ದಿನಭವಿಷ್ಯ: ಈ ರಾಶಿಯವರಿಗೆ ಇಂದು ವಿರಾಮವೇ ಇಲ್ಲ, ತುಂಬಾ ಕೆಲಸ

ಮೇಷ
ನೀವು ಪಾಲಿಸಿಕೊಂಡು ಬಂದ ಸಂಯಮಕ್ಕೆ ಫಲ ಸಿಗಲಿದೆ. ಕಷ್ಟಗಳ ನಿವಾರಣೆ. ಕಾರ್ಯದಲ್ಲಿ ಯಶಸ್ಸು ಸಿಗಲಿದೆ. ದೂರ ಪ್ರಯಾಣ ಸಂಭವ.

ವೃಷಭ
ಕೆಲವರು ನಿಮ್ಮ ಮೇಲೆ ಅಸೂಯೆ ಕಾರುತ್ತಾರೆ. ನಿಮ್ಮನ್ನು ವಂಚಿಸಲು ಯತ್ನಿಸಬಹುದು. ಕಠಿಣ ಕ್ರಮ ತೆಗೆದುಕೊಳ್ಳಲು ಅಂಜಬೇಕಿಲ್ಲ. ಆಪ್ತ  ಸಂಬಂಧ ಸದೃಢ.

ಮಿಥುನ
ವಿರಾಮವಿಲ್ಲದ ದಿನ. ಹೆಚ್ಚುವರಿ ಹೊಣೆ. ಪ್ರತಿಕೂಲ ವಾತಾವರಣ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಈ ಬಗ್ಗೆ ಎಚ್ಚರದಿಂದಿರಿ.

ಕಟಕ
ಪ್ರೀತಿಯ ವಿಷಯಕ್ಕೆ ಹೆಚ್ಚು ಗಮನ ಕೇಂದ್ರೀಕರಿಸುವಿರಿ. ಭಿನ್ನಾಭಿಪ್ರಾಯ ಮೂಡದಂತೆ ನೋಡಿಕೊಳ್ಳಿ. ಖರ್ಚು ಅಧಿಕವಾದೀತು.

ಸಿಂಹ
ಹಣ ಸಂಪಾದನೆ ಹೆಚ್ಚಳ. ಖರ್ಚೂ ಅದೇ ಪ್ರಮಾಣದಲ್ಲಿ ಏರಬಹುದು. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿ. ಕೌಟುಂಬಿಕ ಸಹಕಾರ.

ಕನ್ಯಾ
ನಿಮ್ಮ ಮನಸ್ಸನ್ನು ಬೇರೆಡೆ ಸೆಳೆಯುವಂತಹ ಬೆಳವಣಿಗೆ ಸಂಭವಿಸಬಹುದು. ಅದಕ್ಕೆ ಆಸ್ಪದ ಕೊಡದಿರಿ. ಹಿಡಿದ ಕಾರ್ಯ ಮೊದಲು ಮುಗಿಸಿರಿ.

ತುಲಾ
ಸಣ್ಣ ವಿಷಯಗಳೂ ನಿಮ್ಮನ್ನು ಸಿಕ್ಕಿನಲ್ಲಿ ಬೀಳಿಸುತ್ತವೆ. ಗೊಂದಲ ದಿಂದ ಹೊರಬನ್ನಿ. ಸೂಕ್ತ  ನಿರ್ಧಾರ ತಾಳಿ. ಚರ್ಮದ ಅಲರ್ಜಿ ಉಂಟಾದೀತು.

ವೃಶ್ಚಿಕ
ಹಲವಾರು ಕಾರ್ಯ ಮುಗಿಸಬೇಕಾದ ಒತ್ತಡ. ಆದರೆ ನಿಮ್ಮ ಮನಸ್ಸು ಮಾತ್ರ ಬೇರಾವುದೋ ವಿಷಯದಲ್ಲಿ ವ್ಯಸ್ತ. ಆರೋಗ್ಯದಲ್ಲಿ ಏರುಪೇರು ಸಂಭವ.

ಧನು
ಒಂದು ಸಮಸ್ಯೆ ಮುಗಿಯಿತು ಎಂದಾದಾಗ ಮತ್ತೊಂದು ಸಮಸ್ಯೆ ಹುಟ್ಟಿಕೊಂಡೀತು. ಒಟ್ಟಿನಲ್ಲಿ ಇಂದು ಮಾನಸಿಕ ಶಾಂತಿ ದೂರ.

ಮಕರ
ಆರ್ಥಿಕ ವ್ಯವಹಾರ ಎಚ್ಚರದಿಂದ ನಡೆಸಿ. ನಷ್ಟ ಆಗದಂತೆ ನೋಡಿಕೊಳ್ಳಿ.ಕರ್ತವ್ಯ ನಿಭಾವಣೆ ನಿಮಗೆ ಇಂದು ತೃಪ್ತಿ ನೀಡಲಾರದು. ಏನೋ ಬೇಕೆಂಬ ಹಂಬಲ.

ಕುಂಭ
ಕಳೆದುಕೊಂಡ ಪ್ರೀತಿ ಮರಳಿ ಗಳಿಸುವಿರಿ. ಅದರಿಂದಾಗಿ ಮಾನಸಿಕ ನಿರಾಳತೆ. ಇತರರ ಮನಸ್ಸಿಗೆ ನೋವು ತರುವ ಕೆಲಸ ಮಾಡಬೇಡಿ.

ಮೀನ
ನಿಮ್ಮ ಬದುಕಿನಲ್ಲಿ ಮೂಗು ತೂರಿಸಲು ಯತ್ನಿಸುತ್ತಾರೆ. ಅವರ ಉದ್ದೇಶ ಕೆಟ್ಟದೇ ಆಗಿದೆ. ಅದಕ್ಕೆ ಆಸ್ಪದ ನೀಡದಿರಿ. ಆರೋಗ್ಯ ಸುಧಾರಣೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!