ದಿನಭವಿಷ್ಯ: ಕೆಲವು ನಿರ್ಧಾರಗಳನ್ನು ಈಗಲೇ ತೆಗೆದುಕೊಳ್ಳಿ, ತಡವಾದೀತು!

ಮೇಷ
ಭೌತಿಕ ಸಂತೋಷಗಳಿಗೆ ಇಂದು ಹೆಚ್ಚು ಗಮನ ಕೊಡುವಿರಿ. ಕಾರ್ಯದಲ್ಲಿ ಉದಾಸೀನತೆ. ಖರ್ಚು ಅಧಿಕ. ದುಬಾರಿ ವಸ್ತು ಖರೀದಿ ಸಂಭವ.

ವೃಷಭ
ನಿಮ್ಮ ಸುತ್ತಲಿರುವ ವೈರಿಗಳನ್ನು ಮೊದಲು ಗುರುತಿಸಿಕೊಳ್ಳಿ. ಅವರನ್ನು ನಿಭಾಯಿಸಲು ಕಲಿಯಿರಿ. ಆದರೆ ನಿಮಗೆ ಯಾವುದೇ ಹಾನಿ ತಟ್ಟದು.

ಮಿಥುನ
ಖರ್ಚು ಮಿತಿ ಮೀರಬಹುದು. ಖರೀದಿಯ ಹುಮ್ಮಸ್ಸು ನಿಯಂತ್ರಿಸಿ. ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ಅವಶ್ಯ. ಹೊಟ್ಟೆ ಕೆಡುವ ಸಾಧ್ಯತೆಯಿದೆ.

ಕಟಕ
ಸಂಘರ್ಷದ ಮನೋಭಾವ ನಿಮ್ಮದು. ಯೋಚಿಸದೆ ಸಂಘರ್ಷ ನಡೆಸಿದರೆ  ನಿಮಗೇ ಹಾನಿ. ಯಾವುದಕ್ಕೂ ಅತಿರೇಕದ ಪ್ರತಿಕ್ರಿಯೆ ತೋರದಿರಿ.

ಸಿಂಹ
ನಿಮಗಿಂದು ಶುಭದಿನ. ಪ್ರತಿ ಕ್ಷೇತ್ರದಲ್ಲೂ ಪ್ರಗತಿ ಕಾಣಲಿದೆ. ಬದುಕು ಸುಂದರ ಎನಿಸಲಿದೆ. ಭಾವನಾತ್ಮಕ ಸಂತೋಷ ಅನುಭವಿಸುವಿರಿ. ಆಪ್ತರ ಭೇಟಿಯಿಂದ ಮುದ.

ಕನ್ಯಾ
ಕೆಲವು ನಿರ್ಧಾರ ತಾಳುವುದನ್ನು ಮುಂದೂಡಬೇಡಿ. ಅದರಿಂದ ನಿಮಗೇ ಪ್ರತಿಕೂಲವಾದಿತು. ಧೈರ್ಯದಿಂದ ಹೆಜ್ಜೆಯಿಡಿ.

ತುಲಾ
ಆರ್ಥಿಕ ಬಿಕ್ಕಟ್ಟು. ನಿಮ್ಮನ್ನು ಕೆಲವರು ತಪ್ಪು ದಾರಿಗೆ ಎಳೆಯಲು ಯತ್ನಿಸುವರು. ಸರಿಯಾಗಿ ಯೋಚಿಸಿ ಕಾರ್ಯವೆಸಗಿ. ಕೇಳಿಸಿದ್ದೆಲ್ಲ ನಂಬದಿರಿ.

ವೃಶ್ಚಿಕ
ಪ್ರೀತಿಪಾತ್ರರೆನಿಸಿದ ವ್ಯಕ್ತಿಯನ್ನು ಭೇಟಿಯಾಗುವಿರಿ. ದೈಹಿಕ ಶ್ರಮ ಇಂದು ಹೆಚ್ಚು. ದೇಹಾರೋಗ್ಯಕ್ಕೆ ಹೆಚ್ಚು ಗಮನ ಕೊಡಿ. ಕೌಟುಂಬಿಕ ಸಹಕಾರ.

ಧನು
ವಿಭಿನ್ನ ಶಕ್ತಿಗಳು ನಿಮ್ಮನ್ನು ಎರಡೂ ಕಡೆಗಳಿಂದ ಸೆಳೆಯುತ್ತವೆ. ನಿಮಗೆ ಯಾವ ಹಾದಿ ಉತ್ತಮ ಎಂಬುದನ್ನು ಸರಿಯಾಗಿ ವಿವೇಚಿಸಿ ಮುಂದೆ ಹೆಜ್ಜೆಯಿಡಿ.

ಮಕರ
ಪ್ರೀತಿಯ ವಿಷಯ ನಿಮಗೆ ಪೂರಕವಾಗಿಲ್ಲ. ನಿರಾಶೆ ಎದುರಿಸುವಿರಿ. ಸಂಬಂಧ ಕಾಯಲು ಆದ್ಯತೆ ಕೊಡಿ. ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಕಾಡಬಹುದು.

ಕುಂಭ
ಗೊಂದಲದ ದಿನ. ಒಳಿತು ಮತ್ತು ಕೆಡುಕುಗಳ ಸಂಘರ್ಷ ನಿಮ್ಮ ಮನದಲ್ಲಿ ನಡೆಯುವುದು. ಅದನ್ನು ನಾಜೂಕಿನಿಂದ ನಿಭಾಯಿಸಿ.

ಮೀನ
ನಿಮಗೆ ವಿಶ್ರಾಂತಿಯ ಅಗತ್ಯವಿದೆ. ದೈಹಿಕವಾಗಿಯೂ ಮಾನಸಿಕವಾಗಿಯೂ! ಸಾಮಾಜಿಕ ಕಾರ್ಯದಲ್ಲಿ ಸಂತೋಷ ಕಾಣುವಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!