ದಿನಭವಿಷ್ಯ: ನಿಮ್ಮ ಬದುಕಿನ ಮೇಲೆ ನಿಯಂತ್ರಣ ಸಾಧಿಸುವಿರಿ, ಉತ್ತಮ ದಿನ

ಮೇಷ
ಇಂದಿನ ನಿಮ್ಮ ಕಾರ್ಯವೆಲ್ಲ ಸರಾಗವಾಗಿ ನಡೆದೀತು ಎಂಬ ಭಾವನೆ ಬೇಡ. ಅನಿರೀಕ್ಷಿತ ತೊಡಕು ಬಾಧಿಸಬಹುದು. ಆಪ್ತರ ಜತೆ ಕಲಹವಾದೀತು.

ವೃಷಭ
ನಿಮ್ಮೆಡೆಗೆ ಪ್ರೀತಿಪಾತ್ರರ ವರ್ತನೆಯು ಚಿಂತೆಗೆ ಕಾರಣವಾದೀತು. ಇದೆಲ್ಲ ತಾತ್ಕಾಲಿಕ. ಆ ಕುರಿತು ಅತಿಯಾಗಿ ಚಿಂತಿಸಬೇಡಿ. ಕೋಪತಾಪ ನಿಯಂತ್ರಿಸಿ

ಮಿಥುನ
ಅದೃಷ್ಟದ ದಿನ. ಸಮಸ್ಯೆಗೆ ಸಿಲುಕಿದ್ದ ಕಾರ್ಯ ಸಫಲವಾಗಿ ಮುಗಿಯಲಿದೆ. ಉದ್ಯೋಗದಲ್ಲಿ ಹೊಸ  ಅವಕಾಶ. ಸೌಹಾರ್ದ ಕೌಟುಂಬಿಕ ಪರಿಸರ.

ಕಟಕ
ಉತ್ಸಾಹ ಕುಂದಿದ ದಿನ. ನೆರೆಕರೆ ಜತೆ ಜಗಳ ಆದೀತು. ವಾಗ್ವಾದಕ್ಕೆ ಆಸ್ಪದ ಕೊಡದಿರಿ. ಕುಟುಂಬಸ್ಥರ ಜತೆ  ಹೆಚ್ಚು ಕಾಲ ಕಳೆಯಲು  ಗಮನ ಕೊಡಿ.

ಸಿಂಹ
ಆರೋಗ್ಯಕ್ಕೆ ಸಂಬಂಧಿಸಿ ಎಚ್ಚರವಿರಲಿ. ಮುಖ್ಯವಾಗಿ ಕಂಡದ್ದೆಲ್ಲ ತಿನ್ನಲು ಹೋಗಬೇಡಿ. ವೃತ್ತಿಯಲ್ಲಿ  ಅನುಕೂಲ ಬೆಳವಣಿಗೆ. ಹಣದ ವ್ಯವಹಾರ ತೃಪ್ತಿಕರ.

ಕನ್ಯಾ
ನಿಮ್ಮ ಬದುಕಿನ ಮೇಲೆ ನಿಯಂತ್ರಣ ಸಾಧಿಸುವಿರಿ. ಹಳೆಯ ವಿಷಯ ಹೊಸದಾಗಿ ಸಮಸ್ಯೆ ಸೃಷ್ಟಿಸಿದರೂ ಅದನ್ನು ನಿಭಾಯಿಸಲು ಶಕ್ತರಾಗುವಿರಿ.

ತುಲಾ
ಸಮಸ್ಯೆಯೊಂದರ ಕುರಿತು ಅತಿಯಾಗಿ ಚಿಂತಿಸುತ್ತೀರಿ. ಅದರ ಬದಲಾಗಿ ಪರಿಹಾರದ ಕಡೆ ಗಮನ ಕೊಡಿ. ಸೂಕ್ತ ನೆರವೂ ಒದಗಲಿದೆ.

ವೃಶ್ಚಿಕ
ನಿಮ್ಮ ಪಾಲಿಗೆ ಇಂದು ಕಠಿಣ ದಿನವಾದೀತು. ಪ್ರತಿಕೂಲ ಪರಿಸ್ಥಿತಿ ಎದುರಾಗುವುದು. ಶಾಂತಚಿತ್ತದಿಂದ ಎಲ್ಲವನ್ನು ನಿಭಾಯಿಸಿ. ಸಂಜೆ ವೇಳೆ ನಿರಾಳತೆ.

ಧನು
ಬೆಳಗಿನ ಹೊತ್ತು ಉತ್ಸಾಹಹೀನತೆ. ಆದರೆ ದಿನ ಕಳೆದಂತೆ ಉತ್ಸಾಹ ತುಂಬಿಕೊಳ್ಳುವಿರಿ. ಬಾಕಿ ಇರುವ ಕಾರ್ಯ ಮುಗಿಸಲು ಗಮನ ಕೊಡಿ. ಧನಲಾಭ.

ಮಕರ
ನಿಮ್ಮ ಮನಸ್ಸಿನ ಭಾವನೆ ಹಂಚಿಕೊಳ್ಳಲು ಹಿಂಜರಿಕೆ ಬೇಕಿಲ್ಲ. ಅದು ದೌರ್ಬಲ್ಯದ ಸಂಕೇತವೂ ಅಲ್ಲ. ಮನಸ್ಸು ನಿರಾಳಗೊಳಿಸಿ. ಖರ್ಚು ಇಂದು ಹೆಚ್ಚಬಹುದು.

ಕುಂಭ
ಉತ್ಸಾಹರಹಿತ ದಿನ. ಇದು ನಿಮ್ಮ ದೈನಂದಿನ ಕಾರ್ಯದ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಿ. ಬೆನ್ನು ನೋವು, ಸಂಧಿನೋವು ಕಾಡಬಹುದು.

ಮೀನ
ಪ್ರತಿಕೂಲ ಪರಿಸ್ಥಿತಿ ಎದುರಿಸಿದರೂ ಅದನ್ನು ಶಾಂತವಾಗಿ ಸ್ವೀಕರಿಸಿ. ಆತುರದ ಪ್ರತಿಕ್ರಿಯೆ ತೋರಿದರೆ ಅದು ನಿಮಗೇ ಹಾನಿಕರ. ಕೌಟುಂಬಿಕ ಸಹಕಾರ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!