ದಿನಭವಿಷ್ಯ: ಭಾವನಾತ್ಮಕ ಏರುಪೇರು ನಿಭಾಯಿಸಿ, ಸಣ್ಣ ವಿಷಯಕ್ಕೂ ಅತಿಯಾದ ಪ್ರತಿಕ್ರಿಯೆ ತೋರದಿರಿ

ಮೇಷ
ಹೊಂದಾಣಿಕೆಯಿಂದಲೇ ಇಂದು ನಿಮ್ಮ ಕೆಲಸ ಸಾಧಿಸುವಿರಿ. ಎಲ್ಲರ ಜತೆ ಉತ್ತಮವಾಗಿ ವ್ಯವಹರಿಸುವ ನಿಮ್ಮ ಸ್ವಭಾವ ಇದಕ್ಕೆ ಕಾರಣವಾಗುವುದು.

ವೃಷಭ
ನಿಮ್ಮ ಮುಖ್ಯ ಉದ್ದೇಶವೊಂದು ಇಂದು ಈಡೇರುವ ಸಾಧ್ಯತೆಯಿದೆ. ಅದಕ್ಕೆ ಪೂರಕವಾದ ಕಾರ್ಯ ಮಾಡಿರಿ. ಕೌಟುಂಬಿಕ ಸಹಕಾರ.

ಮಿಥುನ
ಸಮಸ್ಯೆ ಕಾಡಿದರೂ ಎದೆಗುಂದದಿರಿ. ಅದನ್ನು ಎದುರಿಸುವ ಧೈರ್ಯ ತೋರಿ. ನಿಮ್ಮ ಪರವಾಗಿ ಪರಿಸ್ಥಿತಿ ತಿರುಗಲಿದೆ. ವಿರೋಧಿಗಳು ಸೋಲು ಕಾಣುವರು.

ಕಟಕ
ಯಾವುದೇ ವಿಚಾರದಲ್ಲಿ ಆತುರದಿಂದ ವರ್ತಿಸದಿರಿ. ಅದು ಹಿನ್ನಡೆಯನ್ನೆ ಉಂಟು ಮಾಡುವುದು. ಸರಿಯಾಗಿ ಯೋಚಿಸಿ ಕಾರ್ಯವೆಸಗಿ.

ಸಿಂಹ
ನಿಮ್ಮ ಪ್ರೀತಿಯ ವ್ಯಕ್ತಿಗಳ ಕುರಿತು ಅತಿಯಾದ ಮೋಹ ತೋರುವಿರಿ. ಅವರ ಜತೆ ಇತರರ ಸಖ್ಯ ಸಹಿಸಲಾರಿರಿ. ಮಾನಸಿಕ ನೆಮ್ಮದಿ ಕಳೆದುಕೊಳ್ಳದಿರಿ.

ಕನ್ಯಾ
ಹಿರಿಯರಿಂದ ನಿಮಗೆ ಒಳಿತಾಗಲಿದೆ.  ಅವರ ನಡೆನುಡಿ ಅನುಸರಿಸಿರಿ. ಯಾರ ಜತೆಗಾದರೂ ಸಂಘರ್ಷ ನಡೆದಲ್ಲಿ ನಿಮಗೆ ಹಿನ್ನಡೆ ಉಂಟಾಗಬಹುದು.

ತುಲಾ
ಭಾವನಾತ್ಮಕ ಏರುಪೇರು  ನಿಭಾಯಿಸಿ. ಸಣ್ಣ ವಿಷಯಕ್ಕೂ ಅತಿಯಾದ ಪ್ರತಿಕ್ರಿಯೆ ತೋರದಿರಿ. ಆತ್ಮೀಯರ ವರ್ತನೆಗೆ ವಿಶೇಷ ಅರ್ಥ ಕಲ್ಪಿಸಲು ಹೋಗದಿರಿ.

ವೃಶ್ಚಿಕ
ಕುಟುಂಬ ಸದಸ್ಯರ ಜತೆ ವಾಗ್ವಾದ ಉಂಟಾದೀತು. ಆದರೆ ಅದು ಉಲ್ಬಣಕ್ಕೆ ಹೋಗದು. ಬಂಧುಗಳ ಭೇಟಿ. ಖರ್ಚು ಹೆಚ್ಚಳ ಚಿಂತೆಗೆ ಕಾರಣ. ಮಿತವ್ಯಯ ಮಾಡಿರಿ.

ಧನು
ಆತ್ಮೀಯರೊಬ್ಬರ ಆರೋಗ್ಯ ಚಿಂತೆಗೆ ಕಾರಣವಾದೀತು. ಈ ಚಿಂತೆ ಬಳಿಕ ನಿವಾರಣೆ ಆಗುವುದು. ಖರ್ಚುವೆಚ್ಚಗಳು ಇಂದು ಅಧಿಕ.

ಮಕರ
ಕೆಲವರ ಸವಿಮಾತನ್ನು ನಂಬಿ ಮೋಸ ಹೋಗದಿರಿ.ಅವರ ವರ್ತನೆಯ ಮುಖ್ಯ ಉದ್ದೇಶ ಅರಿತು ವ್ಯವಹರಿಸಿರಿ. ಕೌಟುಂಬಿಕ ಸಹಕಾರ.

ಕುಂಭ
ಒಳ್ಳೆ ಕೆಲಸದಿಂದ ನಿಮ್ಮ ಸುತ್ತಲಿನ ಜನರ ಮೆಚ್ಚುಗೆ ಪಡೆಯುವಿರಿ. ಹಣಕಾಸು ಸಮಸ್ಯೆ ಪರಿಹಾರ. ಆರೋಗ್ಯ ಸುಧಾರಣೆ. ಕೌಟುಂಬಿಕ ನೆಮ್ಮದಿ.

ಮೀನ
ಭಾವನಾತ್ಮಕ ವಿಷಯಕ್ಕೆ  ಇಂದು ಆದ್ಯತೆ ಕೊಡುವಿರಿ. ಇದರಿಂದ ಮನಸ್ಸಿಗೆ ಬೇಸರ.  ಆಪ್ತರ ವರ್ತನೆಯನ್ನು ತಪ್ಪಾಗಿ ಅರ್ಥೈಸದಿರಿ. ವಿವೇಚನೆ ಮುಖ್ಯ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!