ದಿನಭವಿಷ್ಯ: ದುಬಾರಿ ವಸ್ತುಗಳ ಮೇಲೆ ಅತಿಯಾಗಿ ಹಣ ವ್ಯಯಿಸುವಿರಿ

ಮೇಷ
ನಿಮ್ಮ ಉತ್ಸಾಹದ ಕಾರ್ಯಶೈಲಿ ಎಲ್ಲರ ಮೆಚ್ಚುಗೆ ಗಳಿಸುವುದು. ಆರೋಗ್ಯಕ್ಕೆ ಪ್ರತಿಕೂಲ ಆಗುವಂತಹ ಹವ್ಯಾಸ ತ್ಯಜಿಸಿರೆಂದು ಗ್ರಹಗತಿ ಸೂಚಿಸುತ್ತಿವೆ.

ವೃಷಭ
ಸಂಗಾತಿಯಿಂದ ಉತ್ತಮ ಸಹಕಾರ. ಹಾಗಾಗಿ ಪ್ರತಿಕೂಲ ಸನ್ನಿವೇಶವನ್ನೂ ಸಮರ್ಥವಾಗಿ ನಿಭಾಯಿಸುವಿರಿ. ಆರೋಗ್ಯ ಸುಧಾರಣೆ.

ಮಿಥುನ
ವಿವಾಹಾಕಾಂಕ್ಷಿಗಳಿಗೆ ಶುಭ ಬೆಳವಣಿಗೆ. ಹಣದ ವಿಚಾರದಲ್ಲಿ  ಪ್ರಗತಿ. ಉನ್ನತ ವ್ಯಕ್ತಿಗಳ ಸಂಪರ್ಕದಿಂದ ಲಾಭ ಪಡೆಯುವಿರಿ. ವೃತ್ತಿಯಲ್ಲಿ ಉನ್ನತಿ.

ಕಟಕ
ಬಿಡುವಿಲ್ಲದ ದಿನ.  ಒಂದಿಲ್ಲೊಂದು ಕಾರ್ಯದಲ್ಲಿ ಸದಾ ಮಗ್ನ. ದೈಹಿಕ ತೊಂದರೆಗಳು ಮನಸ್ಸಿನ ನೆಮ್ಮದಿ ಕದಡಬಹುದು. ವಿಶ್ರಾಂತಿ ಅವಶ್ಯ.

ಸಿಂಹ
ದುಬಾರಿ ವಸ್ತುಗಳ ಮೇಲೆ ಅತಿಯಾಗಿ ಹಣ ವ್ಯಯಿಸುವಿರಿ. ಬಾಕಿ ಕಾರ್ಯಗಳ ಪೂರೈಕೆಗೆ ಸಹೋದ್ಯೋಗಿಯ ನೆರವು ಲಭ್ಯ. ಪಯಣದಲ್ಲಿ ತೊಂದರೆ.

ಕನ್ಯಾ
ನಿರಾಳ, ಸ್ವಸ್ಥ ಮನಸ್ಥಿತಿ ನಿಮಗಿಂದು ಕಠಿಣ ಕಾರ್ಯ ಪೂರೈಸಲೂ ಸಹಕಾರಿಯಾಗುವುದು.  ಆತ್ಮೀಯರ ಜತೆ ಕಾಲಕ್ಷೇಪ. ಸಂತೋಷದ ದಿನವಿದು.

ತುಲಾ
ಕುಟುಂಬ ಸದಸ್ಯರ ಜತೆ ಆತ್ಮೀಯ ಒಡನಾಟ. ಕೆಲಸದ ಒತ್ತಡ ಇಂದು ನಿಮ್ಮನ್ನು ಬಾಧಿಸದು. ಗೆಳೆಯರು ನಿಮ್ಮಿಂದ ನೆರವು ಅಪೇಕ್ಷಿಸಿಯಾರು.

ವೃಶ್ಚಿಕ
ವಿವಾದಗಳು ನಿಮ್ಮನ್ನು ಸುತ್ತುವರಿಯಬಹುದು. ನಾಜೂಕಿನಿಂದ ವ್ಯವಹರಿಸಿ. ಕೌಟುಂಬಿಕ ಬದ್ಧತೆಯನ್ನು ಸರಿಯಾಗಿ ಈಡೇರಿಸುವಿರಿ. ಅದರಿಂದ ಸಂತೃಪ್ತಿ.

ಧನು
ಕರ್ತವ್ಯಕ್ಕಿಂತ ಹೆಚ್ಚು ಆದ್ಯತೆಯನ್ನು ನೀವು ಕುಟುಂಬದ ಕಡೆಗೂ ಕೊಡಬೇಕು. ಅವರಿಗೆ ನಿಮ್ಮ ಬೆಂಬಲದ ಅಗತ್ಯವಿದೆ. ಆರೋಗ್ಯದಲ್ಲಿ ಪ್ರಗತಿ.

ಮಕರ
ನಿಮ್ಮ ಸಾಮರ್ಥ್ಯವನ್ನು ನೀವೇ ಕೀಳಂದಾಜು ಮಾಡಿಕೊಂಡಿದ್ದೀರಿ. ನಿಜವಾಗಿ ಯಾವುದೇ ಗುರಿ ಅಥವಾ ಕೆಲಸ  ಸಾಧಿಸಲು ನೀವು ಸಮರ್ಥರಿದ್ದೀರಿ.

ಕುಂಭ
ಬಂಧುಗಳ ಸಮಸ್ಯೆ ನಿಮ್ಮನ್ನೂ ಸುತ್ತುವರಿಯಬಹುದು. ಸಹೋದ್ಯೋಗಿ ಜತೆಗಿನ ವಾಗ್ವಾದ ಗಂಭೀರ ಸ್ವರೂಪ ತಾಳಬಹುದು. ಎಚ್ಚರವಿರಬೇಕಾದ ದಿನ.

ಮೀನ
ಗ್ರಹಗತಿ ಇಂದು ನಿಮ್ಮ ಭಾವನೆಗಳ ಅತಿರೇಕಕ್ಕೆ ಕಾರಣವಾಗುವುದು.  ತಂಪು ಪಾನೀಯ, ಆಹಾರದಿಂದ ದೂರವಿರಿ. ಆರೋಗ್ಯ ಕೆಡಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!