ದಿನಭವಿಷ್ಯ: ಸಣ್ಣ ವಿಷಯದಕ್ಕೂ ಕೋಪ ಬೇಡ, ನಿಧಾನವಾಗಿ ಯೋಚಿಸಿ ತೀರ್ಮಾನಿಸಿ..

ಮೇಷ
ಏನೋ ಕಳಕೊಂಡ ಹತಾಶ ಭಾವ ಕಾಡುವುದು. ನಿಮ್ಮ ಇಷ್ಟದ ವ್ಯಕ್ತಿ ದೂರ ಆಗಿರುವುದು ಇದಕ್ಕೆ ಕಾರಣ. ಪಾಸಿಟಿವ್ ಚಿಂತನೆ ಬೆಳೆಸಿ.

ವೃಷಭ
ವೃತ್ತಿಯಲ್ಲಿ ಅಧಿಕ ಒತ್ತಡ. ಇತರರ ಜತೆ ಹೊಂದಾಣಿಕೆಯ ಕೊರತೆ ಇದಕ್ಕೆ ಕಾರಣವಾದೀತು.  ಇತರರಿಂದ ಸ್ಪಂದನೆ ದೊರಕಲಾರದು.

ಮಿಥುನ
ನಿಮ್ಮ ಕಾರ್ಯದಲ್ಲಿ ಉದಾಸೀನತೆ ತೋರದಿರಿ. ಕಾಟಾಚಾರದ ಕೆಲಸ ಫಲ ನೀಡದು. ಇತರರಿಂದ ಟೀಕೆ ಕೇಳುವಿರಿ.

ಕಟಕ
ಫಲಪ್ರದ ದಿನ. ನಿಮ್ಮ ಕೋರಿಕೆ ಈಡೇರು ವುದು. ಉದ್ದೇಶ ಪ್ರಾಪ್ತಿ. ಕೌಟುಂಬಿಕ ಸಮಸ್ಯೆ ಪರಿಹಾರ. ಭಿನ್ನಾಭಿಪ್ರಾಯ ನಿವಾರಣೆ.

ಸಿಂಹ
ವೃತ್ತಿಯಲ್ಲಿ ಹೆಚ್ಚು ಹೊಣೆಗಾರಿಕೆ. ಆಪ್ತರೊಡನೆ ನಿಮ್ಮ ಭಾವನೆ ಹಂಚಿಕೊಳ್ಳಲು ಹಿಂಜರಿಯಬೇಡಿ. ಪೂರಕ ಸ್ಪಂದನೆ ದೊರಕುವುದು.

ಕನ್ಯಾ
ಸಣ್ಣ ವಿಷಯಕ್ಕೂ ಅತಿಯಾಗಿ ಉದ್ವಿಗ್ನ ಗೊಳ್ಳಬೇಡಿ. ತಾರ್ಕಿಕವಾಗಿ ಯೋಚಿಸಿ ಬಳಿಕ ಕಾರ್ಯವೆಸಗಿ. ಅವಸರದ ತೀರ್ಮಾನ ಒಳಿತು ತಾರದು.

ತುಲಾ
ಇತರರ ಭಾವನೆಗೆ ಆಪ್ತವಾಗಿ ಸ್ಪಂದಿಸುವ ನಿಮ್ಮ ಗುಣ ಎಲ್ಲರ ಮೆಚ್ಚುಗೆ ಗಳಿಸುವುದು. ನೀವು ನೀಡಿದ ನೆರವಿಗೆ ಉತ್ತಮ ಪ್ರತಿಫಲ ಪಡೆಯುವಿರಿ.

ವೃಶ್ಚಿಕ
ಸಂಬಂಧದಲ್ಲಿ ಪ್ರಾಮಾಣಿಕತೆ ಇರಲಿ. ಅದರಿಂದ ಭಿನ್ನಮತ ನಿವಾರಣೆ. ಆರ್ಥಿಕ ಲಾಭ. ಆಹಾರ ಸೇವನೆ ಹಿತಮಿತ ಇದ್ದರೆ  ಅಜೀರ್ಣತೆ ಕಾಡದು.

ಧನು
ಕಾರ್ಯದೊತ್ತಡ. ಸಮಯ ಮಿತಿಯಲ್ಲಿ ಕೆಲಸ ಪೂರೈಸುವ ಹೊಣೆಗಾರಿಕೆ. ಅದರಲ್ಲಿ ಪೂರ್ಣ ಸಫಲರಾಗುವುದಿಲ್ಲ. ಆಪ್ತರಿಂದ ಸಹಾಯ.

ಮಕರ
ಕೆಲಸದಲ್ಲಿ ಅವಸರ ತೋರದಿರಿ. ಅದರಿಂದ ಪ್ರತಿಕೂಲವೇ ಆದೀತು. ಸಮಾಧಾನದಿಂದ ಕೆಲಸ ನಿರ್ವಹಿಸಿದರೆ ಉತ್ತಮ ಫಲ ಪಡೆಯುವಿರಿ. ಆರೋಗ್ಯ ಸುಸ್ಥಿರ.

ಕುಂಭ
ಆಪ್ತರ ಮನ ಗೆಲ್ಲಲು ಸಫಲರಾಗುವಿರಿ. ಆತ್ಮವಿಶ್ವಾಸ ಹೆಚ್ಚಳ. ಆರೋಗ್ಯ ಸಮಸ್ಯೆ ಹೊಂದಿದ್ದರೆ ಅದರಲ್ಲಿ ಸುಧಾರಣೆ ಕಾಣುವಿರಿ. ಕೌಟುಂಬಿಕ ನೆಮ್ಮದಿ.

ಮೀನ
ಕಾರ್ಯಸಿದ್ಧಿ. ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಿ. ಮನೆಯಲ್ಲಿ ಅನವಶ್ಯ ವಾಗ್ವಾದಕ್ಕೆ ಇಳಿಯದಿರಿ. ಅದರಿಂದ ಶಾಂತಿ ಕದಡಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!