ಮೇಷ.
ಫಲಪ್ರದ ದಿನ. ವೃತ್ತಿಯಲ್ಲಿ ತೃಪ್ತಿಕರ ಬೆಳವಣಿಗೆ. ಮುಖ್ಯ ಗುರಿಯೊಂದು ಈಡೇರುವ ಕಾಲ ಸನ್ನಿಹಿತವಾಗಿದೆ.
ವೃಷಭ
ಕೆರಿಯರ್‌ನಲ್ಲಿ ಉನ್ನತಿ. ನಿಮ್ಮ ವೃತ್ತಿಪರತೆ ಮೆಚ್ಚುಗೆ ಗಳಿಸಲಿದೆ. ಆಪ್ತರ ಮುಖದಲ್ಲಿ ನಗು ಅರಳಿಸಲು ಶಕ್ತರಾಗುವಿರಿ. ಆರೋಗ್ಯ ಸುಸ್ಥಿರ.
ಮಿಥುನ
ವೃತ್ತಿ ಮತ್ತು ಖಾಸಗಿ ಬದುಕಲ್ಲಿ ಎಲ್ಲವೂ ಸುಸೂತ್ರ. ಸಮಸ್ಯೆ ಬಾಽಸದು. ದಿನದಂತ್ಯಕ್ಕೆ ನಿಮ್ಮ ಉತ್ಸಾಹ ಹೆಚ್ಚಿಸುವ ಬೆಳವಣಿಗೆ ಸಂಭವ.
ಕಟಕ
ವೃತ್ತಿಯಲ್ಲಿ ಪೂರಕ ವಾತಾವರಣ. ಆತ್ಮೀಯರ ಜತೆ ಕಳೆಯುವ ಅವಕಾಶ. ಆರೋಗ್ಯದ ಕುರಿತಾದ ಚಿಂತೆ ಪರಿಹಾರ. ಕೌಟುಂಬಿಕ ಸಾಮರಸ್ಯ.
ಸಿಂಹ
ಗುಣಾತ್ಮಕ ಬೆಳವಣಿಗೆ. ಉತ್ಸಾಹದ ದಿನ. ಹಳೆಯ ಹಣ ಹೂಡಿಕೆಯಿಂದ ಲಾಭ. ಪ್ರೀತಿಯ ಭಾವ ಮನ ಆವರಿಸಲಿದೆ.
ಕನ್ಯಾ
ಕಾಲಮಿತಿಯಲ್ಲಿ ಕಾರ್ಯ ಸಂಪೂರ್ಣ.ಒತ್ತಡ ನಿವಾರಣೆ. ಖಾಸಗಿ ಬದುಕಲ್ಲಿ ಗೊಂದಲ ನಿವಾರಿಸಿ. ಸ್ಪಷ್ಟ ನಿಲುವು, ದೃಷ್ಟಿಕೋನ ಇರಲಿ.
ತುಲಾ
ತೃಪ್ತಿಕರ ದಿನ. ಆರ್ಥಿಕ ಉನ್ನತಿ. ಕುಟುಂಬ ಸದಸ್ಯರ ಸಾಧನೆಯಿಂದ ಹೆಮ್ಮೆ. ಏಕಾಂಗಿಗಳಿಗೆ ವಿವಾಹ ಸಂಬಂಧ ಉಂಟಾದೀತು.
ವೃಶ್ಚಿಕ
ವೃತ್ತಿಯಲ್ಲಿ ಯಶ. ಎಲ್ಲರ ಗಮನ ಸೆಳೆಯುವ ಸಾಧನೆ. ಸಂಗಾತಿ ಜತೆ ಉತ್ತಮ ಹೊಂದಾಣಿಕೆ. ಇತರರ ಮೇಲೆ ರೇಗಲು ಹೋಗಬೇಡಿ.
ಧನು
ಆರ್ಥಿಕವಾಗಿ ಸಂತೃಫ್ತಿಯ ದಿನ. ಕೌಟುಂಬಿಕ ಸೌಹಾರ್ದ. ಹೊಸ ವ್ಯವಹಾರದಲ್ಲಿ ಹಣ ಹೂಡಲು ಪರಿಸ್ಥಿತಿ ಪೂರಕವಾಗಿದೆ.
ಮಕರ
ಇಂದು ನಿಮಗೆ ಪರಿಸ್ಥಿತಿ ಪೂರಕವಾಗಿಲ್ಲ. ಅಧಿಕವಾಗಿ ಚಿಂತಿಸುವುದು ನಿಲ್ಲಿಸಿ. ಆಪ್ತರ ಜತೆ ಅಭಿಪ್ರಾಯಭೇದ. ಯೋಗ ಸಹಕಾರಿ.
ಕುಂಭ
ಕೆಲಸ ಒತ್ತಡ, ಕೌಟುಂಬಿಕ ಹೊಣೆ ಇಂದು ನಿಮಗೆ ಅತಿಯೆನಿಸಲಿದೆ. ಒತ್ತಡದಿಂದ ಸಂಕಷ್ಟ. ಧ್ಯಾನ ಮಾಡಿರಿ.
ಮೀನ
ಮನಸ್ಸಿನ ಮೇಲೆ ಹಿಡಿತ ಸಾಧಿಸಿ. ನೆಮ್ಮದಿ ಕಲಕುವ ವಿಷಯ ಮನಸ್ಸಿನಿಂದ ದೂರ ಸರಿಸಿ. ಆರ್ಥಿಕ ಹಿನ್ನಡೆ ಸಂಭವ. ಬಂಧು ಭೇಟಿ.
ದಿನಭವಿಷ್ಯ: ಈ ರಾಶಿಯವರಿಗೆ ಇಂದು ಫಲಪ್ರದ ದಿನ, ವೃತ್ತಿಯಲ್ಲಿ ತೃಪ್ತಿಕರ ಬೆಳವಣಿಗೆ
