದಕುವ ಸ್ನೇಹಿತರ ಭೇಟಿಯಾದೀತು. ವೃತ್ತಿಯಲ್ಲಿ ತೊಡಕು ಉಂಟಾದರೂ ಬಳಿಕ ಪರಿಹಾರ ಕಾಣಲಿದೆ.
ವೃಷಭ
ಸಂತೋಷದ ದಿನ. ಆದರೆ ಸಂತೋಷ ಆಚರಿಸುವ ಮನಸ್ಥಿತಿ ನಿಮ್ಮಲ್ಲಿಲ್ಲ. ಒತ್ತಡ ನಿವಾರಿಸುವ ಪ್ರಯತ್ನ ಮಾಡಿ. ವ್ಯಯ ಕಡಿಮೆಗೊಳಿಸಿ.
ಮಿಥುನ
ಅತಿಯಾದ ಕೆಲಸ. ಒತ್ತಡವೂ ಹೆಚ್ಚು. ಆತ್ಮೀಯರ ಸಂಗದಲ್ಲಿ ಒತ್ತಡ ನಿವಾರಿಸಿಕೊಳ್ಳಿ. ಹೊಸ ವ್ಯವಹಾರಕ್ಕೆ ಹಣ ಹೂಡುವುದು ಹಿತವಲ್ಲ.
ಕಟಕ
ಕೆಲಸ ಹೆಚ್ಚು. ಆದರೆ ಉದಾಸೀನತೆ ನಿಮ್ಮನ್ನು ಕಾಡುವುದು. ಆಹಾರದಲ್ಲಿ ಪಥ್ಯ ಸಾಽಸಿರಿ. ಆರೋಗ್ಯ ಕಾಪಾಡಲು ಇದು ಅವಶ್ಯ.  ಹಣವ್ಯಯ ಹೆಚ್ಚು.
ಸಿಂಹ
ಹಣದ ವಿಚಾರ ಬಂದಾಗ ಯಾರನ್ನೂ ಕುರುಡಾಗಿ ನಂಬದಿರಿ. ಕುಟುಂಬಸ್ಥರ ಬೇಕುಬೇಡ ಆಲಿಸಿರಿ.  ಆರೋಗ್ಯ ಸಮಸ್ಯೆ ನಿರ್ಲಕ್ಷಿಸಬೇಡಿ.
ಕನ್ಯಾ
ನಿಮ್ಮ ಧೋರಣೆ ಸಹೋದ್ಯೋಗಿಗಳಿಗೆ ಸರಿ ಬರದಿರಬಹುದು. ಹೊಂದಾಣಿಕೆ ಮಾಡಿಕೊಳ್ಳಿ. ದೇಹಾಲಸ್ಯ, ಮೈಕೈ ನೋವು ಬಾಧಿಸಬಹುದು.
ತುಲಾ
ದಿನವಿಡೀ ಗೊಂದಲದ ಮನಸ್ಥಿತಿ. ಪ್ರತಿಕೂಲ ಪರಿಸ್ಥಿತಿ ದಿಟ್ಟವಾಗಿ ಎದುರಿಸಿ. ನಿಮ್ಮ ಭಾವನೆ ನಿಯಂತ್ರಿಸಿ, ವಾಸ್ತವಕ್ಕೆ ಕಿವಿಗೊಡಿ.
ವೃಶ್ಚಿಕ
ವೃತ್ತಿಯಲ್ಲಿ ಪೂರಕ ಬೆಳವಣಿಗೆ. ಶೇರಿನಂತಹ ವ್ಯೂಹಾತ್ಮಕ ವ್ಯವಹಾರಕ್ಕೆ ಕೈ ಹಾಕದಿರಿ. ನಿರೀಕ್ಷಿತ -ಲ ಬರದು. ಕೌಟುಂಬಿಕ ಭಿನ್ನಮತ ಶಮನಗೊಳಿಸಿ.
ಧನು
ಸಂಗಾತಿ ಜತೆಗಿನ ಭಿನ್ನಮತ ಹೆಚ್ಚಬಹುದು. ಯಾರಾದರೊಬ್ಬರು ಬಗ್ಗಬೇಕು. ಹಠ ಸಾಽಸಬೇಡಿ. ಆರೋಗ್ಯ ಸಮಸ್ಯೆ ಕಾಡಬಹುದು.
ಮಕರ
ನಿಮ್ಮ ವ್ಯವಹಾರ ನಿಭಾಯಿಸುವಲ್ಲಿ ಒತ್ತಡ ಎದುರಿಸುವಿರಿ. ಕೆಲವರಿಂದ ವಿರೋಧ. ಕೌಟುಂಬಿಕ ವ್ಯವಹಾರವೂ ಸಮಾಧಾನ ತಾರದು.
ಕುಂಭ
ಕೆಲವಾರು ಹೊಣೆ ಒಂದೇ ದಿನ ನಿಭಾಯಿಸಬೇಕಾದ ಒತ್ತಡ. ಹೊಟ್ಟೆ ಸಂಬಂಽತ ಅಸೌಖ್ಯ ಉಂಟಾದೀತು. ಸೂಕ್ತ ಚಿಕಿತ್ಸೆ ಪಡೆಯಿರಿ.
ಮೀನ
ಮನೆಯಲ್ಲಿ ಸಣ್ಣ ವಾಗ್ವಾದ ಮನಶ್ಯಾಂತಿ ಕೆಡಿಸಬಹುದು. ಮಾತಿಗೆ ಮಾತು ಸೇರಿಸದಿರಿ. ಮುಖ್ಯ ಕಾರ್ಯದಲ್ಲಿ ಬಂಧುಗಳ ಸಹಕಾರ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!