ಮೇಷ
ಹೊರಾಂಗಣ ಚಟುವಟಿಕೆಯಲ್ಲಿ ಹೆಚ್ಚು ನಿರತರಾಗುವಿರಿ. ಕೌಟುಂಬಿಕ ಸಮಾಧಾನ. ವೃತ್ತಿಯಲ್ಲಿ ಕೆಲವರು ನಿಮಗೆ ವಿರುದ್ಧವಾಗಿ ವರ್ತಿಸಿಯಾರು.
ವೃಷಭ
ಇತರರ ಖಾಸಗಿ ವಿಷಯದಲ್ಲಿ ಅನವಶ್ಯ ಆಸಕ್ತಿ ತೋರದಿರಿ. ಅದು ದೊಡ್ಡ ಕಲಹಕ್ಕೆ ಕಾರಣವಾದೀತು. ವೃತ್ತಿಯಲ್ಲಿ ಸಹಕಾರದ ಕೊರತೆ ಎದುರಿಸುವಿರಿ.
ಮಿಥುನ
ಹೊಟ್ಟೆ ನೋವಿನಂಥ ಸಮಸ್ಯೆ ಕಾಡಬಹುದು. ತುಸು ಎಚ್ಚರ ವಹಿಸಿ. ಸಂಗಾತಿ ಜತೆಗೆ ಭಿನ್ನಾಭಿಪ್ರಾಯ ಉಂಟಾದೀತು. ಮುಕ್ತ ಮಾತು ಒಳ್ಳೆಯದು.
ಕಟಕ
ನಿಮ್ಮ ಕಾರ್ಯತಂತ್ರ ಇತರರ ಜತೆ ಹಂಚಿಕೊಳ್ಳದಿರಿ. ಆಪ್ತರೊಬ್ಬರ ಕುರಿತು ಗಾಢ ಭಾವನೆ ಕಾಡಲಿದೆ. ಅಗಲಿಕೆಯ ನೋವು ಉಂಟಾಗಬಹುದು.
ಸಿಂಹ
ಆಸ್ತಿಪಾಸ್ತಿಯಲ್ಲಿ ಹಣ ಹೂಡುವಾಗ ನಷ್ಟ ಉಂಟಾಗದಂತೆ ಎಚ್ಚರ ವಹಿಸಿ. ಕೌಟುಂಬಿಕ ಅಸಮಾಧಾನ. ಬಂಧುಗಳ ಜತೆ ಮುನಿಸು ಸಂಭವ.
ಕನ್ಯಾ
ಕ್ಷಿಪ್ರ ಲಾಭದ ಹಣಕಾಸು ಯೋಜನೆಗೆ ಮರುಳಾಗಬೇಡಿ. ಅದರಿಂದ ನಷ್ಟ ಮಾಡಿಕೊಳ್ಳುವಿರಿ. ವೃತ್ತಿಯಲ್ಲಿ ನಿಮ್ಮ ಘನತೆ ಹೆಚ್ಚಲಿದೆ.
ತುಲಾ
ಉದಾಸೀನತೆ ಬಿಡಿ. ಉತ್ಸಾಹ ತುಂಬಿಕೊಂಡು ಕಾರ್ಯವೆಸಗಿ. ವಿದ್ಯಾರ್ಥಿಗಳಿಗೆ ಇದು ಹೆಚ್ಚು ಅನ್ವಯ. ಹೊಸ ವ್ಯವಹಾರ, ಯೋಜನೆಗೆ ಸೂಕ್ತ ಕಾಲ.
ವೃಶ್ಚಿಕ
ಆರ್ಥಿಕ ಸ್ಥಿರತೆ. ಉಳಿತಾಯಕ್ಕೆ ಅವಕಾಶ. ಸಾಂಸಾರಿಕವಾಗಿ ನೆಮ್ಮದಿ, ಸಂತೋಷ. ಸ್ವಂತ ಉದ್ಯೋಗ ಹೊಂದಿದವರಿಗೆ ಆದಾಯ ಹೆಚ್ಚಳ.
ಧನು
ನಿಮಗೆ ಇಷ್ಟವಿಲ್ಲದ ವ್ಯಕ್ತಿಯನ್ನು ದೂರ ಇರಿಸುವುದೇ ಒಳ್ಳೆಯದು. ಇಲ್ಲವಾದರೆ ನಿಮ್ಮ ಮನಶ್ಯಾಂತಿ ಹಾಳಾಗಲಿದೆ. ಆರ್ಥಿಕ ಬಿಕ್ಕಟ್ಟು.
ಮಕರ
ಈ ದಿನ ಆರ್ಥಿಕ ಲಾಭ ನಿಮಗಾಗಲಿದೆ. ವ್ಯವಹಾರದಲ್ಲಿ ಪ್ರಗತಿ. ಖಾಸಗಿ ವಿಚಾರದಲ್ಲಿ ಉಂಟಾಗಿದ್ದ ಒತ್ತಡ, ಬಿಕ್ಕಟ್ಟು ಪರಿಹಾರ ಕಾಣುವುದು.
ಕುಂಭ
ಇತರರಿಗೆ ನೆರವು ನೀಡುವುದಕ್ಕೆ ಆದ್ಯತೆ ಕೊಟ್ಟು ನಿಮ್ಮ ಹಿತಾಸಕ್ತಿ ಕಡೆಗಣಿಸುವಿರಿ. ಎಚ್ಚರಗೊಳ್ಳಿ, ಮೊದಲು ನಿಮ್ಮ ಏಳಿಗೆಗೆ ಗಮನ ಕೊಡಿ.
ಮೀನ
ಎಲ್ಲ ಸರಿಯಾಗಿದ್ದರೂ ಮನಸ್ಸಿನಲ್ಲಿ ಕೊರಗು. ನಿಮಗೆ ಸಂಬಂಧ ಪಡದ ವಿಚಾರದಲ್ಲಿ ಅತಿಯಾಗಿ ಭಾವುಕರಾಗದಿರಿ. ಸ್ಥಿತಪಜ್ಞತೆ ಒಳಿತು.