Monday, October 20, 2025

ದಿನಭವಿಷ್ಯ: ವೃತ್ತಿಯಲ್ಲಿ ಫಲಪ್ರದ ದಿನ, ಆರ್ಥಿಕ ಉನ್ನತಿ ಹೊಂದುವಿರಿ

ಮೇಷ
ಅಧಿಕ ಒತ್ತಡ, ಹೆಚ್ಚು ಹೊಣೆಗಾರಿಕೆ. ಅದನ್ನು ಸರಿಯಾಗಿ ನಿಭಾಯಿಸಲು ಸಮರ್ಥರಾಗುವಿರಿ. ದಿನದಂತ್ಯಕ್ಕೆ ಸಂತೃಪ್ತಿ. ಕೌಟುಂಬಿಕ ಸಾಂತ್ವನ.  
ವೃಷಭ
ವೃತ್ತಿಯಲ್ಲಿ ಫಲಪ್ರದ ದಿನ. ಆರ್ಥಿಕ ಉನ್ನತಿ.  ಕುಟುಂಬದ ಜತೆ ಉತ್ತಮ ಹೊಂದಾಣಿಕೆ. ಧಾರ್ಮಿಕ ಕಾರ್ಯದಲ್ಲಿ ಭಾಗಿ, ಆತ್ಮೀಯರ ಭೇಟಿ.  
ಮಿಥುನ
ವ್ಯವಹಾರದಲ್ಲಿ
ಇಚ್ಛಿತ ಫಲ. ಉದ್ಯೋಗ ಬಡ್ತಿ ಸಂಭವ. ಆರ್ಥಿಕ ಲಾಭ. ಕೌಟುಂಬಿಕ ಉದ್ವಿಗ್ನತೆ ಶಮನ. ಆಪ್ತರ ಸಂಗದಲ್ಲಿ ಮನಶ್ಯಾಂತಿ.
ಕಟಕ
ನಿರಾಳ ದಿನ. ಕೆಲಸದ ಒತ್ತಡ ಇಲ್ಲ. ಧನಪ್ರಾಪ್ತಿ. ಕುಟುಂಬದ ಆತ್ಮೀಯರ ಜತೆ ಕಾಲ ಕಳೆಯಿರಿ. ಹಿರಿಯರು ಆರೋಗ್ಯದ ಬಗ್ಗೆ ಎಚ್ಚರವಿರಬೇಕು.
ಸಿಂಹ
ಉತ್ಸಾಹದ ದಿನ. ಸಮಾರಂಭದಲ್ಲಿ ಭಾಗಿ. ಆತ್ಮೀಯರ ಜತೆ ಕಾಲಕ್ಷೇಪ. ಇಚ್ಛಿತ ಕಾರ್ಯ ಸಂಪೂರ್ಣ. ಧನಾಗಮ.  
ಕನ್ಯಾ
ವೃತ್ತಿಯಲ್ಲಿ ಉತ್ಸಾಹ. ಒತ್ತಡ ಕಡಿಮೆ. ಆದರೆ ಆರ್ಥಿಕ ಒತ್ತಡ ಬಾಽಸಲಿದೆ. ಖರ್ಚು ಅಽಕ. ಬೆನ್ನು ನೋವು ಕಾಡಬಹುದು.
ತುಲಾ
ವೈಯಕ್ತಿಕ ಕೆಲಸದ ಜತೆಗೇ ಸಾಮಾಜಿಕ ಹೊಣೆಗಾರಿಕೆ. ತೀರಾ ಬಸವಳಿಯುವಿರಿ. ಧಾರ್ಮಿಕ ಕಾರ್ಯದ ಜವಾಬ್ದಾರಿ.    
ವೃಶ್ಚಿಕ
ಕೆಲಸದ ಒತ್ತಡ ಇದ್ದರೂ ನಿಮ್ಮ ಉತ್ಸಾಹಕ್ಕೆ ಭಂಗವಿಲ್ಲ. ಸಂಗಾತಿ ಜತೆಗೆ ಉತ್ತಮ ಹೊಂದಾಣಿಕೆ. ಸಮಾರಂಭದಲ್ಲಿ ಭಾಗಿಯಾಗುವ ಅವಕಾಶ.    
ಧನು
ಗ್ರಹಗತಿ ನಿಮಗೆ ಪೂರಕವಾಗಿದೆ. ಒಳಿತು ಸಂಭವಿಸಲಿದೆ. ಕುಟುಂಬಸ್ಥರೊಬ್ಬರ ಸಲಹೆಗೆ ಕಿವಿಗೊಡಿ. ಬಂಧುಗಳ ಸಹಕಾರ.
ಮಕರ
 ಹೆಚ್ಚು ಹೊಣೆ ನಿಮ್ಮ ಮೇಲೆ ಬೀಳಲಿದೆ. ಇತರರ ಅಸಹಕಾರ. ಹಿತೈಷಿಗಳ ಒಳಿತಿಗೆ ಗಮನ ಕೊಡಿ. ಅವರನ್ನು ಕಡೆಗಣಿಸಬೇಡಿ.  ಆರ್ಥಿಕ ಒತ್ತಡ.
ಕುಂಭ
ಸಂತೋಷ, ಸಂಭ್ರಮದ ದಿನವಿದು. ನೀವು ಬಯಸಿದ್ದು ಈಡೇರಲಿದೆ. ಕಾಡುವ ಚಿಂತೆಗೆ ಪರಿಹಾರ ದೊರಕಲಿದೆ.  
 ಮೀನ
ಖಾಸಗಿ ಬದುಕಿಗೆ ಹೆಚ್ಚು ಗಮನ ಕೊಡಿ. ಇತರರ ಮನಸ್ಸಿಗೆ ನೋವು ಕೊಡಬೇಡಿ. ಖರ್ಚು ನಿಯಂತ್ರಣ ಅವಶ್ಯ.  ಕೌಟುಂಬಿಕ ಸಹಕಾರ.

error: Content is protected !!