ದಿನಭವಿಷ್ಯ: ಮನಸ್ಸಿಗೆ ನೋವು ಸಂಭವಿಸುವ ಘಟನೆ ನಡೆಯಲಿದೆ! ಧೈರ್ಯವಾಗಿರಿ

ಮೇಷ
ಕೌಟುಂಬಿಕ ಪರಿಸ್ಥಿತಿಗೆ ಇಂದು ಆದ್ಯತೆ ಕೊಡುವುದು ಒಳಿತು. ಮನೆಯೊಳಗಿನ ಕೆಲವು ವಿಷಯಗಳನ್ನು ಸರಿಪಡಿಸಲು ಮುಂದಾಗಿರಿ.

ವೃಷಭ
ಮನಸ್ಸಿಗೆ ನೋವು ತರುವ ಬೆಳವಣಿಗೆ ಸಂಭವಿಸುವುದು. ಅದಕ್ಕೆ ಇತರರು ನಿಮ್ಮ ಮೇಲೆ ತೋರುವ ನಿರಾಸಕ್ತಿಯೂ ಕಾರಣವಾದೀತು.

ಮಿಥುನ
ಕೆಲವರನ್ನು ಮೆಚ್ಚಿಸಲು ಹೋಗಿ, ನಿಮ್ಮ ಆಪ್ತರನ್ನೇ ನೋವಿಗೆ ತಳ್ಳಬೇಡಿ. ಅವರ ಭಾವನೆಯನ್ನೂ ಅರ್ಥ ಮಾಡಿಕೊಳ್ಳಿ. ಆರ್ಥಿಕವಾಗಿ ಒತ್ತಡ ಹೆಚ್ಚು.

ಕಟಕ
ಮುಂಜಾನೆಯಿಂದಲೆ ನಿಮ್ಮನ್ನು ಜಡತ್ವ ಆವರಿಸುವುದು. ಕಾರ್ಯದಲ್ಲಿ ನಿರುತ್ಸಾಹ. ಮುಖ್ಯ ಕೆಲಸಗಳೂ ಪೂರ್ಣ ಗೊಳ್ಳದೆ ಬಾಕಿ ಉಳಿಯಬಹುದು.

ಸಿಂಹ
ಹೊಸ ವ್ಯವಹಾರ ಆರಂಭಿಸುವ ಮುನ್ನ ಸರಿಯಾದ ಯೋಜನೆ ಹಾಕಿಕೊಳ್ಳಿ. ಸಹೋದ್ಯೋಗಿಗಳ ಜತೆ ಮನಸ್ತಾಪ, ವಾಗ್ವಾದ ನಡೆಯಬಹುದು.

ಕನ್ಯಾ
ಕೆಲಸದ ಕುರಿತಂತೆ ಪೂರ್ಣ ಕಾಳಜಿಯಿರಲಿ. ಅರೆಮನಸ್ಸಿನ ಕಾರ್ಯ ಮಾಡಬೇಡಿ. ಬಂಧುಗಳಿಂದ ನಿಮಗೆ ಹರ್ಷ ತರುವ ಸುದ್ದಿ ಬರಬಹುದು.

ತುಲಾ
ಭಾವನಾತ್ಮಕ ಸಂಘರ್ಷ ಎದುರಿಸುವಿರಿ. ಸಂಕೀರ್ಣ ವಿಷಯದಲ್ಲಿ ಸ್ಪಷ್ಟ ನಿಲುವು ತೆಗೆದುಕೊಳ್ಳಲಾಗದ ಸಂದಿಗ್ಧತೆ. ಯೋಚಿಸಿ ಹೆಜ್ಜೆಯಿಡಿ.

ವೃಶ್ಚಿಕ
ನಿಮ್ಮ ಸುತ್ತಲಿನವರ ವರ್ತನೆ ನಿಮ್ಮ ಮನಸ್ಥಿತಿಯ ಮೇಲೆ ಗಾಢ ಪರಿಣಾಮ ಬೀರುವುದು. ಮನಶ್ಯಾಂತಿ ಕಲಕಬಹುದು.

ಧನು
ವೃತ್ತಿಯಲ್ಲಿ ಏರುಪೇರು ಅನುಭವಿಸುವಿರಿ. ಕೆಲವು ಬೆಳವಣಿಗೆ ನಿಮಗೆ ಪೂರಕವಾಗಿ ಸಾಗಲಾರದು. ಹತಾಶೆ ಬೇಡ. ಬೇಗನೆ ಎಲ್ಲ ಸರಿಹೋಗುವುದು.

ಮಕರ
ಕೆಲವು ಸಂಗತಿಗಳು ನೀವು ಬಯಸಿದಂತೆ ಸಾಗುವುದಿಲ್ಲ.  ಇದು ನಿಮ್ಮನ್ನು ಹತಾಶೆಗೆ ದೂಡಬಹುದು. ಆದರೆ ನಿಮ್ಮ ಉತ್ಸಾಹ ಕಳಕೊಳ್ಳದಿರಿ.

ಕುಂಭ
ಆಪ್ತರೆನಿಸಿದವರೇ ನಿಮ್ಮನ್ನು ದೂರ ಬಹುದು. ಅವರ ಅವಕೃಪೆಗೆ ತುತ್ತಾಗುವಿರಿ. ನಿಮ್ಮ ನಡತೆಯನ್ನೂ ಪರಾಮರ್ಶೆಗೆ ಒಡ್ಡಿಕೊಳ್ಳಿ.

ಮೀನ
ನೆರೆಕರೆಯಲ್ಲಿ ವಾಗ್ವಾದ – ಬಾಂಧವ್ಯ ಕೆಡಬಹುದು. ನಿಮ್ಮ ಸಹನೆ ಕಳಕೊಳ್ಳದಿರಿ. ಕೌಟುಂಬಿಕ ಬೇಡಿಕೆ
ಗಳು ನಿರೀಕ್ಷೆಯನ್ನು ಮೀರಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!