ದಿನಭವಿಷ್ಯ: ಆತ್ಮೀಯರ ಜತೆ ವಾಗ್ವಾದ ಮಾಡದಿರಿ, ಅದರಿಂದ ಸಂಬಂಧ ಹಾಳಾಗಬಹುದು

ಮೇಷ
ನಿಮ್ಮ ಕೆಲಸದ ಬಗ್ಗೆ  ಕೆಲವರಿಂದ ಅಸಂತೋಷ ವ್ಯಕ್ತವಾದೀತು. ಅವರ ಉದ್ದೇಶದ ಹಿಂದೆ ಅಸೂಯೆ ಇರಬಹುದು. ಓಲೈಸುವ ಯತ್ನ ಮಾಡಬೇಡಿ.

ವೃಷಭ
ಋಣಾತ್ಮಕ ಚಿಂತನೆ
ನಿಮ್ಮ ಮನಸ್ಸನ್ನು ಆವರಿಸಬಹುದು. ಅದಕ್ಕೆ ಅವಕಾಶ ಕೊಡಬೇಡಿ. ಭವಿಷ್ಯದ ಕುರಿತಂತೆ ಅತಿಯಾಗಿ ಚಿಂತಿಸುವುದು ಬಿಡಿ.

ಮಿಥುನ
ಆತ್ಮೀಯರ ಜತೆ ವಾಗ್ವಾದ ಮಾಡದಿರಿ. ಅದರಿಂದ ಸಂಬಂಧ ಹಾಳಾಗಬಹುದು. ಸಂಯಮದ ವರ್ತನೆ ಇಂದು ಅಗತ್ಯ. ಹಣದ ಸಂಕಷ್ಟ ಕಾಡುವುದು.

ಕಟಕ
ನಿಮ್ಮ ವೃತ್ತಿಕ್ಷೇತ್ರದಲ್ಲಿ ಸ್ಪರ್ಧೆ ಎದುರಿಸುವಿರಿ. ಅದನ್ನು ಸಮರ್ಥವಾಗಿ ಎದುರಿಸಿ. ಹತಾಶ ರಾಗದಿರಿ. ಕೌಟುಂಬಿಕ ಸಹಕಾರದಿಂದ ಮನಸ್ಸಿಗೆ ನಿರಾಳತೆ.

ಸಿಂಹ
ಮುಂಜಾನೆ ಅವಧಿ ಹರ್ಷಚಿತ್ತರಾಗುವಿರಿ. ಆದರೆ ದಿನ ಕಳೆದಂತೆ ಹೊಸ ಸವಾಲು ಎದುರಾಗಬಹುದು. ಅದನ್ನು ತಾಳ್ಮೆಯಿಂದ ನಿಭಾಯಿಸಿ.

ಕನ್ಯಾ
ವೃತ್ತಿಯಲ್ಲಿ ಕೆಲವು ಅನಪೇಕ್ಷಿತ ಬೆಳವಣಿಗೆ ಉಂಟಾದೀತು. ಅದನ್ನು ಕೌಶಲದಿಂದ ನಿಭಾಯಿಸಿ. ದುಡುಕಿನ ನಿರ್ಧಾರ ಪ್ರತಿಕೂಲ ಪರಿಣಾಮ ಬೀರೀತು.

ತುಲಾ
ನಿಮ್ಮ ಉತ್ಸಾಹ ವೃದ್ಧಿಸುವ ಬೆಳವಣಿಗೆ. ವೃತ್ತಿ ಕಾರ್ಯ ಮತ್ತು ವೈಯಕ್ತಿಕ ಬದುಕಿನ ಮಧ್ಯೆ ಸೂಕ್ತ ಸಮತೋಲನ ಸಾಧಿಸಲು ಶಕ್ತರಾಗುವಿರಿ.

ವೃಶ್ಚಿಕ
ದೈನಂದಿನ ಒತ್ತಡದ ಬದುಕು ಸಾಕೆಣಿಸಬಹುದು. ವಿಶ್ರಾಂತಿ ಪಡೆಯುವ ಇಚ್ಛೆ. ಆದರೆ ಕಾರ್ಯಬಾಹುಳ್ಯ ಅದಕ್ಕೆ ಅವಕಾಶ ನೀಡದು.

ಧನು
ಇಂದು ನಿಮ್ಮ ಹಣಕಾಸು ಪರಿಸ್ಥಿತಿ ಉತ್ತಮಗೊಳ್ಳುವುದು. ವೈಯಕ್ತಿಕ ಬದುಕಿನಲ್ಲಿ ಮನಸ್ಸಿಗೆ ಬೇಸರ ತರುವ ಪ್ರಸಂಗ ಸಂಭವಿಸಬಹುದು.

ಮಕರ
ಎಲ್ಲವೂ ಸರಿಯಾಗಿದ್ದರೂ ಸಣ್ಣ ಕೊರಗು ಕಾಡುವುದು. ಅದಕ್ಕೆ ಮೂಲ ಕಾರಣ ಏನೆಂದು ಅರಿಯಿರಿ. ಬಳಿಕ ಅದರ ಪರಿಹಾರಕ್ಕೆ ಪ್ರಯತ್ನಿಸಿ.

ಕುಂಭ
ನಿಮ್ಮ ಕಾರ್ಯವನ್ನು ಪ್ರಾಮಾಣಿಕತೆಯಿಂದ ಮಾಡಿ. ಫಲಾಫಲ ಉತ್ತಮವೇ ಆಗುವುದು. ತಾಳ್ಮೆಯಿಂದ ಕಾಯುವುದು ಮುಖ್ಯ. ಅವಸರ ಬೇಡ.

ಮೀನ
ಧಾರ್ಮಿಕ ವಿಚಾರಗಳು ಆದ್ಯತೆ ಪಡೆಯುವುದು. ಧಾರ್ಮಿಕ ವ್ಯವಹಾರ ದಲ್ಲಿ ತೊಡಗುವಿರಿ. ಸಮಸ್ಯೆಗಳ ಪರಿಹಾರಕ್ಕೆ ಯತ್ನಿಸುವಿರಿ. ಇದರಲ್ಲಿ  ಫಲ ಸಿಗುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!