ದಿನಭವಿಷ್ಯ: ಕೌಟುಂಬಿಕ ಶಾಂತಿ ಕೆಡಿಸುವ ಸನ್ನಿವೇಶ ಉಂಟಾದೀತು..

ಮೇಷ
ಗ್ರಹಗತಿ ಇಂದು ನಿಮಗೆ ಪೂರಕವಾಗಿದೆ. ಕಾರ್ಯದಲ್ಲಿ ಯಶಸ್ಸು. ವೃತ್ತಿ ಸಂಬಂಧಿತ ಸಮಸ್ಯೆಗಳು ಪರಿಹಾರ. ಕೌಟುಂಬಿಕ ಉದ್ವಿಗ್ನತೆ ನಿವಾರಣೆ, ನೆಮ್ಮದಿ.

ವೃಷಭ
ಎಲ್ಲರೊಂದಿಗೆ ಚೆನ್ನಾಗಿ ಹೊಂದಿಕೊಳ್ಳುವ ನಿಮ್ಮ ಸ್ವಭಾವ ಸಮಸ್ಯೆ ಪರಿಹಾರಕ್ಕೆ ನೆರವು ನೀಡುವುದು. ವೃತ್ತಿಯಲ್ಲಿ  ಇತರರ ಸಹಕಾರ ದೊರಕುವುದು.

ಮಿಥುನ
ಕೆಲಸದ ಹೊರೆಯನ್ನು ನೀವೊಬ್ಬರೆ ಹೊತ್ತುಕೊಳ್ಳದೆ ಅದನ್ನು ಇತರರ ಜತೆಗೂ ಹಂಚಿಕೊಳ್ಳಿ. ಭಿನ್ನಮತ ನಿವಾರಿಸಿಕೊಳ್ಳಿ. ಹೊಂದಾಣಿಕೆ ಮುಖ್ಯ.

ಕಟಕ
ಕುಟುಂಬದ ಹಿತಾಸಕ್ತಿ ಕುರಿತು ಹೆಚ್ಚು ಆಸ್ಥೆ ತೋರಿ. ಅವರ ಬೇಕು ಬೇಡ ಆಲಿಸಿರಿ. ಅವರು ತಮ್ಮ ಸಮಸ್ಯೆ ನಿಮಗೆ ಹೇಳದೆ ಕೊರಗುತ್ತಿರಬಹುದು.

ಸಿಂಹ
ಮನಸ್ಸಿನಲ್ಲೇ ಗೋಪುರ ಕಟ್ಟುವುದನ್ನು ಬಿಡಿ. ಸರಿಯಾಗಿ ಕಾರ್ಯ ನಿರ್ವಹಿಸದೆ ಒಳ್ಳೆಯ ಫಲ ಸಿಗಲಾರದು.  ನೀವು ಬಯಸಿದ್ದು ಸಿಗದೆ ನಿರಾಶೆ.

ಕನ್ಯಾ
ಕೌಟುಂಬಿಕ ಶಾಂತಿ ಕೆಡಿಸುವಂತಹ ಸನ್ನಿವೇಶ ಉಂಟಾದೀತು. ನಿಮ್ಮನ್ನು ಕಂಡರೆ ಆಗದವರು ಇಂತಹ ಪ್ರಯತ್ನ ನಡೆಸಿಯಾರು. ಎಚ್ಚರದಿಂದ ಇರಿ.

ತುಲಾ
ವ್ಯವಹಾರದಲ್ಲಿ ಕೆಲವು ಅಡ್ಡಿಗಳು. ಅದನ್ನು ನಿಭಾಯಿಸಲು ನೀವು ಸಾಕಷ್ಟು ಪ್ರಯತ್ನ ಪಡಬೇಕಾಗುವುದು. ಕೆಲವರ ಅಸಹಕಾರವೂ ಕಾಡುತ್ತದೆ.

ವೃಶ್ಚಿಕ
ಕೆಲಸದ ಒತ್ತಡದ ನಡುವೆಯೂ ಬಿಡುವು ಮಾಡಿಕೊಂಡು ಕುಟುಂಬಸ್ಥರ ಜತೆ ಸಮಯ  ಕಳೆಯಿರಿ. ಅವರ ಬೇಕುಬೇಡಗಳನ್ನು ಆಲಿಸಿರಿ.

ಧನು
ದಿನವಿಡೀ ಕೆಲಸದ ಒತ್ತಡ. ಅದರ ಮಧ್ಯೆಯೇ ಭಾವನೆಗಳ ಏರಿಳಿತವನ್ನೂ ಅನುಭವಿಸುವಿರಿ. ಸಣ್ಣ ವಿಷಯಕ್ಕೂ ರೇಗಲು ಹೋಗದಿರಿ.

ಮಕರ
ನಿಮಗಾಗದವರ ತಂಟೆಗಳಿಗೆ ಪ್ರತಿಕ್ರಿಯೆ ತೋರಲು ಹೋಗದಿರಿ. ಅವರ ಪತನಕ್ಕೆ ಅವರೇ ಕಾರಣರಾಗುವರು. ನಿಮ್ಮ ಹಾದಿಗೆ ಒಡ್ಡಿದ ವಿಘ್ನ ನಿವಾರಣೆ ಖಚಿತ.

ಕುಂಭ
ಆತ್ಮವಿಶ್ವಾಸ ಹೆಚ್ಚು. ಅದರಿಂದಾಗಿ ಕಠಿಣ ಕಾರ್ಯವನ್ನೂ ಸಮರ್ಥವಾಗಿ ನಿಭಾಯಿಸುವಿರಿ. ಕೌಟುಂಬಿಕ ವಿಚಾರದಲ್ಲಿ ಚಿಂತೆ ಅನವಶ್ಯ.

ಮೀನ
ವೃತ್ತಿಯಲ್ಲಿ ಹಿನ್ನಡೆ ಅನುಭವಿಸುವಿರಿ. ಪ್ರಮುಖ ಕಾರ್ಯಕ್ಕೆ ನಿಮ್ಮನ್ನು ಕಡೆಗಣಿಸಬಹುದು. ಕೊರಗುತ್ತಾ ಕೂರದಿರಿ. ಪ್ರಯತ್ನ ಪಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!