ಮೇಷ
ನಿಮ್ಮ ಖಾಸಗಿ ವ್ಯವಹಾರ ಇತರರ ಟೀಕೆಗೆ ಗುರಿಯಾದೀತು. ಅದನ್ನು ಕಡೆಗಣಿಸಿ. ಆಪ್ತೇಷ್ಟರ ಹಿತ ಕಾಯಲು ಆದ್ಯತೆ ಕೊಡಬೇಕಾಗುವುದು
ವೃಷಭ
ವ್ಯಕ್ತಿಯೊಬ್ಬರು ನಿಮ್ಮ ಬದುಕಿನಲ್ಲಿ ಕುಶಿ ಮತ್ತು ನೋವು ಎರಡನ್ನೂ ತರುವರು. ಅತಿಯಾದ ಭಾವುಕತೆ ನಿಮಗೇ ಹಾನಿ ತಂದೀತು. ವಿವೇಕದಿಂದಿರಿ.
ಮಿಥುನ
ಕೌಟುಂಬಿಕ ವಿಷಯ ಬದಿಗೆ ಸರಿಯಲ್ಪಟ್ಟು, ಸಾಮಾಜಿಕ ಕಾರ್ಯಕ್ಕೆ ಆದ್ಯತೆ ಕೊಡಬೇಕಾದ ಪ್ರಸಂಗ. ಮನಸ್ಸಿನಲ್ಲೇನೋ ಅತೃಪ್ತಿ ಕಾಡುವುದು.
ಕಟಕ
ಇಂದಿನ ದಿನ ನಿಮಗೆ ಪೂರಕವಾಗಿದೆ. ಆರ್ಥಿಕವಾಗಿ ಮತ್ತು ವೃತ್ತಿಯಲ್ಲಿ ನೀವು ಬಯಸಿದ ಬೆಳವಣಿಗೆ. ಕೌಟುಂಬಿಕ ಸಮಸ್ಯೆ ನಿವಾರಣೆ.
ಸಿಂಹ
ವದಂತಿಗಳಿಗೆ ಕಿವಿಗೊಡದಿರಿ. ಕಿವಿಗೊಟ್ಟರೆ ನಿಮ್ಮದೇ ಮನಶ್ಯಾಂತಿ ಹಾಳು. ಖಾಸಗಿ ಮತ್ತು ವೃತ್ತಿ ಬದುಕಿನ ಮಧ್ಯೆ ಹೊಂದಾಣಿಕೆ ಸಾಧಿಸಿ.
ಕನ್ಯಾ
ನಿಮ್ಮ ಆದರ್ಶದಿಂದ ಇತರರನ್ನು ಬದಲಿಸುವ ಗುರಿ ಹೊಂದಿದ್ದರೆ ಅದರಲ್ಲಿ ಯಶ ಕಾಣಲಾರಿರಿ. ಕೆಲವರನ್ನು ಬಗ್ಗಿಸುವುದು ಅಸಾಧ್ಯ ಎಂಬ ಅರಿವು ಆಗಲಿದೆ.
ತುಲಾ
ಕಳೆದು ಹೋದ ಕಾರ್ಯಕ್ಕೆ ಪರಿತಪಿಸುತ್ತ ಕೂರಬೇಡಿ. ತಪ್ಪು ಸರಿಪಡಿಸುವುದು ಜಾಣತನ. ಇದು ನಿಮಗಿಂದು ಅನ್ವಯ ವಾಗುವ ಮಾತು.
ವೃಶ್ಚಿಕ
ಆರೋಗ್ಯ ಸಮಸ್ಯೆ ಕಾಣಿಸಿದರೆ ಕೂಡಲೇ ಪರಿಹಾರ ಕಂಡುಕೊಳ್ಳಿ. ನಿರ್ಲಕ್ಷ್ಯ ಬೇಡ. ಕುಟುಂಬ ಸದಸ್ಯರಿಂದ ಉದ್ವಿಗ್ನ ಸ್ಥಿತಿ ಅನುಭವಿಸುವಿರಿ.
ಧನು
ಕೌಟುಂಬಿಕ ವಿಚಾರ ಇಂದು ಆದ್ಯತೆ ಪಡೆಯುತ್ತದೆ. ಸಾಂಸಾರಿಕ ಶಾಂತಿ ಉಳಿಸಿಕೊಳ್ಳುವುದು ಮುಖ್ಯ. ಸಹನೆಯೂ ಅತ್ಯವಶ್ಯ.
ಮಕರ
ಸಕಾರಾತ್ಮಕ ಮನೋಭಾವದಿಂದ ಕಾರ್ಯ ನಿರ್ವಹಿಸಿ. ಇಲ್ಲವಾದರೆ ನಿಮ್ಮ ಕೆಲಸವನ್ನು ನೀವೇ ಕೆಡಿಸಿಕೊಳ್ಳುವಿರಿ. ಅದಕ್ಕೆ ಅವಕಾಶ ಕೊಡದಿರಿ.
ಕುಂಭ
ಸಾಲು ಸಾಲು ಸಮಸ್ಯೆಗಳಿಂದ ಕಂಗೆಡುವಿರಿ. ಆದರೆ ನೆನಪಿಡಿ, ಇದೆಲ್ಲ ತಾತ್ಕಾಲಿಕ. ಒಳ್ಳೆ ದಿನ ಬಂದೇ ಬರುತ್ತದೆ ಎಂಬ ವಿಶ್ವಾಸವಿರಲಿ.
ಮೀನ
ಯಾವುದೇ ಪರಿಸ್ಥಿತಿಯ ವಾಸ್ತವತೆ ಅರಿಯದೆ ಪ್ರತಿಕ್ರಿಯಿಸಲು ಹೋಗಬೇಡಿ. ನಿಮ್ಮನ್ನು ನೀವೇ ಇಕ್ಕಟ್ಟಿನಲ್ಲಿ ಸಿಲುಕಿಸಬಹುದು. ಸಂಯಮವಿರಲಿ.